ETV Bharat / city

ಮಾರ್ಚ್ ಅಂತ್ಯದೊಳಗೆ ಬಜೆಟ್ ಮಂಡಿಸಲೇಬೇಕಾದ ಅನಿವಾರ್ಯತೆ ಇತ್ತು; ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ..‌

author img

By

Published : Apr 1, 2022, 4:42 PM IST

BBMP Commissioner
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ಆರ್ಥಿಕ ವರ್ಷ ಅಂತ್ಯದ ಒಳಗೆ ಬಜೆಟ್​ ಮಂಡಿಸುವ ಅಗತ್ಯ ಇದ್ದ ಕಾರಣ ತರಾತುರಿಯಲ್ಲಿ ಬಜೆಟ್​ ಮಂಡಿಸಿದ್ದು ವೆಬ್​ ಸೈಟ್​ನಲ್ಲಿ ಬಜೆಟ್​ ಪೂರ್ಣ ಮಾಹಿತಿ ದೊರೆಯುತ್ತಿದ್ದು ಸಾರ್ವಜನಿಕರು ನೋಡಬಹುದು, ಸಂಪೂರ್ಣ ಪಾರದರ್ಶಕ ಬಜೆಟ್​ ಮಂಡಿಸಿದ್ದೇವೆ ಎಂದು ಆಯುಕ್ತರು ತಿಳಿಸಿದರು..

ಬೆಂಗಳೂರು : ಬಿಬಿಎಂಪಿಯು ತನ್ನ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡದೇ ಬದಲಿಗೆ ತನ್ನ ವೆಬ್‌ಸೈಟ್​ನಲ್ಲಿ ಬಜೆಟ್ ಪ್ರಕಟಣೆ ಮಾಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಯಿತು. ಪಾಲಿಕೆ ಬಜೆಟ್ ತರಾತುರಿಯಲ್ಲಿ ಮಂಡನೆ ವಿಚಾರವಾಗಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿದ್ದು, ಮಾರ್ಚ್​ನಲ್ಲಿ ಬಜೆಟ್ ಮಂಡಿಸುವುದು ನಮ್ಮ ಉದ್ದೇಶ ಆಗಿತ್ತು ಎಂದು ತಿಳಿಸಿದ್ದಾರೆ.

ಅಧಿವೇಶನ ಇದ್ದ ಹಿನ್ನೆಲೆ ನಾವು ಬೇರೆ ಕೆಲಸದಲ್ಲಿ ತೊಡಗಿದೆವು. ಜನಪ್ರತಿನಿಧಿಗಳು ಹಾಗೂ ಇತರರ ಜೊತೆ ಕೋಆರ್ಡಿನೇಟ್ ಮಾಡಿ ಮಂಡಿಸೋದು ವಿಳಂಬವಾಗಿತ್ತು. ಯುಗಾದಿ ರಜೆಯು ಇದ್ದ ಕಾರಣ ಮಾರ್ಚ್ ಅಂತ್ಯದೊಳಗೆ ಬಜೆಟ್ ಮಂಡಿಸಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ, ನಿನ್ನೆ ಬಜೆಟ್ ಮಂಡಿಸಲಾಗಿದೆ. ಇದು ಸಂಪೂರ್ಣ ಪಾರದರ್ಶಕವಾಗಿ ನಡೆದಿದೆ ಅಂತಾ ತಿಳಿಸಿದರು.

ಬಿಬಿಎಂಪಿಗೆ ಮಾರ್ಚ್ ಅಂತ್ಯದೊಳಗೆ ಬಜೆಟ್ ಮಂಡಿಸಲೇಬೇಕಾದ ಅನಿವಾರ್ಯತೆ..

ಬಜೆಟ್ ಅಧಿವೇಶನ ನಡೆಯುತ್ತಿತ್ತು. ನಿನ್ನೆ ಸಂಜೆವರೆಗೂ ಬಜೆಟ್ ಬಗ್ಗೆ ಚರ್ಚೆ ಆಯ್ತು. ಸಿಎಂ ಜೊತೆ ಚರ್ಚಿಸಿ ಫೈನಲ್ ಮಾಡಲಾಯ್ತು. ಫೈನಾಷಿಯಲ್ ಇಯರ್ ಎಂಡ್ ಒಳಗೆ ಮಂಡಿಸಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ, ರಾತ್ರಿ ಬಜೆಟ್ ಅಪ್ಡೇಟ್ ಮಾಡಲಾಯಿತು ಎಂದು ತಿಳಿಸಿದರು.

ಕಸ, ರಾಜಕಾಲುವೆ, ಆಸ್ಪತ್ರೆ, ಸ್ಮಶಾನ, ತೋಟಗಾರಿಕೆ, ಅರಣ್ಯ ವಿಭಾಗಕ್ಕೆ ಹಣ ಇಡಲಾಗಿದೆ. ಮೂಲಸೌಕರ್ಯಕ್ಕಾಗಿ ಹೆಚ್ಚಿನ ಹಣ ಇಡೋದು ನಮ್ಮ ಉದ್ದೇಶ ಆಗಿತ್ತು. ಆದ್ರೆ, ಸಂಪನ್ಮೂಲಗಳಿಗೆ ಅನುಗುಣವಾಗಿ ಬಜೆಟ್ ರೂಪಿಸಲಾಗಿದೆ. ಪಾಲಿಕೆ ರೆವೆನ್ಯೂ ಹೆಚ್ಚಳಕ್ಕೆ ಕ್ರಮವಹಿಸಲಾಗಿದೆ.

ಬಿ ಖಾತಾ ಇಂದ ಎ ಖಾತಾಗೆ ಬದಲಾವಣೆಗೂ ಅನುವು ಮಾಡಲಾಗಿದೆ. ರಸ್ತೆಗಳು, ರಾಜಕಾಲುವೆ, ಬಿಬಿಎಂಪಿ ಬಿಲ್ಡಿಂಗ್‌ಗಳು, ಕೆರೆ, ಫ್ಲೈಓವರ್ ಸೇರಿ ಎಲ್ಲಾ ಕ್ಷೇತ್ರಕ್ಕೆ ಅನುದಾನವನ್ನು ನೀಡಲಾಗಿದೆ ಎಂದರು.

ಸತತ ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಎಲ್ಲಾ ವಿಚಾರ ಅವಲೋಕಿಸಲಾಗಿದೆ. ಫ್ಲಡ್ ಡ್ಯಾಮೇಜ್, ಒಳ ಚರಂಡಿ, ಕಸ ನಿರ್ವಹಣೆ, ರಸ್ತೆ ಗುಂಡಿ, ಸ್ಟ್ರೀಟ್ ಲೈಟ್ ಈ ವಿಚಾರಕ್ಕೆ ಆದ್ಯತೆ ನೀಡಲಾಗಿದೆ. ಈ ಬಾರಿ ಸೋಷಿಯಲ್‌ ವೆಲ್ ಫಾರ್​ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹೇಳಿದರು.

ಇದನ್ನೂ ಓದಿ: ಮುಂದಿನ ನಮ್ಮ ಗುರಿ ರಾಜ್ಯವನ್ನು ಸೋನಿಯಾ - ರಾಹುಲ್ ಗಾಂಧಿಗೆ ಅರ್ಪಿಸುವುದೇ ಆಗಿದೆ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.