ETV Bharat / entertainment

ಭೀಮ ಶೂಟಿಂಗ್ ಅಡ್ಡಕ್ಕೆ ಶಿವಣ್ಣ.. ದೊಡ್ಮನೆಯವರ ಕಾಲಿಗೆ ಬಿದ್ದ ದುನಿಯಾ ವಿಜಯ್

author img

By

Published : Oct 18, 2022, 1:59 PM IST

actor shivarajkumar visits Bheema shooting set
ಭೀಮ ಶೂಟಿಂಗ್ ಅಡ್ಡಕ್ಕೆ ಶಿವಣ್ಣ

ದುನಿಯಾ ವಿಜಯ್ ಅವರ ಭೀಮ ಶೂಟಿಂಗ್ ಅಡ್ಡಕ್ಕೆ ಶಿವಣ್ಣ ಸರ್​ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ.

ಬೆಂಗಳೂರು: 'ಭೀಮ'...ಟೈಟಲ್ ಹಾಗು ಮೇಕಿಂಗ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ದುನಿಯಾ ವಿಜಯ್ ಸಲಗ ಸಿನಿಮಾದ ದೊಡ್ಡ ಸಕ್ಸಸ್ ಬಳಿಕ ಆ್ಯಕ್ಷನ್ ಕಟ್ ಹೇಳುತ್ತಿರುವ ಮತ್ತೊಂದು ಮಾಸ್ ಸಿನಿಮಾ. ಈ ಸಿನಿಮಾ ಚಿತ್ರೀಕರಣಕ್ಕೂ ಮುನ್ನ 1.50ಕೋಟಿ ರೂಪಾಯಿಗೆ ಈ ಚಿತ್ರದ ಆಡಿಯೋ ರೈಟ್ಸ್ ಅನ್ನು ಆನಂದ್ ಆಡಿಯೋ ಸಂಸ್ಥೆ ಖರೀದಿಸುವ ಮೂಲಕ ಸುದ್ದಿಯಾಗಿತ್ತು. ಈಗ ದುನಿಯಾ ವಿಜಯ್ ಅವರ ಭೀಮ ಶೂಟಿಂಗ್ ಅಡ್ಡಕ್ಕೆ ಶಿವಣ್ಣ ಸರ್​ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ.

ಬೆಂಗಳೂರಿನ ಮನೆಯೊಂದರಲ್ಲಿ ಭೀಮ ಸಿನಿಮಾದ ಚಿತ್ರೀಕರಣವನ್ನು ವಿಜಯ್ ಮಾಡುತ್ತಿದ್ದಾರೆ. ಇಲ್ಲಿಗೆ ನಟ ಶಿವ ರಾಜ್​​ಕುಮಾರ್ ಭೀಮ ಚಿತ್ರದ ಶೂಟಿಂಗ್ ಸ್ಪಾಟ್​ಗೆ ಭೇಟಿ ನೀಡಿದ್ದಾರೆ. ‌ಈ ಸಮಯದಲ್ಲಿ ವಿಜಯ್ ಹಾಗು ನಿರ್ಮಾಪಕ ಕೃಷ್ಣ ಸಾರ್ಥಕ್ ಶಿವ ರಾಜ್​ಕುಮಾರ್ ಹಾಗು ಗೀತಾ ಶಿವರಾಜ್​ಕುಮಾರ್ ಅವರನ್ನು ರಿಸೀವ್ ಮಾಡಿಕೊಂಡರು.

ಭೀಮ ಶೂಟಿಂಗ್ ಅಡ್ಡಕ್ಕೆ ಶಿವಣ್ಣ

ಬಳಿಕ ಶಿವ ರಾಜ್​ಕುಮಾರ್ ಹಾಗು ಪತ್ನಿ ಗೀತಾ ಟೀ ಕುಡಿದು, ಶೂಟಿಂಗ್ ಹೇಗೆ ಸಾಗುತ್ತಿದೆ ಅನ್ನೋ ಬಗ್ಗೆ ವಿಚಾರಿಸಿದ್ದಾರೆ. ಕೊನೆಯಲ್ಲಿ ವಿಜಯ್ ಅವರು ಶಿವರಾಜ್​ಕುಮಾರ್ ಹಾಗು ಗೀತಾ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಬೀಳ್ಕೊಟ್ಟಿದ್ದಾರೆ.

ಇನ್ನು, ಸಹೋದರ ಪುನೀತ್ ರಾಜ್‍ಕುಮಾರ್ ಅಗಲಿಕೆಯಿಂದ ನೊಂದಿರುವ ಶಿವ ರಾಜ್​ಕುಮಾರ್ ಚಿತ್ರ ರಂಗದಲ್ಲಿರುವ ನಟರನ್ನು ತಮ್ಮ ಸಹೋದರನಂತೆ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಬಿಡುವಿನ ವೇಳೆ ಚಿತ್ರರಂಗದ ಎಲ್ಲಾ ನಟರ ಸಿನಿಮಾ ಶೂಟಿಂಗ್ ಸ್ಪಾಟ್​ಗೆ ಭೇಟಿ ಕೊಡುತ್ತಿದ್ದಾರೆ.

ದುನಿಯಾ ವಿಜಯ್ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಭೀಮ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದಾರೆ. ಸದ್ಯ ಮೂರನೇ ಶೆಡ್ಯೂಲ್ ಚಿತ್ರೀಕರಣ ಶುರು ಮಾಡಿರೋ ವಿಜಯ್ ರಂಗಭೂಮಿ ಹಾಗು ಹೊಸ ಪ್ರತಿಭೆಗಳಿಗೆ ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ.

ಇದನ್ನೂ ಓದಿ: ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ.. ತಾತ ಮೊಮ್ಮಗನಾಗಿ ಅನಂತ್ ನಾಗ್-ದಿಗಂತ್‌

ಭೀಮ‌ ಸಿನಿಮಾ‌ ಕೂಡ ಒಂದು ನೈಜ ಘಟನೆಯ ಚಿತ್ರ ಆಗಿದ್ದು, ದುನಿಯಾ ವಿಜಯ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್​ ನಟನೆಯ 28ನೇ ಸಿನಿಮಾ ಇದಾಗಿದ್ದು, ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾದ ಶೂಟಿಂಗ್ ಸ್ಪಾಟ್​ಗೆ ದೊಡ್ಮನೆಯವರು ಬಂದು ಹೋಗಿರೋದು ಚಿತ್ರತಂಡದವರ ಹುರುಪು ಹೆಚ್ಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.