ETV Bharat / bharat

300 ಕೋಟಿ ವಂಚಿಸಿದ ಚೀನಾ ಸಾಲದ ಆ್ಯಪ್​ ಗ್ಯಾಂಗ್ ಭೇದಿಸಿದ ಉತ್ತರಾಖಂಡ ಪೊಲೀಸರು: ಕಿಂಗ್​​ಪಿನ್ ಅಂಕುರ್ ಧಿಂಗ್ರಿ ಬಂಧನ

author img

By

Published : Jan 11, 2023, 11:06 PM IST

ಚೀನಾದ ಸಾಲದ ಆ್ಯಪ್​ದಿಂದ ಕೋಟ್ಯಂತರ ರೂಪಾಯಿ ವಂಚನೆ: ಅಂತಾರಾಷ್ಟ್ರೀಯ ಗ್ಯಾಂಗ್​ನ್ನು ಭೇದಿಸಿದ ಉತ್ತರಾಖಂಡ ಎಸ್​​​ಟಿಎಫ್ ತಂಡ,ಭಾರತದ ಪ್ರಮುಖ ಕಿಂಗ್​​ಪಿನ್ ಆರೋಪಿ ಅಂಕುರ್ ಧಿಂಗ್ರಿಯನ್ನು ಗುರ್ಗಾಂವ್‌ನಿಂದ ಎಸ್‌ಟಿಎಫ್ ಬಂಧಿಸಿದೆ.

DGP Ashok Kumar
ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ಅಶೋಕ ಕುಮಾರ್

ಡೆಹ್ರಾಡೂನ್​: ಚೀನಾದ ಸಾಲದ ಆ್ಯಪ್​ದಿಂದ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಂತಾರಾಷ್ಟ್ರೀಯ ದರೋಡೆಕೋರರನ್ನು ಉತ್ತರಾಖಂಡ ಎಸ್‌ಟಿಎಫ್ ತಂಡವೂ ಬುಧವಾರ ಭೇದಿಸಿದೆ. ಈ ಪ್ರಕರಣದಲ್ಲಿ ಭಾರತದ ಪ್ರಮುಖ ಕಿಂಗ್​​ಪಿನ್ ಆರೋಪಿ ದೆಹಲಿ ಉತ್ತಮ ನಗರದ ನಿವಾಸಿ ಅಂಕುರ್ ಧಿಂಗ್ರಿಯನ್ನು ಗುರ್ಗಾಂವ್‌ನಿಂದ ಎಸ್‌ಟಿಎಫ್ ಬಂಧಿಸಿದೆ ಎಂದು ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ಅಶೋಕ ಕುಮಾರ್ ತಿಳಿಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗ್ಯಾಂಗ್‌ನ ಐವರು ಮಾಸ್ಟರ್‌ಮೈಂಡ್‌ಗಳು ಚೀನಾದ ಪ್ರಜೆಗಳು ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಹಾಂಕಾಂಗ್ ನಿಂದ ಕಾರ್ಯಾಚರಣೆ ನಡೆಸುತ್ತಿದೆ. ಈ ಗ್ಯಾಂಗ್ ಇದುವರೆಗೆ 300 ಕೋಟಿಗೂ ಹೆಚ್ಚು ವಂಚನೆ ಮತ್ತು ಅಕ್ರಮ ವಸೂಲಿ ಮಾಡಿದೆ ಎಂದು ತನಿಖೆಯಿಂದ ತಿಳಿದಿದೆ. ಬಂಧಿತ ಆರೋಪಿಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್, ಹಾರ್ಡ್ ಡಿಸ್ಕ್ ಮತ್ತು ಹತ್ತಾರು ಬ್ಯಾಂಕ್ ಎಟಿಎಂ ಕಾರ್ಡ್‌ಗಳು, ಆಧಾರ್ ಕಾರ್ಡ್‌ಗಳು, ಪ್ಯಾನ್ ಮತ್ತು ಮೆಟ್ರೋ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ದೇಶಾದ್ಯಂತ ಚೀನಾದ ನಕಲಿ ಸಾಲದ ಅಪ್ಲಿಕೇಶನ್ ಮೂಲಕ ಮಾಡಿದ ವಂಚನೆಯು 300 ಕೋಟಿಗೂ ಹೆಚ್ಚು ಇರುತ್ತದೆ. ಇದುವರೆಗಿನ ತನಿಖೆಯಲ್ಲಿ ಈ ಗ್ಯಾಂಗ್ ನ 15 ನಕಲಿ ಆಪ್ ಗಳಿಂದ 300 ಕೋಟಿ ಅಕ್ರಮ ವಸೂಲಿ ಮಾಡಿರುವ ಸಾಕ್ಷ್ಯಗಳು ಬೆಳಕಿಗೆ ಬಂದಿವೆ. 15 ನಕಲಿ ಆ್ಯಪ್‌ಗಳ ಪೈಕಿ 95 ದೂರುಗಳು ಸೈಬರ್ ಕ್ರೈಮ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ 5 ಆಪ್‌ಗಳಲ್ಲಿ ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಹಾಂಕಾಂಗ್‌ವೇ ಕೇಂದ್ರ ಬಿಂದು: ಹಾಂಕಾಂಗ್‌ನಿಂದ ಕಾರ್ಯಾಚರಣೆ ಕೈಗೊಂಡಿದ್ದ ಆರೋಪಿಗಳಾದ ಚೀನಾದ ಕುವಾಂಗ್ ಯೊಂಗ್‌ಗುವಾಂಗ್ ಅಲಿಯಾಸ್ ಬೋಲ್ಟ್ , ಮಿಯಾವೋ ಝಾಂಗ್ ಅಲಿಯಾಸ್ ಸಿಸೆರೊ, ವಾಂಝೆ ಲಿ ಅಲಿಯಾಸ್ ಫೋರ್ಸ್, ಹೆ ಝೆಬೋ ಅಲಿಯಾಸ್ ಲಿಯೋ ಮತ್ತು ಡಿಫಾನ್ ವಾಂಗ್ ಅಕಾ ಸ್ಕಾಟ್ ವಾಂಗ್ ಎಂದು ಗುರುತಿಸಲಾಗಿದೆ.

