ETV Bharat / bharat

ಮದುವೆ ದಿಬ್ಬಣಕ್ಕೆ ತೆರಳಿದವರು ಮಸಣ ಸೇರಿದರು..!

author img

By

Published : Jan 28, 2023, 4:55 PM IST

road accident
ರಸ್ತೆ ಅಪಘಾತ

ನಾಡಿಯಾ ಹಾಗೂ ಕಾಲಿಂಪಾಂಗ್​ನಲ್ಲಿ ಪ್ರತ್ಯೇಕ ಅಪಘಾತಗಳು - ಸ್ಥಳದಲ್ಲೇ ಐವರು ಸಾವು - ಅಟ್ಟಹಾಸ ಮೆರೆದ ಜವರಾಯ - ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ನಕಾಶಿಪಾರಾ(ಪಶ್ಚಿಮ ಬಂಗಾಳ): ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತೆರಳುತ್ತಿರುವ ವೇಳೆ ಎರಡು ಪ್ರತ್ಯೇಕ ಕಡೆಗಳಲ್ಲಿ ಅಪಘಾತಗಳು ನಡೆದಿರುವುದು ದುರಾದೃಷ್ಟಕರ ಸಂಗತಿ. ನಾಡಿಯಾ ಮತ್ತು ಕಾಲಿಂಪಾಂಗ್ ಎಂಬ ಸ್ಥಳಗಳಲ್ಲಿ ಎರಡು ಪ್ರತ್ಯೇಕವಾಗಿ ರಸ್ತೆ ಅಪಘಾತಗಳು ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.

ಮೊದಲು ನಡೆದ ಘಟನೆಯೊಂದರಲ್ಲಿ ಬೊಲೆರೊ ಕಾರೊಂದು ನದಿಗೆ ಬಿದ್ದಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟರೆ. ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 31ರ ಕಲಿಂಪಾಂಗ್ ಜಿಲ್ಲೆಯ ಮೊಂಗ್‌ಪಾಂಗ್ ಪೊಲೀಸ್ ಔಟ್‌ಪೋಸ್ಟ್ ಪ್ರದೇಶದಲ್ಲಿ ರುಂಗ್‌ಡಂಗ್ ಸೇತುವೆಯಲ್ಲಿ ಈ ದುರ್ಘಟನೆ ನಡೆದಿದೆ. ಸಂತ್ರಸ್ತರು ಮದುವೆಯ ಆರತಕ್ಷತೆ ಪಾರ್ಟಿ ಮುಗಿಸಿಕೊಂಡು ಹಿಂತಿರುಗುತ್ತಿದ್ದರು.

ಬೈಕ್‌ಗೆ ಹಿಂದಿನಿಂದ ಟ್ರಕ್ ಡಿಕ್ಕಿ: ಎರಡನೇ ಅಪಘಾತವು ನಾಡಿಯಾದ ನಕಾಶಿಪಾರಾ ಒಂದರಲ್ಲಿ ಸಂಭವಿಸಿದ್ದರಿಂದ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ತಡರಾತ್ರಿ ನಕಾಶಿಪಾರಾದಲ್ಲಿನ ಜುಗ್‌ಪುರ ಫ್ಲೈಓವರ್​ ಮಾರ್ಗದಲ್ಲಿ ತೆರಳುತ್ತಿದ್ದ ಬೈಕ್‌ಗೆ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ನಕಾಶಿಪಾರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನದಿ ಸೇತುವೆಯಿಂದ ಉರುಳಿದ ಬಿದ್ದ ವರನ ಕಾರ್​: ಕಾಲಿಂಪಾಂಗ್​ನಲ್ಲೂ ಮತ್ತೊಂದು ಪ್ರತ್ಯೇಕ ಅಪಘಾತ ನಡೆಯಿದಿದೆ. ಪ್ರಯಾಣಿಕರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಸಿಲಿಗುರಿಯಿಂದ ಬನಾರ್ಹತ್‌ಗೆ ಪ್ರಯಾಣಿಸುತ್ತಿದ್ದರು. ಮದುವೆ ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಹೌದು, ಕಾಲಿಂಪಾಂಗ್ ಜಿಲ್ಲೆಯ ಮೊಂಗ್‌ಪಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರನ ಕಾರ್​ ರುಂಗ್‌ಡಂಗ್ ನದಿ ಸೇತುವೆಯಿಂದ ಉರುಳಿದ ಬಿದ್ದಿರುವ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಸಿದ ಮಾಂಗ್‌ಪಾಂಗ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು, ಗಾಯಾಳುಗಳನ್ನು ರಕ್ಷಿಸಿ, ಅವರನ್ನು ಚಿಕಿತ್ಸೆಗಾಗಿ ಓಡ್ಲಬರಿ ಆಸ್ಪತ್ರೆಗೆ ಸೇರಿಸಿದರು. ಕಾರಿನಲ್ಲಿ 9 ಮಂದಿ ಪ್ರಯಾಣಿಕರಿದ್ದರು ಎಂಬುದು ತಿಳಿದು ಬಂದಿದೆ.

