ETV Bharat / international

ಭಾರತ ಬ್ರಿಟನ್ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಸುಧಾರಣೆಗೆ ಯತ್ನ: ಪ್ರಧಾನಿ ಅಭ್ಯರ್ಥಿ ಸುನಕ್

author img

By

Published : Aug 23, 2022, 6:09 PM IST

ಬ್ರಿಟನ್ ವಿದ್ಯಾರ್ಥಿಗಳು ಮತ್ತು ಕಂಪನಿಗಳು ಭಾರತಕ್ಕೆ ಸುಲಭವಾಗಿ ಪ್ರವೇಶ ಪಡೆಯುವಂತೆ ಪರಸ್ಪರ ದ್ವಿಮುಖ ವಿನಿಮಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಯತ್ನಿಸುವುದಾಗಿ ಬ್ರಿಟನ್ ಪ್ರಧಾನಿ ಹುದ್ದೆ ಅಭ್ಯರ್ಥಿ ರಿಷಿ ಸುನಕ್ ಹೇಳಿದ್ದಾರೆ.

ಭಾರತ ಬ್ರಿಟನ್ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಸುಧಾರಣೆಗೆ ಯತ್ನ: ಪ್ರಧಾನಿ ಅಭ್ಯರ್ಥಿ ಸುನಕ್
I want to make UK-India relationship more two-way: Rishi Sunak

ಲಂಡನ್: ಬ್ರಿಟನ್ ಮತ್ತು ಭಾರತದ ದ್ವಿಪಕ್ಷೀಯ ಸಂಬಂಧವನ್ನು ಬ್ರಿಟನ್ ವಿದ್ಯಾರ್ಥಿಗಳು ಮತ್ತು ಕಂಪನಿಗಳು ಭಾರತಕ್ಕೆ ಸುಲಭವಾಗಿ ಪ್ರವೇಶ ಪಡೆಯುವಂತೆ ಪರಸ್ಪರ ದ್ವಿಮುಖ ವಿನಿಮಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಯತ್ನಿಸುವುದಾಗಿ ಬ್ರಿಟನ್ ಪ್ರಧಾನಿ ಹುದ್ದೆ ಅಭ್ಯರ್ಥಿ ರಿಷಿ ಸುನಕ್ ಹೇಳಿದ್ದಾರೆ.

ಸೋಮವಾರ ಸಂಜೆ ಉತ್ತರ ಲಂಡನ್‌ನಲ್ಲಿ ಕನ್ಸರ್ವೇಟಿವ್ ಫ್ರೆಂಡ್ಸ್ ಆಫ್ ಇಂಡಿಯಾ (ಸಿಎಫ್‌ಐಎನ್) ಡಯಾಸ್ಪೊರಾ ಸಂಘಟನೆಯು ಪ್ರಚಾರ ಕಾರ್ಯಕ್ರಮ ಆಯೋಜಿಸಿತ್ತು. ಹೆಚ್ಚಾಗಿ ಬ್ರಿಟಿಷ್ ಭಾರತೀಯರಿದ್ದ ಸಭೆಯಲ್ಲಿ ನಮಸ್ತೆ, ಸಲಾಮ್, ಖೇಮ್ ಚೋ ಮತ್ತು ಕಿಡ್ಡಾದಂತಹ ಸಾಂಪ್ರದಾಯಿಕ ಶುಭಾಶಯಗಳೊಂದಿಗೆ ಜನರನ್ನು ಸುನಕ್ ಸ್ವಾಗತಿಸಿದರು. ಆಪ್ ಸಬ್ ಮೇರೆ ಪರಿವಾರ್ ಹೋ ಎಂದು ಹಿಂದಿಯಲ್ಲಿ ಸಹ ಅವರು ಮಾತನಾಡಿದರು.

ಯುಕೆ-ಭಾರತ ಸಂಬಂಧವು ಮುಖ್ಯವಾಗಿದೆ ಎಂಬುದು ನಮಗೆ ತಿಳಿದಿದೆ. ನಾವು ನಮ್ಮ ಎರಡು ದೇಶಗಳ ನಡುವಿನ ಬಾಂಧವ್ಯವನ್ನು ಪ್ರತಿನಿಧಿಸುತ್ತೇವೆ ಎಂದು ಅವರು CFIN ಸಹ-ಅಧ್ಯಕ್ಷೆ ರೀನಾ ರೇಂಜರ್ ಅವರ ದ್ವಿಪಕ್ಷೀಯ ಸಂಬಂಧಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಭಾರತದಲ್ಲಿ ವಸ್ತುಗಳನ್ನು ಮಾರಾಟ ಮಾಡಲು ಮತ್ತು ಕೆಲಸಗಳನ್ನು ಮಾಡಲು ಯುಕೆ ಅವಕಾಶದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ವಾಸ್ತವವಾಗಿ ನಾವು ಆ ಸಂಬಂಧವನ್ನು ವಿಭಿನ್ನವಾಗಿ ನೋಡಬೇಕಾಗಿದೆ. ಏಕೆಂದರೆ ಯುಕೆಯವರಾದ ನಾವು ಭಾರತದಿಂದ ಕಲಿಯಬಹುದಾದ ಅಗಾಧವಾದ ವಿಷಯವಿದೆ ಎಂದು ಅವರು ಹೇಳಿದರು.

ನಮ್ಮ ವಿದ್ಯಾರ್ಥಿಗಳು ಭಾರತಕ್ಕೆ ಪ್ರಯಾಣಿಸಲು ಮತ್ತು ಅಲ್ಲಿ ಶಿಕ್ಷಣ ಪಡೆಯುವುದನ್ನು ಸುಲಭವಾಗಿಸುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ನಮ್ಮ ಕಂಪನಿಗಳು ಮತ್ತು ಭಾರತೀಯ ಕಂಪನಿಗಳು ಒಟ್ಟಿಗೆ ಕೆಲಸ ಮಾಡುವುದು ಸಹ ಸುಲಭ. ಏಕೆಂದರೆ ಇದು ಕೇವಲ ಏಕಮುಖ ಸಂಬಂಧವಲ್ಲ, ಇದು ದ್ವಿಮುಖ ಸಂಬಂಧವಾಗಿದೆ ಎಂದು ಸುನಕ್ ಅಭಿಪ್ರಾಯಪಟ್ಟರು.

ಚೀನಾ ಮತ್ತು ಚೀನಿ ಕಮ್ಯುನಿಸ್ಟ್ ಪಕ್ಷವು ನಮ್ಮ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆಯನ್ನು ಒಡ್ಡುತ್ತಿದೆ. ಯಾವುದೇ ಸಂದೇಹ ಬೇಡ, ನಿಮ್ಮ ಪ್ರಧಾನ ಮಂತ್ರಿಯಾಗಿ ನಾನು ನಿಮ್ಮನ್ನು, ನಿಮ್ಮ ಕುಟುಂಬಗಳನ್ನು ಮತ್ತು ನಮ್ಮ ದೇಶವನ್ನು ಸುರಕ್ಷಿತವಾಗಿರಿಸಲು ಏನು ಬೇಕಾದರೂ ಮಾಡುತ್ತೇನೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.