ಧಿಂಗ್ರಿಯ ಲ್ಯಾಪ್‌ಟಾಪ್‌ನ ತಾಂತ್ರಿಕ ಪರೀಕ್ಷೆಯ ಆಧಾರದ ಮೇಲೆ ವಂಚನೆಗಳು ಪತ್ತೆಯಾಗಿವೆ. ಪೊಲೀಸರು ಆರೋಪಿ ವಿರುದ್ಧ 384-85 ರಡಿ ಬ್ಲಾಕ್​​ಮೇಲ್ ಮತ್ತು 419-20, 469 ವಂಚನೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದರೋಡೆಕೋರರು ವಂಚಕರು ಆನ್‌ಲೈನ್ ಸಾಲದ ನೆಪದಲ್ಲಿ ಆ್ಯಪ್‌ಗಳ ಲಿಂಕ್‌ಗಳನ್ನು ಡೌನ್‌ಲೋಡ್ ಮಾಡುವಂತೆ ಜನರಿಗೆ ಸ್ಕ್ಯಾಮ್ ಲಿಂಕ್‌ಗಳನ್ನು ಕಳುಹಿಸುತ್ತಿದ್ದರು ಎಂದು ಡಿಜಿಪಿ ಹೇಳಿದರು.

ಜನರ ಬ್ಯಾಂಕ್ ಖಾತೆ, ಫೇಸ್ ಬುಕ್ ಸೇರಿ ನಾನಾ ರೀತಿಯ ದತ್ತಾಂಶ ಸಂಗ್ರಹಿಸಿ ಅಶ್ಲೀಲವಾಗಿ ಫೋಟೊ, ವಿಡಿಯೋ ಎಡಿಟ್ ಮಾಡಿ ಮಾನಸಿಕವಾಗಿ ಶೋಷಣೆ ಮಾಡಿ ಲಕ್ಷಗಟ್ಟಲೇ ಹಣ ವಸೂಲಿ ಮಾಡುತ್ತಿದ್ದನು.ಈ ಗ್ಯಾಂಗ್ ಜಾಲ ದೊಡ್ಡ ಪ್ರಮಾಣದಲ್ಲಿ ದೇಶದಲ್ಲಿ ಹರಡಿದೆ. ಉತ್ತರಾಖಂಡ ಪೊಲೀಸರ ನಂತರ ಇದೀಗ ವಿವಿಧ ರಾಜ್ಯಗಳ ಸೈಬರ್ ಪೊಲೀಸರಿಗೆ ದೇಶಾದ್ಯಂತ ದೂರುಗಳು ಬರುತ್ತಿವೆ ಎಂದು ಸ್ಪಷ್ಟ ಪಡಿಸಿದರು.

ಇದನ್ನೂಓದಿ:ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟ: ಐವರು ಸಿಆರ್​ಪಿಎಫ್​ ಯೋಧರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.