ETV Bharat / entertainment

ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ.. ತಾತ ಮೊಮ್ಮಗನಾಗಿ ಅನಂತ್ ನಾಗ್-ದಿಗಂತ್‌

author img

By

Published : Oct 18, 2022, 12:54 PM IST

ಇತ್ತೀಚೆಗೆ ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ ಟೀಸರ್ ಬಿಡುಗಡೆ ಆಗಿದ್ದು, ಮಿಲಿಯನ್​ಗಟ್ಟಲೆ ಜನರು ವೀಕ್ಷಿಸಿದ್ದಾರೆ.

Thimmaiah & Thimmaiah movie teaser release
ತಾತ ಮೊಮ್ಮಗನಾಗಿ ಅನಂತ್ ನಾಗ್-ದಿಗಂತ್‌

ಅಭಿನಯ ಮತ್ತು ಸರಳತೆ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಚಂದನವನದ ಎವರ್​ಗ್ರೀನ್​ ನಟ ಅನಂತ್​ ನಾಗ್​. ವಯಸ್ಸು 73 ಆದರೂ ಇಂದಿಗೂ ಬೇಡಿಕೆಯ ನಟ ಇವರು. ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ ಚಿತ್ರದಲ್ಲಿ ನಟ ಅನಂತ್ ನಾಗ್ ಅಜ್ಜನ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಟ ಅನಂತ್‌ ನಾಗ್‌ ಅವರು ಈವರೆಗೂ ಮಾಡಿರದ ಪಾತ್ರವೇ ಇಲ್ಲ. ನಾಯಕ, ಅಣ್ಣ, ತಮ್ಮ, ಅಪ್ಪ ಹೀಗೆ ಹತ್ತು ಹಲವು ಪಾತ್ರಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ. ಈಗ ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ ಸಿನಿಮಾದಲ್ಲಿ ಅವರು ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೀನಿಯರ್‌ ತಿಮ್ಮಯ್ಯ ಆಗಿದ್ದಾರೆ.

Thimmaiah & Thimmaiah movie teaser release
ತಿಮ್ಮಯ್ಯ & ತಿಮ್ಮಯ್ಯ ಸಿನಿಮಾ

ಇದೇ ಸಿನಿಮಾದಲ್ಲಿ ಜೂನಿಯರ್‌ ತಿಮ್ಮಯ್ಯ ಅಂದರೆ ಮೊಮ್ಮಗನಾಗಿ ದೂದ್ ಪೇಡ ದಿಗಂತ್‌ ನಟಿಸುತ್ತಿದ್ದಾರೆ. ಇತ್ತೀಚೆಗೆ ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ ಟೀಸರ್ ಬಿಡುಗಡೆ ಆಗಿದ್ದು ಮಿಲಿಯನ್ ಗಟ್ಟಲೆ ಜನರು ನೋಡಿ ಮೆಚ್ಚಿಕೊಂಡಿದ್ದಾರೆ.

ಈ ಸಿನಿಮಾವನ್ನು ಸಂಜಯ್‌ ಶರ್ಮಾ ಅವರು ನಿರ್ದೇಶನ ಮಾಡಿದ್ದು, ಅವರು ಮುಂಬೈನ ಪ್ರತಿಷ್ಠಿತ ವಾಹಿನಿಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ತಮ್ಮದೇ ಒಂದು ಜಾಹೀರಾತು ಕಂಪನಿ ಇಟ್ಟುಕೊಂಡಿದ್ದು, ಹಲವು ಸಾಕ್ಷ್ಯ ಚಿತ್ರಗಳನ್ನು ಕೂಡ ಸಂಜಯ್ ಶರ್ಮಾ ನಿರ್ದೇಶಿಸಿದ್ದಾರೆ. ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ ಇವರ ನಿರ್ದೇಶನದ ಮೊದಲ ಸಿನಿಮಾ.

  • " class="align-text-top noRightClick twitterSection" data="">

ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ ತಾತ ಮೊಮ್ಮಗನ ಬಾಂಧವ್ಯದ ಕಥೆ. 30 ವರ್ಷದ ನಂತರ ತಾತ ಮತ್ತು ಮೊಮ್ಮಗ ಭೇಟಿಯಾಗುತ್ತಾರೆ. ಈ ಭೇಟಿಯ ನಂತರ ಇಬ್ಬರ ನಡುವಿನ ಬಾಂಧವ್ಯ ಹೇಗಿರುತ್ತದೆ, ಜಗಳ, ಮುನಿಸು, ಪ್ರೀತಿ ಮತ್ತು 30 ವರ್ಷಗಳು ಮಿಸ್‌ ಮಾಡಿಕೊಂಡಂತಹ ದಿನಗಳನ್ನು ನೆನೆಯುವುದು, ಜೊತೆಗೆ ಇಬ್ಬರೂ ಒಟ್ಟಿಗೆ ಸೇರಿದಾಗ ಅವರ ಜೀವನ ಹೇಗಿರುತ್ತದೆ, ಏನನ್ನು ಹುಡುಕುತ್ತಾರೆ ಎಂಬುದೇ ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ ಸಿನಿಮಾ ಕಥೆ.

ಇದನ್ನೂ ಓದಿ : ಬಾಲಿವುಡ್​​ ಪದ್ಮಾವತಿ ದೀಪಿಕಾ ಪಡುಕೋಣೆ ವಿಶ್ವದ 9ನೇ ಸುಂದರಿ

ದೂದ್ ಪೇಡಾ ದಿಗಂತ್‌ ಅವರಿಗೆ ನಾಯಕಿಯಾಗಿ ನಟಿ ಐಂದ್ರಿತಾ ರೇ ಹಾಗು ನಟಿ ಶುಭ್ರಾ ಅಯ್ಯಪ್ಪ ನಟಿಸುತ್ತಿದ್ದಾರೆ. ಸಿದ್ಲಿಂಗು ಶ್ರೀಧರ್‌ ಮತ್ತು ದಿಲೀಪ್‌ ಬಿ. ಕುಮಾರ್‌ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಕೃಷ್ಣ ತೋಟ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ಕಥೆ, ಚಿತ್ರ ಕಥೆಯನ್ನು ಸಂಜಯ್‌ ಶರ್ಮಾ ಅವರೇ ಬರೆದಿದ್ದಾರೆ. ಸಂಜಯ್‌ ಸಹೋದರ ರಾಜೇಶ್‌ ಶರ್ಮಾ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸೈಲೆಂಟ್ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿರೋ ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ ಟೀಸರ್ ಚಿತ್ರದ ಮೇಲೆ ಕುತೂಹಲ ಹುಟ್ಟಿಸಿದೆ. ಅನಂತ್ ನಾಗ್ ಅವರನ್ನು ಈ ತಾತನ ಲುಕ್​ನಲ್ಲಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನೀಲಿ ತಾರೆಯಾಗಿ ಬೆಳಕಿಗೆ ಬಂದ ಸನ್ನಿ ಲಿಯೋನ್ ಸಮಾಜಮುಖಿ ಕೆಲಸದ ಬಗ್ಗೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.