ETV Bharat / business

ಭಾರತದಲ್ಲಿದೆ ಜಗತ್ತಿನ ದುಬಾರಿ ಚಾಕೊಲೇಟ್: ಬೆಲೆ ಕೇಳಿದ್ರೆ ಬೆಚ್ಚಿಬೀಳ್ತಿರಾ!

author img

By

Published : Oct 23, 2019, 6:53 PM IST

​ವಿಶ್ವದ ಅತಿ ದುಬಾರಿ ಚಾಕೊಲೇಟ್ ಅನ್ನು ಬಹುರಾಷ್ಟ್ರೀಯ ಎಫ್​ಎಂಸಿಜಿ ಕಂಪನಿ ಐಟಿಸಿ ತಯಾರಿಸಿದ್ದು, ಪ್ರತಿ ಕೆ.ಜಿ.ಗೆ 4.3 ಲಕ್ಷ ರೂ. ದರ ನಿಗದಿಪಡಿಸಿದೆ. ಟ್ರಿನಿಟಿ- ಟ್ರಫಲ್ಸ್ ಎಕ್ಸ್‌ಟ್ರಾಆರ್ಡಿನೇರ್ ಅನ್ನು ಕಂಪನಿಯು ಫ್ಯಾಬೆಲ್ ಶ್ರೇಣಿಯ ಪ್ರೀಮಿಯಂ ಮಿಠಾಯಿಗಳ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಈ ಉತ್ಪನ್ನವು ಗಿನ್ನಿಸ್ ವರ್ಲ್ಡ್​ ರೆಕಾರ್ಡ್​​ನಲ್ಲಿ ಸ್ಥಾನ ಪಡೆದಿದೆ ಎಂದು ಐಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದುಬಾರಿ ಚಾಕೊಲೇಟ್

ನವದೆಹಲಿ: ಚಾಕೊಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟಪಡುವ ಒಂದು ವಿಶ್ವವ್ಯಾಪಿ ಖಾದ್ಯ. ಜಗತ್ತಿನ ಅತ್ಯಂತ ದುಬಾರಿಯಾದ ಚಾಕೊಲೇಟ್ ಭಾರತದಲ್ಲಿದ್ದು, ಅದು ಗಿನ್ನಿಸ್ ವರ್ಲ್ಡ್​ ರೆಕಾರ್ಡ್​ಗೆ ಪಾತ್ರವಾಗಿದೆ.

​ವಿಶ್ವದ ಅತಿ ದುಬಾರಿ ಚಾಕೊಲೇಟ್ ಅನ್ನು ಬಹುರಾಷ್ಟ್ರೀಯ ಎಫ್​ಎಂಸಿಜಿ ಕಂಪನಿಯಾದ ಐಟಿಸಿ ತಯಾರಿಸಿದ್ದು, ಪ್ರತಿ ಕೆ.ಜಿ.ಗೆ 4.3 ಲಕ್ಷ ರೂ. ದರ ನಿಗದಿಪಡಿಸಿದೆ. ಟ್ರಿನಿಟಿ- ಟ್ರಫಲ್ಸ್ ಎಕ್ಸ್‌ಟ್ರಾಆರ್ಡಿನೇರ್ ಅನ್ನು ಕಂಪನಿಯು ಫ್ಯಾಬೆಲ್ ಶ್ರೇಣಿಯ ಪ್ರೀಮಿಯಂ ಮಿಠಾಯಿಗಳ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಈ ಉತ್ಪನ್ನವು ಗಿನ್ನಿಸ್ ವರ್ಲ್ಡ್​ ರೆಕಾರ್ಡ್​​ನಲ್ಲಿ ಸ್ಥಾನ ಪಡೆದಿದೆ ಎಂದು ಐಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  • A creation that’s rooted in mysticism and symbolism is all set to create history. Made with most exotic ingredients sourced from all over the world, this creation is ready to launch in India on 22nd October.#DecodeTrinity
    Philippe Conticini@Conticini_Team pic.twitter.com/rgcbzCBxdX

    — Fabelle Chocolates (@Fabelle) October 18, 2019 " class="align-text-top noRightClick twitterSection" data=" ">

ಕೈಯಿಂದ ತಯಾರಿಸಲ್ಪಟ್ಟ ಮರದ ಪೆಟ್ಟಿಗೆಯಲ್ಲಿ ಮಾಡಲಾಗಿದ್ದು, ತಲಾ 15 ಟ್ರಫಲ್ ತುಂಡುಗಳನ್ನು ಒಳಗೊಂಡಿದೆ. ಪ್ರತಿ ತುಂಡು ಸುಮಾರು 15 ಗ್ರಾಂ ತೂಕವಿರುತ್ತದೆ. ಮೇಕ್ ಆನ್ ಆರ್ಡರ್ ಬಾಕ್ಸ್ ಚಾಕೊಲೇಟ್ ಎಲ್ಲ ವಿಧದ ತೆರಿಗೆ ಸೇರಿ ಚಿಲ್ಲರೆ ವಿಭಾಗದಲ್ಲಿ 1 ಲಕ್ಷ ರೂ.ಗೆ ಮಾರಾಟ ಆಗುತ್ತಿದೆ.

ಈ ಚಾಕೊಲೇಟ್​ ಅನ್ನು ಕೋಲ್ಕತ್ತಾ, ದೆಹಲಿ, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಚೆನ್ನೈ ಸೇರಿದಂತೆ ಮೆಟ್ರೋ ನಗರಗಳಲ್ಲಿನ ಐಟಿಸಿಯ ಫ್ಯಾಬೆಲ್ಲೆ ಅಂಗಡಿಗಳಿಂದ ಖರೀದಿಸಬಹುದು ಎಂದು ಐಟಿಸಿ ಹೇಳಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.