ETV Bharat / state

ಬೀದರ್​ : ಜೆಸ್ಕಾಂ ಕಚೇರಿಯಲ್ಲಿ ಏಕಾಏಕಿ ಬೆಂಕಿ ಅವಘಡ, ಲಕ್ಷಾಂತರ ಮೌಲ್ಯದ ಟಿ‌ಸಿ ಸುಟ್ಟುಭಸ್ಮ - FIRE BROKE OUT IN GESCOM

author img

By ETV Bharat Karnataka Team

Published : May 26, 2024, 3:45 PM IST

Updated : May 26, 2024, 4:55 PM IST

ಬೀದರ್​ ನಗರದ ಹೃದಯ ಭಾಗದಲ್ಲಿರುವ ಕೆಇಬಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದರಿಂದಾಗಿ ಲಕ್ಷಾಂತರ ಮೌಲ್ಯದ ಟಿಸಿ ಸುಟ್ಟು ಭಸ್ಮವಾಗಿದೆ.

fire-broke-out
ಜೆಸ್ಕಾಂ ಕಚೇರಿಯಲ್ಲಿ ಬೆಂಕಿ ಅವಘಡ (ETV Bharat)

ಜೆಸ್ಕಾಂ ಕಚೇರಿಯಲ್ಲಿ ಏಕಾಏಕಿ ಬೆಂಕಿ ಅವಘಡ (ETV Bharat)

ಬೀದರ್ : ಇಲ್ಲಿನ ಜೆಸ್ಕಾಂ ಕಚೇರಿಯಲ್ಲಿ ಏಕಾಏಕಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಟಿ‌ಸಿ ಸುಟ್ಟು ಭಸ್ಮವಾಗಿವೆ. ನಗರದ ಹೃದಯ ಭಾಗದಲ್ಲಿರುವ ಕೆಇಬಿ ಕಚೇರಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಸ್ಟೋರ್ ರೂಮ್ ಹೊತ್ತಿ ಉರಿದಿದೆ.

ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಸ್ಟೋರ್ ಪಕ್ಕದಲ್ಲೇ ನಿಂತಿದ್ದ ಕಚೇರಿ ಸಿಬ್ಬಂದಿಯ ವಾಹನಗಳು ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು.

ಹೆಚ್ಚಿನ ಸಹಾಯಕ್ಕೆ ವಾಯುನೆಲೆಯ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಆತಂಕದ ವಾತಾವರಣವಿದೆ. ಸ್ಥಳಕ್ಕೆ ಜೆಸ್ಕಾಂ ಇಇ ರಮೇಶ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ಪೇಂಟ್​ ಅಂಗಡಿಯಲ್ಲಿ ಅಗ್ನಿ ಅವಘಡ ; ಸುತ್ತಲಿನ ಹತ್ತಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳು ಸುಟ್ಟು ಕರಕಲು - Fire Breaks Out In Paint Shop

Last Updated : May 26, 2024, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.