ETV Bharat / bharat

ಘೋರ ವಾಮಾಚಾರ.. ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿ ಕರುಳು ಹೊರಗೆಳೆದು ಕೊಂದ್ರು ಅಕ್ಕ-ಬಾವ!

author img

By

Published : Jun 26, 2022, 7:54 PM IST

Updated : Jun 26, 2022, 8:03 PM IST

ಮಂತ್ರ ಪಠಿಸುವ ವೇಳೆ ಗುಡಿಯಾದೇವಿಗೆ ಕೋಲಿನಿಂದ ಥಳಿಸಲಾಗಿದ್ದು, ಆಕೆ ಮೂರ್ಛೆ ಹೋಗಿದ್ದಾಳೆ. ಪ್ರಜ್ಞೆ ಮರಳಿದ ನಂತರ ಲಲಿತಾ ದೇವಿ ಮತ್ತು ಅವರ ಪತಿ ಒಟ್ಟಾಗಿ ಗುಡಿಯಾ ದೇವಿಯ ದೇಹವನ್ನು ಎಲ್ಲರ ಸಮ್ಮುಖದಲ್ಲಿ ಛಿದ್ರಗೊಳಿಸಿದ್ದಾರೆ. ಅವನು ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾನೆ. ಇದಾದ ನಂತರ ಖಾಸಗಿ ಅಂಗಕ್ಕೆ ಕೈ ಹಾಕಿ ದೇಹದಿಂದ ಕರುಳನ್ನು ಹೊರತೆಗೆದಿದ್ದಾನೆ.

ಕ್ರೂರತೆಯ ವಾಮಾಚಾರ
ಕ್ರೂರತೆಯ ವಾಮಾಚಾರ

ಗಢ್ವಾ (ಜಾರ್ಖಂಡ್ ) : ಜಿಲ್ಲೆಯ ಪಟ್ಟಣದ ಉಂಟರಿ ಉಪವಿಭಾಗೀಯ ಕೇಂದ್ರದಲ್ಲಿ ವಾಮಾಚಾರಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಈ ವಿಚಾರದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಸೇರಿ ತನ್ನ ಸ್ವಂತ ತಂಗಿಯನ್ನೇ ಬಲಿಕೊಟ್ಟಿದ್ದಾಳೆ. ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮೇರಾಲ್ ಪೊಲೀಸ್ ಠಾಣೆಯ ದಲೇಲಿ ಗ್ರಾಮದ ನಿವಾಸಿ ಲಲಿತಾ ದೇವಿ ಅವರು ತಮ್ಮ ಪತಿ ದಿನೇಶ್ ಓರಾನ್ ಅವರೊಂದಿಗೆ ಮಂತ್ರ-ತಂತ್ರ ಮಾಡಲು ಲಲಿತಾ ದೇವಿಯ ತಂಗಿ ಗುಡಿಯಾ ದೇವಿ (26) ಮತ್ತು ಅವಳ ಪತಿ ಮುನ್ನಾ ಒರಾನ್ ಮನೆಗೆ ಬಂದಿದ್ದಾರೆ. ಮಂತ್ರ ಪಠಿಸುವ ವೇಳೆ ಗುಡಿಯಾದೇವಿಗೆ ಕೋಲಿನಿಂದ ಥಳಿಸಲಾಗಿದ್ದು, ಆಕೆ ಮೂರ್ಛೆ ಹೋಗಿದ್ದಾಳೆ.

ಪ್ರಜ್ಞೆ ಮರಳಿದ ನಂತರ ಲಲಿತಾ ದೇವಿ ಮತ್ತು ಅವರ ಪತಿ ಒಟ್ಟಾಗಿ ಗುಡಿಯಾ ದೇವಿಯ ದೇಹವನ್ನು ಎಲ್ಲರ ಸಮ್ಮುಖದಲ್ಲಿ ಛಿದ್ರಗೊಳಿಸಿದ್ದಾರೆ. ಅವನು ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾನೆ. ಇದಾದ ನಂತರ ಖಾಸಗಿ ಅಂಗಕ್ಕೆ ಕೈ ಹಾಕಿ ದೇಹದಿಂದ ಕರುಳನ್ನು ಹೊರತೆಗೆದಿದ್ದಾನೆ. ಕ್ರೌರ್ಯ ತುಂಬಿದ ಈ ಘಟನೆಯನ್ನು ಅಲ್ಲಿದ್ದವರಾರೂ ವಿರೋಧಿಸಲಿಲ್ಲ. ಆಕೆಯ ಪತಿ ಮತ್ತು ಅತ್ತೆ ಕೂಡ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಈ ವೇಳೆ ಗುಡಿಯಾ ತೀವ್ರ ನೋವಿನಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿ ಕರುಳು ಹೊರಗೆಳೆದು ಕೊಂದ್ರು ಅಕ್ಕ-ಬಾವ!

ಇದಾದ ನಂತರ ಲಲಿತಾ ತನ್ನ ಪತಿಯೊಂದಿಗೆ ಗುಡಿಯಾಳ ಶವವನ್ನು ರಂಕಾದಲ್ಲಿರುವ ತನ್ನ ತಾಯಿಯ ಮನೆಗೆ ಕೊಂಡೊಯ್ದು ನಂತರ ಅಲ್ಲಿನ ಕಾಡಿನ ಮಧ್ಯದಲ್ಲಿ ಸುಟ್ಟುಹಾಕಿದ್ದಾರೆ. ಈ ಬಗ್ಗೆ ಪಂಚಾಯಿತಿ ಕರೆಯಲಾಗಿದ್ದು, ವಾರ್ಡ್ ಕೌನ್ಸಿಲರ್ ಪತಿ ಯೋಗೇಶ್ ಓರಾನ್ ಈ ವಿಷಯವನ್ನು ಹತ್ತಿಕ್ಕಲು ಸುಗ್ರೀವಾಜ್ಞೆ ನೀಡಿದ್ದಾನೆ. ಆದರೆ ಹೇಗೋ ಈ ವಿಷಯ ಬಯಲಿಗೆ ಬಂದಿದ್ದು, ಪೊಲೀಸರಿಗೆ ತಿಳಿದಿದೆ.

ಆ ಘಟನೆಯಿಂದ ತಾನು ವಿಚಲಿತನಾಗಿದ್ದೇನೆ ಎಂದು ಮೃತಳ ಪತಿ ಮುನ್ನಾ ಓರಾನ್ ಹೇಳಿದ್ದಾನೆ. ಪತ್ನಿಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಈ ಪ್ರಕರಣದಲ್ಲಿ ದಿನೇಶ್ ಓರಾನ್, ರಾಮಶರಣ್ ಓರಾನ್ ಸೇರಿದಂತೆ ಪುರುಷರು ಮತ್ತು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಠಾಣೆ ಪ್ರಭಾರಿ ಯೋಗೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೇ 20ರಂದೇ ಶಿಂದೆಗೆ ಸಿಎಂ ಹುದ್ದೆಯ ಆಫರ್​​ ಕೊಡಲಾಗಿತ್ತು: ಆದಿತ್ಯ ಠಾಕ್ರೆ

Last Updated :Jun 26, 2022, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.