ETV Bharat / entertainment

ಲೋಕ ಸಮರದಲ್ಲಿ ಕಂಗನಾ ಫುಲ್ ಬ್ಯುಸಿ: 'ಎಮರ್ಜೆನ್ಸಿ' ಬಿಡುಗಡೆ ಮತ್ತೆ ಮುಂದೂಡಿಕೆ - Emergency Movie

author img

By ETV Bharat Karnataka Team

Published : May 16, 2024, 7:29 AM IST

'ಎಮರ್ಜೆನ್ಸಿ' ಸಿನಿಮಾವನ್ನು ಜೂನ್ 14ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕಂಗನಾ ರಣಾವತ್​ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇರುವ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

Kangana Ranaut
ಕಂಗನಾ ರಣಾವತ್ (Instagram)

ತುರ್ತುಪರಿಸ್ಥಿತಿ ಕುರಿತಾದ 'ಎಮರ್ಜೆನ್ಸಿ' 2024ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಕಂಗನಾ ರಣಾವತ್ ಅವರೇ ಬರೆದು, ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಶೀಘ್ರ ಬಿಡುಗಡೆ ಭಾಗ್ಯವಿಲ್ಲ. 'ಎಮರ್ಜೆನ್ಸಿ' ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಮುಂದಿನ ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಅವರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಾಧಾರಿತ ಚಿತ್ರ ಈ ಹಿಂದೆ ಜೂನ್ 14ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಂಗನಾ ರಾಜಕೀಯ ಕಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಅವರು ಹಿಮಾಚಲದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಪ್ರಚಾರ ಭರದಿಂದ ಸಾಗಿದೆ. ಈ ಕಾರಣಕ್ಕಾಗಿ, ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

'ಎಮರ್ಜೆನ್ಸಿ' ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬಹಳ ಸಮಯದ ಹಿಂದೆಯೇ ತಿಳಿಸಲಾಗಿತ್ತು. ಈಗಾಗಲೇ ಕೆಲವು ಕಾರಣದಿಂದಾಗಿ ಬಿಡುಗಡೆ ದಿನಾಂಕ ವಿಳಂಬವಾಗುತ್ತಾ ಬಂದಿದೆ. ಆದ್ರೀಗ ಮತ್ತೊಮ್ಮೆ ರಿಲೀಸ್​ ಡೇಟ್ ಪೋಸ್ಟ್​ಪೋನ್ ಆಗಿದೆ. ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕವನ್ನು ವಿಸ್ತರಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ನಿರ್ಮಾಪಕರು ಅಧಿಕೃತ ಮಾಹಿತಿ ನೀಡಿದ್ದಾರೆ.

ಪೋಸ್ಟ್ ಶೇರ್ ಮಾಡಿದ ಸಿನಿಮಾ ನಿರ್ಮಾಣ ಸಂಸ್ಥೆ, 'ಕ್ವೀನ್ ಕಂಗನಾ ರಣಾವತ್ ಮೇಲಿನ ಜನರ ಪ್ರೀತಿ ಕಂಡು ನಮ್ಮ ಹೃದಯ ತುಂಬಿದೆ. ಪ್ರಸ್ತುತ ಅವರು ರಾಷ್ಟ್ರ ಸೇವೆಗೆ ತಮ್ಮ ಆದ್ಯತೆ ನೀಡಿದ್ದಾರೆ. ಹಾಗಾಗಿ ಅವರ ಎಮರ್ಜೆನ್ಸಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದೇವೆ. ಶೀಘ್ರದಲ್ಲೇ ನಿಮಗೆ ಹೊಸ ಬಿಡುಗಡೆ ದಿನಾಂಕ ತಿಳಿಸುತ್ತೇವೆ. ನಿಮ್ಮ ನಿರಂತರ ಬೆಂಬಲಕ್ಕೆ ಧನ್ಯವಾದಗಳು' ಎಂದು ಬರೆದಿದ್ದಾರೆ.

ಇದನ್ನೂ ಓದಿ: ಆಂಧ್ರಪ್ರದೇಶದ ಪ್ರಸಿದ್ಧ ದೇಗುಲಕ್ಕೆ ₹12.5 ಲಕ್ಷ ದೇಣಿಗೆ ನೀಡಿದ ಜೂ.ಎನ್​ಟಿಆರ್​ - Jr NTR

ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ದಿವಂಗತ ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಾಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೊಲಿಟಿಕಲ್​​ ಡ್ರಾಮಾವನ್ನು 2023ರ ನವೆಂಬರ್​ನಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿತ್ತು. 2023ರ ಕೊನೆಗೆ ಸಾಲು ಸಾಲು ಸಿನಿಮಾಗಳು ತೆರೆಕಂಡ ಹಿನ್ನೆಲೆಯಲ್ಲಿ ಎಮರ್ಜೆನ್ಸಿ ಮುಂದೂಡಿಕೆಯಾಗಿತ್ತು.

ಇದನ್ನೂ ಓದಿ: 'ಭಾರತ ಮುನ್ನುಗ್ಗುತ್ತಿದೆ': ದೇಶದ ಅಭಿವೃದ್ಧಿ, ಅಟಲ್ ಸೇತು ಬಗ್ಗೆ ರಶ್ಮಿಕಾ ಗುಣಗಾನ - Rashmika Mandanna

2024ರ ಜನವರಿಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡ ನಟಿ, "ಭಾರತದ ಕರಾಳ ದಿನಗಳ ಕಥೆ ತೆರೆಮೇಲೆ ಬರುತ್ತಿದೆ. ಜೂನ್​ 14ರಂದು ಎಮರ್ಜೆನ್ಸಿ ಬಿಡುಗಡೆ ಆಗಲಿದೆ. ಥಿಯೇಟರ್​​ಗಳಲ್ಲಿ ಇಂದಿರಾ ಗಾಂಧಿ ಕಥೆಗೆ ಸಾಕ್ಷಿಯಾಗಿ'' ಎಂದು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.