ETV Bharat / science-and-technology

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ iQOO Z7 5G; ಇಲ್ಲಿದೆ ಈ ಸ್ಮಾರ್ಟ್​ಫೋನ್​ನ ವಿಶೇಷತೆ

author img

By

Published : Mar 18, 2023, 3:18 PM IST

iQOO Z7 5G set to launch in the Indian market; Here is the specialty of this smartphone
iQOO Z7 5G set to launch in the Indian market; Here is the specialty of this smartphone

ಮೊದಲ ಬಾರಿಗೆ ಈ ಸ್ಮಾರ್ಟ್​​ ಫೋನ್​ನಲ್ಲಿ 64MP OIS ಅಲ್ಟ್ರಾ-ಸ್ಟೇಬಲ್ ಕ್ಯಾಮೆರಾದ ವೈಶಿಷ್ಟ್ಯವನ್ನು ಹೊಂದಿರುವುದು ವಿಶೇಷವಾಗಿದೆ.

ಚೀನಾ ಒಡೆತನದ ವಿವೋನ iQOO ಮೊಬೈಲ್​ ಅತ್ಯಾಧುನಿಕ ಸೌಕರ್ಯವುಳ್ಳ, ಬಜೆಟ್​ ಫ್ರೆಂಡ್ಲಿಯಾಗಿರುವ ಹೊಸ ಸ್ಮಾರ್ಟ್‌ಫೋನ್ iQOO Z7 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಮಾರ್ಚ್​ 21ರಂದು ಮಾರತದ ಮಾರುಕಟ್ಟೆಗೆ ಈ ಫೋನ್​ ಬರಲಿದ್ದು, ಈ ಫೋನ್​​ MediaTek Dimensity 920 5G ಪ್ರೊಸೆಸರ್‌ ಚಿಪ್​ನಿಂದ ಚಾಲಿತವಾಗಲಿದೆ ಎಂದು ಕಂಪನಿ ತಿಳಿಸಿದೆ.

ಈ ಸ್ಮಾರ್ಟ್​ಫೋನ್​ ರೆಡ್​ಮಿ ನೋಟ್​ 12 ಸರಣಿ ಮತ್ತು ರಿಯಲ್​ಮಿ 10 ಸರಣಿಗೆ ಸ್ಪರ್ಧೆಯಾಗಲಿದೆ ಎಂಬ ನಿರೀಕ್ಷೆ ಇದೆ.

ಬಜೆಟ್​ ಫ್ರೆಂಡ್ಲಿ: ಭಾರತದಲ್ಲಿ ಮೆಟ್ರೋಪಾಲಿಟನ್​ ಸೇರಿದಂತೆ ಅನೇಕ ನಗರಗಳಲ್ಲಿ ಈಗಾಗಲೇ 5ಜಿ ಇದ್ದು, ಈ ಬಳಕೆದಾರರಿಗೆ ಸ್ನೇಹಿಯಾಗಿ ಈ ಹೊಸ ಸ್ಮಾರ್ಟ್​​ಫೋನ್​ ಇರಲಿದೆ. 17,499 ರಿಂದ ಫೋನ್​ ದರ ಪ್ರಾರಂಭವಾಗಲಿದೆ. ಈ ಫೋನ್​ಗಳನ್ನು ಬಳಕೆದಾರರು ಅಮೆಜಾನ್​ ಅಥವಾ iQOO ಇ-ಸ್ಟೋರ್‌ ಮೂಲಕ ಖರೀದಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ. ಕಂತಿನ ಆಧಾರದ ಮೇಲೆ ಕೂಡ ಈ ಫೋನ್​ ಕೊಳ್ಳುವ ಸೌಲಭ್ಯವನ್ನು ನೀಡಲಾಗಿದೆ.

ಈ ಹೊಸ ಸ್ಮಾರ್ಟ್​ ಫೋನ್​ ಎರಡು ಬಣ್ಣದಲ್ಲಿ ಲಭ್ಯವಿದೆ. ಆಕಾಶ ನೀಲಿಯ ನಾರ್ವೆ ಬ್ಲೂ ಮತ್ತು ಪೆಸಿಫಿಕ್ ನೈಟ್​ ಬಣ್ಣ ಇದರ ಅಂದ ಹೆಚ್ಚಿಸಲಿದೆ.

