ETV Bharat / city

ಸೋನಿಯಾ ಗಾಂಧಿ 'ಥರ್ಡ್​ ಫ್ರಂಟ್​'​ನಿಂದ ಏನೂ ಆಗಲ್ಲ.. ಸಚಿವ ಬಿ.ಶ್ರೀರಾಮುಲು

author img

By

Published : Aug 21, 2021, 3:36 PM IST

ಆನಂದ್ ಸಿಂಗ್ ಪಕ್ಷಕ್ಕೆ ಮುಜುಗರ ಮಾಡಲ್ಲ ಎಂದಿದ್ದಾರೆ. ಕೇಳುವುದು ಅವರ ಧರ್ಮ, ಕೊಡೋದು ಬಿಡೋದು ಪಕ್ಷಕ್ಕೆ ಬಿಟ್ಟಿದ್ದು. ಬೆಂಗಳೂರಿನಲ್ಲಿ ಸಾಕಷ್ಟು ಬಾರಿ ಜನಾರ್ದನ ರೆಡ್ಡಿ ಭೇಟಿಯಾಗಿದ್ದೇನೆ. ಸಮಯ ಸಿಕ್ಕಾಗ ಬಳ್ಳಾರಿಯಲ್ಲಿಯೂ ಸಹ ಭೇಟಿ ಮಾಡಲಾಗುವುದು..

sriramulu-rection-on-sonia-gandhi-third-front-statement
ಶ್ರೀರಾಮುಲು

ಬಳ್ಳಾರಿ : 'ಥರ್ಡ್ ಫ್ರಂಟ್' ಮಾಡಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೊರಟಿದ್ದಾರೆ. ಅದು ಸಫಲವಾಗಲ್ಲ. ಯಾರು ಎಷ್ಟೇ ಪ್ರಯತ್ನ ಮಾಡಿದರೂ ಮೋದಿ ಇನ್ನೂ 20 ವರ್ಷ ಪ್ರಧಾನಿಯಾಗಲಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ಸೋನಿಯಾ ಗಾಂಧಿ 'ಥರ್ಡ್​ ಫ್ರಂಟ್​'​ನಿಂದ ಏನೂ ಆಗಲ್ವಂತೆ.. ಹೀಗಂತಾರೆ ಸಚಿವ ಶ್ರೀರಾಮುಲು

ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಳಜಗಳದಿಂದ ಬಳಲುತ್ತಿದೆ. ಏನೇ ಪ್ರಯತ್ನ ಮಾಡಿದರು ಬಿಜೆಪಿಗೆ ಯಾವುದೇ ಹಾನಿಯಾಗಲ್ಲ. ಸಿದ್ದರಾಮಯ್ಯ, ಡಿಕೆಶಿ ಡೆಲ್ಲಿಗೆ ಹೋದಾಗ ‌ಮಾತ್ರ ಒಂದಾಗುತ್ತಿದ್ದಾರೆ. ಇವರೆಲ್ಲ ಫೋಟೋ ನಾಯಕರು. ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಗಣಿ ಜಿಲ್ಲೆ ಉಸ್ತುವಾರಿ ಆಸೆ : ಬಳ್ಳಾರಿ ಉಸ್ತುವಾರಿ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಳ್ಳಾರಿ ‌ಜನ್ಮಭೂಮಿ. ಉಳಿದ ಎಲ್ಲ ಜಿಲ್ಲೆಗಳು ನನ್ನ ಕರ್ಮಭೂಮಿ. ಬಳ್ಳಾರಿ ಉಸ್ತುವಾರಿಯಾಗಿ ಕೆಲಸ ಮಾಡುವ ಆಸೆ ಇದೆ ಎಂದು ಮನದಾಳ ಮಾತನ್ನು ವ್ಯಕ್ತಪಡಿಸಿದರು.

ಆನಂದ್​ ಸಿಂಗ್​​ ಖಾತೆ ವಿಚಾರ ಪಕ್ಷಕ್ಕೆ ಬಿಟ್ಟಿದ್ದು : ಆನಂದ್ ಸಿಂಗ್ ಪಕ್ಷಕ್ಕೆ ಮುಜುಗರ ಮಾಡಲ್ಲ ಎಂದಿದ್ದಾರೆ. ಕೇಳುವುದು ಅವರ ಧರ್ಮ, ಕೊಡೋದು ಬಿಡೋದು ಪಕ್ಷಕ್ಕೆ ಬಿಟ್ಟಿದ್ದು. ಬೆಂಗಳೂರಿನಲ್ಲಿ ಸಾಕಷ್ಟು ಬಾರಿ ಜನಾರ್ದನ ರೆಡ್ಡಿ ಭೇಟಿಯಾಗಿದ್ದೇನೆ. ಸಮ ಸಿಕ್ಕಾಗ ಬಳ್ಳಾರಿಯಲ್ಲಿಯೂ ಸಹ ಭೇಟಿ ಮಾಡಲಾಗುವುದು ಎಂದರು.‌

ಎಲೆಕ್ಟ್ರಿಕಲ್ ಬಸ್ ಖರೀದಿ : ಸಾರಿಗೆ ನೌಕರರ ವೇತನ ತಾರತಮ್ಯ ಬಗೆಹರಿಸಲಾಗುವುದು. ಹಬ್ಬದ ವೇಳೆ ತೊಂದರೆಯಾಗದಂತೆ ಎರಡು ತಿಂಗಳ ವೇತನ ನೀಡಲಾಗುವುದು. ನೋ ಪ್ರಾಫಿಟ್ ನೋ ಲಾಸ್ ರೀತಿಯಲ್ಲಿ ಸಂಸ್ಥೆ ನಡೆಸಬೇಕಿದೆ. ತಮಿಳುನಾಡು, ಕೇರಳಕ್ಕೆ ಬಸ್ ಹೋಗುತ್ತಿಲ್ಲ.

ಹೀಗಾಗಿ, ನಷ್ಟವಾಗುತ್ತಿದೆ. ಸಾಕಷ್ಟು ಬಸ್ ಖಾಲಿಯಾಗಿ ಸಂಚರಿಸುತ್ತಿವೆ. ಇದನ್ನು ತಡೆಯುತ್ತೇವೆ. 800 ಕೇಂದ್ರದಿಂದ ಹಾಗೂ ರಾಜ್ಯ ಸರ್ಕಾರದಿಂದ 600 ಎಲೆಕ್ಟ್ರಿಕಲ್ ಬಸ್ ಖರೀದಿ ಮಾಡಲಾಗುವುದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.