ಪೊಲೀಸ್​ ಮಾಹಿತಿ: ಪೊಲೀಸ್ ಮೂಲಗಳ ಪ್ರಕಾರ, 24ನೇ ಉತ್ತರ ಪರಗಣದ ನಿವಾಸಿ ತಿಲಕ್ ಮೊಂಡಲ್ (34) ಅವರನ್ನು ಓಡ್ಲಬರಿ ಆಸ್ಪತ್ರೆಯಿಂದ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕಾರಿನ ಚಾಲಕ ಸಾಹಿಲ್ ಶೇಖ್ (23) ಮೃತಪಟ್ಟಿದ್ದಾನೆ. ರಾಜಾ ಶೇಖ್ (26), ಸುಶಾಂತ್ ಜಯಧರ್ (38), ಪ್ರತಾಪ್ ಗುಪ್ತಾ (28), ಪೂನಂ ಓರಾವ್ (27), ನಿಖಿಲ್ ಕರ್ಮಾಕರ್ (41), ಫಿಲಿಪ್ ಎಕ್ಕಾ (35) ತೀವ್ರವಾಗಿ ಗಾಯಗೊಂಡಿದ್ದಾರೆ.

ನಾಡಿಯಾದಲ್ಲಿ ನಕಾಶಿಪಾರಾದ ಜುಗ್‌ಪುರ ನಿವಾಸಿಗಳಾದ ನಿರಂಜನ್ ದಾಸ್ (63) ಮತ್ತು ಅವರ ಮಗ ಸುಬ್ರತಾ ದಾಸ್ ಮದುವೆ ಮನೆಯ ಪೆಂಡಾಲ್ ಹಾಕುವ ಕೆಲಸಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ರಾಜೀವ್ (45) ಎಂಬ ಫುಚ್ಕಾ ಮಾರಾಟಗಾರ (ಪಾನಿಪುರಿ, ಗೋಲ್ ಗಪ್ಪಾ ಮಾರಾಟಗಾರ) ಅವರೊಂದಿಗೆ ಹೋಗಿದ್ದ. ಶುಕ್ರವಾರ ತಡರಾತ್ರಿ ಮದುವೆ ಮನೆಯ ಕೆಲಸ ಗಳನ್ನು ಮುಗಿಸಿ ಒಂದೇ ಬೈಕ್‌ನಲ್ಲಿ ಮೂವರು ವಾಪಸ್ ಬರುತ್ತಿದ್ದರು. ಈ ವೇಳೆ, ಜುಗ್‌ಪುರ ಫ್ಲೈಓವರ್‌ನಲ್ಲಿ ಹತ್ತುತ್ತಿದ್ದಾಗ ಹಿಂದಿನಿಂದ ಟ್ರಕ್​ ಬಂದು ಡಿಕ್ಕಿ ಹೊಡೆದಿದೆ.

ರಸ್ತೆಯಲ್ಲೇ ಬಿದ್ದು ನರಳಾಡಾದ ಗಾಯಳು: ಟ್ರಕ್‌ ಗುದ್ದಿದ ರಭಸಕ್ಕೆ ನಿರಂಜನ್ ದಾಸ್ ದೇಹವು ಸಂಪೂರ್ಣ ನುಜ್ಜುಗುಜ್ಜಾಗಿದೆ. ಬೈಕ್‌ನಲ್ಲಿದ್ದ ರಾಜೀವ್ ಅವರು ಫ್ಲೈಓವರ್‌ನಿಂದ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ನಿರಂಜನ್ ದಾಸ್ ಅವರ ಪುತ್ರ ಸುಬ್ರತಾ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಬಹಳ ಹೊತ್ತು ಬಿದ್ದು ನರಳಾಡುತ್ತಿದ್ದರು.

ಬಳಿಕ ಸ್ಥಳೀಯರು ಸುಬ್ರತಾ ದಾಸ್ ಅವರನ್ನು ಗುರುತಿಸಿ ರಕ್ಷಿಸಿ, ಅವರನ್ನು ನಕಾಶಿಪಾರಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಸ್ಥಳಕ್ಕೆ ತೆರಳಿ ಪೊಲೀಸರು, ನಿರಂಜನ್ ದಾಸ್ ಮತ್ತು ರಾಜೀವ್ ಅವರ ಮೃತದೇಹಗಳನ್ನು ಹೊರತೆಗೆದು ಶವ ಪರೀಕ್ಷೆಗಾಗಿ ನಾಡಿಯಾ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನು ಓದಿ: ಮಧ್ಯಪ್ರದೇಶದಲ್ಲಿ ಸುಖೋಯ್​-30, ಮಿರಾಜ್​-2000 ಯುದ್ಧ ವಿಮಾನಗಳು ಪತನ.. ಒಬ್ಬ ಪೈಲಟ್​ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.