ETV Bharat / bharat

ಸ್ಯಾಮ್​ಸಂಗ್ ಗ್ಯಾಲಕ್ಸಿ A54, A34 ಭಾರತದ ಮಾರುಕಟ್ಟೆಗೆ ಬಿಡುಗಡೆ

author img

By

Published : Mar 17, 2023, 5:02 PM IST

ಮುಂಚೂಣಿ ಸ್ಮಾರ್ಟ್​ಫೋನ್ ಕಂಪನಿ ಸ್ಯಾಮ್​ಸಂಗ್ ಭಾರತದಲ್ಲಿ ಎರಡು ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. Samsung Galaxy A54 5G ಮತ್ತು Galaxy A34 5G ಈಗ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿವೆ.

Samsung Galaxy phone VIDEO
Samsung Galaxy phone VIDEO

ಹೈದರಾಬಾದ್ : ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎ ಸರಣಿಯಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇತ್ತೀಚೆಗೆ ಜಾಗತಿಕವಾಗಿ ಜನಪ್ರಿಯವಾಗಿರುವ Samsung Galaxy A54 5G ಮತ್ತು Galaxy A34 5G ಈಗ ಭಾರತಕ್ಕೆ ಕಾಲಿಟ್ಟಿವೆ. ಆದರೆ, ಒಂದಿಷ್ಟು ಹೆಚ್ಚಿನ ಬೆಲೆಯೊಂದಿಗೆ ಇವು ಭಾರತದ ಮಾರುಕಟ್ಟೆಗೆ ಪ್ರವೇಶಿಸಿವೆ.

ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ A54 ಬೆಲೆಯನ್ನು 8GB/128GB ಬೇಸ್ ಮಾದರಿಗೆ ರೂ 38,999 ಮತ್ತು 8GB/256GB ಮುಂದಿನ ಮಾದರಿಗೆ ರೂ 40,999 ಎಂದು ನಿಗದಿಪಡಿಸಲಾಗಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G ಲೈಮ್, ಗ್ರ್ಯಾಫೈಟ್, ನೇರಳೆ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿವೆ. ಹಾಗೆಯೇ ಸ್ಯಾಮ್​ಸಂಗ್ ಗ್ಯಾಲಕ್ಸಿ A34 8GB/128GB ಬೇಸ್ ಮಾದರಿಗೆ ರೂ 30,999 ಆಗಿದ್ದರೆ, 8GB/256GB ಮಾದರಿಯ ಬೆಲೆ ರೂ 32,999 ಆಗಿದೆ. ಗ್ಯಾಲಕ್ಸಿ A34 5G ಲೈಮ್, ಗ್ರ್ಯಾಫೈಟ್, ನೇರಳೆ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಮಾರ್ಚ್ 16 ರಿಂದ ಮಾರ್ಚ್ 27 ರವರೆಗೆ ಮುಂಗಡ ಆರ್ಡರ್‌ಗಳಿಗೆ ಲಭ್ಯ ಇವೆ. ಭಾರತದಲ್ಲಿ ಮಾರ್ಚ್ 28 ರಿಂದ ಸ್ಯಾಮ್‌ಸಂಗ್ ಎಕ್ಸ್​ಕ್ಲೂಸಿವ್ ಮತ್ತು ಪಾರ್ಟನರ್ ಸ್ಟೋರ್​ಗಳು, ಸ್ಯಾಮ್​ಸಂಗ್ ಡಾಟ್ ಕಾಮ್ ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟವಾಗಲಿವೆ. ಗ್ಯಾಲಕ್ಸಿ A34 5G ಮತ್ತು A54 5G ಖರೀದಿಯ ಮೇಲೆ ಗ್ರಾಹಕರು ರೂ 3,000 ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ 2,500 ರೂ. ಸ್ಯಾಮ್‌ಸಂಗ್ ಅಪ್‌ಗ್ರೇಡ್ ಬೋನಸ್ ಪಡೆಯಬಹುದು. ಎರಡು ಫೋನ್‌ಗಳನ್ನು ಬುಕ್ ಮಾಡುವವರು 999 ರೂ.ಗೆ ಗ್ಯಾಲಕ್ಸಿ ಬಡ್ಸ್ ಲೈವ್ (Galaxy Buds Live) ಖರೀದಿಸಬಹುದು.

ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G ಇದು Exynos 1380 SoC ಮತ್ತು 8GB RAM ಹೊಂದಿದೆ. ಮೈಕ್ರೊ ಎಸ್‌ಡಿ ಹೈಬ್ರಿಡ್ ಸ್ಲಾಟ್ ಮೂಲಕ ವಿಸ್ತರಿಸಬಹುದಾದ 256 ಜಿಬಿ ಮೆಮೊರಿ ಸಾಮರ್ಥ್ಯ ಹೊಂದಿದೆ. 25W ಚಾರ್ಜಿಂಗ್ ಅನ್ನು ಬೆಂಬಲಿಸುವ 5,000 mAh ಬ್ಯಾಟರಿ ಇದರಲ್ಲಿದೆ. ಆದರೆ ಗ್ಯಾಲಕ್ಸಿ A54 ಬಾಕ್ಸ್‌ನಲ್ಲಿ ಅಡಾಪ್ಟರ್ ಇರುವುದಿಲ್ಲ.

ಇದರ ಮುಖ್ಯ ಕ್ಯಾಮೆರಾ 12 MP ಅಲ್ಟ್ರಾವೈಡ್ ಶೂಟರ್ ಮತ್ತು 5 MP ಮ್ಯಾಕ್ರೋ ಘಟಕ ಹೊಂದಿದೆ. A54 5G ಯಲ್ಲಿನ ಕ್ಯಾಮೆರಾ ವ್ಯವಸ್ಥೆಯು ಸ್ಯಾಮ್​ಸಂಗ್ ಗ್ಯಾಲಕ್ಸಿಯ ಪ್ರಮುಖ ನೈಟೋಗ್ರಫಿ ಮತ್ತು AI ಸಾಮರ್ಥ್ಯಗಳು ಮತ್ತು ವಿಡಿಯೋ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ (VDIS) ಅನ್ನು ಸಹ ಒಳಗೊಂಡಿದೆ. ಮುಂಭಾಗದಲ್ಲಿ, ಗ್ಯಾಲಕ್ಸಿ A54 5G 13 MP ಸೆಲ್ಫಿ ಕ್ಯಾಮೆರಾವನ್ನು ಆಯ್ಕೆ ಮಾಡುತ್ತದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ A34 5G ಇದು MediaTek Dimensity 1080 SoC ಹಾಗೂ 8GB RAM ಹೊಂದಿದೆ. ಮೈಕ್ರೊ ಎಸ್‌ಡಿ ಹೈಬ್ರಿಡ್ ಸ್ಲಾಟ್ ಮೂಲಕ ವಿಸ್ತರಿಸಬಹುದಾದ 256 ಜಿಬಿ ಮೆಮೊರಿ ಸ್ಟೋರೇಜ್ ಹೊಂದಿದೆ. ಗ್ಯಾಲಕ್ಸಿ A34 5G 5,000 mAh ಬ್ಯಾಟರಿ ಹೊಂದಿದೆ. ಬಾಕ್ಸ್‌ನಲ್ಲಿ ಯಾವುದೇ ಅಡಾಪ್ಟರ್ ಇಲ್ಲ. 25W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಮುಖ್ಯ ಕ್ಯಾಮೆರಾವನ್ನು 8 MP ಅಲ್ಟ್ರಾವೈಡ್ ಶೂಟರ್ ಮತ್ತು 5 MP ಮ್ಯಾಕ್ರೋ ಘಟಕದೊಂದಿಗೆ ಜೋಡಿಸಲಾಗಿದೆ. A34 5G ಯಲ್ಲಿನ ಕ್ಯಾಮೆರಾ ವ್ಯವಸ್ಥೆಯು ಸ್ಯಾಮ್​ಸಂಗ್ ಗ್ಯಾಲಕ್ಸಿಯ ಪ್ರಮುಖ ನೈಟೋಗ್ರಫಿ ಮತ್ತು AI ಸಾಮರ್ಥ್ಯಗಳು ಮತ್ತು ವೀಡಿಯೊ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ (VDIS) ಅನ್ನು ಸಹ ಒಳಗೊಂಡಿದೆ. ಮುಂಭಾಗದಲ್ಲಿ, ಇದು 13 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಇದನ್ನೂ ಓದಿ : ಸ್ಯಾಮ್​ಸಂಗ್ Galaxy A34, A54 5G ಮುಂದಿನ ವಾರ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.