ETV Bharat / entertainment

ಹನುಮಂತನ ಫಸ್ಟ್​ ಲುಕ್​ ಬಿಡುಗಡೆ​ ಮಾಡಿದ 'ಆದಿಪುರುಷ್​'

author img

By

Published : Apr 6, 2023, 12:17 PM IST

ಹನುಮ ಜಯಂತಿಯಂದೇ 'ಆದಿಪುರುಷ್​' ಚಿತ್ರತಂಡ ಹನುಮಂತನ ಫಸ್ಟ್​ ಲುಕ್​ ರಿಲೀಸ್​ ಮಾಡಿದೆ.

adipurush
ಆದಿಪುರುಷ್

ಹನುಮ ಜಯಂತಿಯ ಪ್ರಯುಕ್ತ 'ಆದಿಪುರುಷ್​' ಚಿತ್ರತಂಡ ಹೊಸ ಪೋಸ್ಟರ್​ ಬಿಡುಗಡೆ ಮಾಡಿದೆ. ಹನುಮಂತನ ಫಸ್ಟ್​ ಲುಕ್​ ರಿಲೀಸ್​ ಆಗಿದ್ದು, ಮರಾಠಿ ನಟ ದೇವದತ್ತ ನಾಗೆ ಹನುಮನಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್​ನಲ್ಲಿ ತಪಸ್ಸು ಮಾಡುತ್ತಿರುವ ಭಂಗಿಯಲ್ಲಿ ಹನುಮಂತ ಕುಳಿತಿದ್ದಾನೆ. ಅವನ ಹಿಂದೆ ನಟ ಪ್ರಭಾಸ್​ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಆದಿಪುರುಷ್​ ಸಿನಿಮಾವು ಜೂನ್​ 16 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿದೆ.

ಚಿತ್ರದಲ್ಲಿ ಪ್ರಭಾಸ್​ ರಾಮನ ಪಾತ್ರ ನಿರ್ವಹಿಸಿದರೆ, ಸೀತೆಯಾಗಿ ಕೃತಿ ಸನನ್​ ಮತ್ತು ಸನ್ನಿ ಸಿಂಗ್​ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಓಂ ರಾವತ್​ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಚಿತ್ರವನ್ನು ಟಿ ಸೀರಿಸ್​ ಬ್ಯಾನರ್​ ಅಡಿ ಭೂಷಣ್​ ಕುಮಾರ್​, ಕೃಷನ್​ ಕುಮಾರ್​, ಓಂ ರಾವತ್​, ಪ್ರಸಾದ್​ ಸುತಾರ್​ ಮತ್ತು ರಾಜೇಶ್​ ನಾಯರ್​ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ರಾಮನವಮಿಯಂದು ಚಿತ್ರದ ಹೊಸ ಪೋಸ್ಟರ್​ ಬಿಡುಗಡೆಯಾಗಿತ್ತು.

ಇದನ್ನೂ ಓದಿ: ಸಿನಿಮಾ ಲೋಕಕ್ಕೆ ಕಾಲಿಟ್ಟ ಬರಗೂರು ರಾಮಚಂದ್ರಪ್ಪನವರ ಮೊಮ್ಮಗ ಆಕಾಂಕ್ಷ್ ಬರಗೂರು

ಟೀಕೆಗೆ ಗುರಿಯಾದ ಆದಿಪುರುಷ್​: ನಟ ಪ್ರಭಾಸ್​ ಅಭಿನಯದ ಆದಿಪುರುಷ್​ ಸಿನಿಮಾಗೆ ಒಂದರಂತೆ ಹಿನ್ನೆಡೆ ಆಗುತ್ತಿದೆ. ಈ ಹಿಂದೆ ರಾಮನವಮಿಯಂದು ಬಿಡುಗಡೆಯಾದ ಪೋಸ್ಟರ್​ ಅಷ್ಟೊಂದು ಮೆಚ್ಚುಗೆ ಗಳಿಸಿರಲಿಲ್ಲ. ಅದಕ್ಕೂ ಮೊದಲು ರಿಲೀಸ್​ ಆಗಿದ್ದ ಟೀಸರ್​ಗೂ ಎಲ್ಲಾ ಕಡೆಯಿಂದಲೂ ಟೀಕೆಗಳು ಕೇಳಿ ಬಂದಿತ್ತು. ಚಿತ್ರಕ್ಕೆ ನೂರಾರು ಕೋಟಿ ಹಣವನ್ನು ಸುರಿಯಲಾಗಿದ್ದರೂ, ಆದಿಪುರುಷ್​ ಮೇಲೆ ಪ್ರೇಕ್ಷಕರಿಗಿದ್ದ ನಿರೀಕ್ಷೆ ಸುಳ್ಳಾಗಿತ್ತು. ಹನುಮಂತನ ವೇಷ ಭೂಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ರಾಮಾಯಣದಲ್ಲಿನ ಪಾತ್ರಧಾರಿಗಳನ್ನು ಬಿಂಬಿಸಲಾಗಿದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ವಿವಾದದಲ್ಲಿ ಮೋಹಕ ತಾರೆಗೆ ಸಿಕ್ತು ಜಯ

ಈ ಕಾರಣಕ್ಕಾಗಿ ಆದಿಪುರುಷ್ ಸಿನಿಮಾದ ಮೇಲೆ ವಕೀಲ ರಾಜ್ ಗೌರವ್ ಅವರು ದೆಹಲಿ ಹೈಕೋರ್ಟ್​ನಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಓಂ ರಾವುತ್ ವಿರುದ್ಧ ಅರ್ಜಿ ಸಲ್ಲಿಸಿ, ಸಿನಿಮಾ ಬಿಡುಗಡೆಯನ್ನು ಮುಂದೂಡುವಂತೆ ಕೋರಿದ್ದರು. ಮಾತ್ರವಲ್ಲದೇ 2021ರಲ್ಲಿ ‘ಆದಿಪುರುಷ್​' ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ವೇಳೆ ಪ್ರಭಾಸ್ ಮತ್ತು ಸೈಫ್ ಅಲಿಖಾನ್ ಸೆಟ್‌ನಲ್ಲಿ ಇರಲಿಲ್ಲ. ಬದಲಾಗಿ ನಿರ್ದೇಶಕ ಓಂ ರಾವುತ್ ಮತ್ತು ಇತರ ಕೆಲವರು ಮಾತ್ರ ಹಾಜರಿದ್ದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ಇಷ್ಟೆಲ್ಲಾ ಅಡೆತಡೆಗಳಿರುವ ಆದಿಪುರುಷ್​ ಸಿನಿಮಾ ನಿಗದಿತ ದಿನಾಂಕಕ್ಕೆ ಥಿಯೇಟರ್‌ಗೆ ಬರಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ.. ಸಿಸಿಬಿ ಹೆಗಲಿಗೆ ಪ್ರಕರಣದ ತನಿಖಾ ಜವಾಬ್ದಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.