ETV Bharat / sitara

ರಣಬೀರ್ ಮನೆಯಲ್ಲಿ ಆಲಿಯಾ ಭಟ್.. ಫ್ಯಾಮಿಲಿ ಮೂಡ್​ನ ಫೋಟೋಗಳು ವೈರಲ್​

author img

By

Published : Jun 28, 2021, 5:35 PM IST

Alia Bhatt
ನಟಿ ಆಲಿಯಾ ಭಟ್

ಗಂಗುಬಾಯಿ ಕಥಿಯಾವಾಡಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ತನ್ನ ಬಾಯ್​ಫ್ರೆಂಡ್​ ರಣಬೀರ್ ಕಪೂರ್ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.

ಹೈದರಾಬಾದ್​​: ಬಾಲಿವುಡ್​ ಲವ್ ಬರ್ಡ್ಸ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಬಿಡುವಿಲ್ಲದ ಶೂಟಿಂಗ್​ ಶೆಡ್ಯೂಲ್​​ ಮಧ್ಯೆಯೂ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದಿದ್ದಾರೆ. ರಣಬೀರ್​ ಮತ್ತು ಅವರ ತಾಯಿ ನೀತು ಕಪೂರ್, ಸಹೋದರಿ ರಿಧಿಮಾ ಕಪೂರ್ ಸಾಹ್ನಿ ಮತ್ತು ಸಮೈರಾ ಅವರೊಂದಿಗೆ ಆಲಿಯಾ ಫ್ಯಾಮಿಲಿ ಮೂಡ್​​ನಲ್ಲಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

Alia Bhatt
ರಣಬೀರ್​ ಫ್ಯಾಮಿಲಿ ಆಲಿಯಾ ಭಟ್

ಸೋಮವಾರ, ಆರ್ಕೆ ರಣಬೀರ್ ಕಪೂರ್ ಸಹೋದರಿ ರಿಧಿಮಾ ತಮ್ಮ ಕುಟುಂಬದೊಂದಿಗೆ ಆಲಿಯಾ ಕಳೆದ ಸಮಯದ ಫೋಟೋಗಳನ್ನು ಇನ್ಸ್​​ಟಾಗ್ರಾಮ್​ ರೀಲ್ಸ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ನೀತು ಕಪೂರ್, ಸಹೋದರಿ ರೋಧಿಮಾ ಕಪೂರ್ ಸಾಹ್ನಿ ಮತ್ತು ಸಮೈರಾ ಅವರೊಂದಿಗೆ ಆಲಿಯಾ ಕಾಣಿಸಿಕೊಂಡಿದ್ರೆ, ಮತ್ತೊಂದು ಫೋಟೋದಲ್ಲಿ ಇಷ್ಟು ಜನ ಮಹಿಳಾ ಮಣಿಗಳ ನಡುವೆ ​ರಣಬೀರ್​ ಕಪೂರ್​ ಫೋಟೋಗೆ ಪೋಸ್​ ನೀಡಿದ್ದಾರೆ.

ಶೀಘ್ರದಲ್ಲೇ ರಣಬೀರ್​ ಜೊತೆ ಆಲಿಯಾ ಹಸೆಮಣೆ ಏರ್ತಾರೆ ಎಂಬ ಮಾತುಗಳು ಹರಿದಾಡ್ತಿವೆ. ಈ ಹಿಂದೆ ಆಲಿಯಾ ಅವರ ಹುಟ್ಟುಹಬ್ಬದ ಕೆಲವು ವಿಶೇಷ ಕ್ಷಣಗಳ ಫೋಟೋಸ್​ ಅನ್ನು ನೀತು ಹಂಚಿಕೊಂಡಿದ್ದರು. ಇತ್ತೀಚೆಗೆ ರಣಬೀರ್​ ಮನೆಯಲ್ಲಿನ ಎಲ್ಲಾ ಸಂಭ್ರಮದಲ್ಲೂ ಆಲಿಯಾ ಕಾಣಿಸಿಕೊಳ್ಳುತ್ತಿದ್ದು, ಪ್ರಿಯಕರ ರಣಬೀರ್​ ಕುಟುಂಬಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

Alia Bhatt
ರಣಬೀರ್​ ಫ್ಯಾಮಿಲಿ ಆಲಿಯಾ ಭಟ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.