ಅತ್ಯತ್ತಮ ಕ್ಯಾಮರಾ: ಈ ಮೊಬೈಲ್​ನ ಮತ್ತೊಂದು ವಿಶೇಷ ಎಂದರೆ, ಇದೇ ಮೊದಲ ಬಾರಿಗೆ ಈ ಸ್ಮಾರ್ಟ್​​ ಫೋನ್​ನಲ್ಲಿ 64MP OIS ಅಲ್ಟ್ರಾ-ಸ್ಟೇಬಲ್ ಕ್ಯಾಮರಾ. ಈ ವೈಶಿಷ್ಟ್ಯವನ್ನು ಮೊಬೈಲ್​ ಹೊಂದಿದ್ದು, ಉತ್ತಮ ಗುಣಮಟ್ಟದ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗಲಿದೆ. ಇದು ಡ್ಯೂಯಲ್​ ಕ್ಯಾಮರಾ ಸೆಟ್​ ಅಪ್​ ಅನ್ನು ಕೂಡ ಇದು ಹೊಂದಿದೆ‘

ಸ್ಮಾರ್ಟ್​ಫೋನ್​ ವೈಶಿಷ್ಟ್ಯ: ಇದು 44W ಫ್ಲ್ಯಾಶ್‌ಚಾರ್ಜ್, ಅಲ್ಟ್ರಾ ಗೇಮ್ ಮೋಡ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಮತ್ತು 1300 ನಿಟ್‌ಗಳ ಸ್ಕ್ರೀನ್ ಬ್ರೈಟ್‌ನೆಸ್‌ನೊಂದಿಗೆ ಅಲ್ಟ್ರಾ ಬ್ರೈಟ್ AMOLED ಡಿಸ್ಪ್ಲೇಯನ್ನು ಸಹ ಒದಗಿಸುತ್ತದೆ. ಹೊಸ ಸ್ಮಾರ್ಟ್‌ಫೋನ್ 4,85,000 ಕ್ಕಿಂತ ಹೆಚ್ಚು ಅತ್ಯುತ್ತಮ AnTuTu ಸ್ಕೋರ್​ನ ಬೆಂಚ್‌ಮಾರ್ಕ್‌ಗಳನ್ನು ಮೀರಿಸಿದೆ.

ಫೋನ್ ಆಂಡ್ರಾಯ್ಡ್ 13 ಅನ್ನು ಆಧರಿಸಿದ Funtouch OS 13 ಆಧಾರದ ಮೆಲೆ ಕಾರ್ಯಾಚರಣೆ ನಡೆಸಲಿದೆ. ಮೂರು ವರ್ಷದ ಭದ್ರಕಾ ಅಪ್ಡೇಟ್​ ಮತ್ತು ಎರಡು ವರ್ಷಗಳ ಆಂಡ್ರಾಯ್ಡ್​​ ಅಪರ್​ಡೆಟ್​ ಸೌಲಭ್ಯವನ್ನು ಇದು ಒದಗಿಸಲಿದೆ. ಇದು 120ವಾಟ್​ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯೊಂದಿಗೆ ಪ್ಯಾಕ್ ಮಾಡಲ್ಪಡುತ್ತದೆ.

ಕಳೆದೆರಡು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಮತ್ತೊಂದು ಸರಣಿ: ಜನವರಿಯಲ್ಲಿ ಕಂಪನಿಯು ಇತ್ತೀಚೆಗೆ iQOO 11 ಸರಣಿ ಮತ್ತು iQOO Neo 7 SE ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. iQOO 11 ಸರಣಿಯು ಭಾರತದಲ್ಲಿ ಜನವರಿಯಲ್ಲಿ ಬಿಡುಗಡೆಗೊಂಡಿತು. iQOO Neo7 SE ಮತ್ತು Neo7 5G ನಡುವಿನ ಪ್ರಮುಖ ವ್ಯತ್ಯಾಸ ಎಂದರೆNeo7 ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ಯನ್ನು ಹೊಂದಿದೆ.

ಇದನ್ನೂ ಓದಿ: ಸ್ಯಾಮ್​ಸಂಗ್ ಗ್ಯಾಲಕ್ಸಿ A54, A34 ಭಾರತದ ಮಾರುಕಟ್ಟೆಗೆ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.