ETV Bharat / state

ಅಂಜಲಿ ಹತ್ಯೆ ಬೆದರಿಕೆ ನಿರ್ಲಕ್ಷಿಸಿದ ಆರೋಪ; ಇಬ್ಬರು ಪೊಲೀಸರು ಸಸ್ಪೆಂಡ್ - Anjali Murder Case

author img

By ETV Bharat Karnataka Team

Published : May 16, 2024, 7:24 AM IST

ಅಂಜಲಿ ಅಂಬಿಗೇರ ಕೊಲೆಗೂ ಮುನ್ನ ಆಕೆಗೆ ಆರೋಪಿಯಿಂದ ಪ್ರಾಣ ಬೆದರಿಕೆ ಇತ್ತು. ಈ ಕುರಿತು ದೂರು ನೀಡಲು ಠಾಣೆಗೆ ಹೋಗಿದ್ದಾಗ ಪೊಲೀಸರು 'ಇವೆಲ್ಲಾ ಮೂಢನಂಬಿಕೆ' ಎಂಬುದಾಗಿ ನಿರ್ಲರ್ಕ್ಷಿಸಿದ್ದರು ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಅಂಜಲಿ ಹತ್ಯೆ ಪ್ರಕರಣ
ಅಂಜಲಿ ಹತ್ಯೆ ಪ್ರಕರಣ (ETV Bharat)

ಹುಬ್ಬಳ್ಳಿ: ಬುಧವಾರ ಬೆಳಗ್ಗೆ ನಡೆದ ಯುವತಿ ಅಂಜಲಿ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್​ ಹಾಗೂ ಮಹಿಳಾ ಹೆಡ್​ ಕಾನ್ಸ್‌ಟೇಬಲ್ ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಕಮಿಷನರ್​ ರೇಣುಕಾ ಸುಕುಮಾರ್​ ಆದೇಶಿಸಿದ್ದಾರೆ.

ಪೊಲೀಸ್ ಇನ್ಸ್ಪೆಕ್ಟರ್ ಸಿ.ಬಿ.ಚಿಕ್ಕೋಡಿ ಹಾಗೂ ಹೆಡ್​ ಕಾನ್ಸ್​ಟೇಬಲ್ ರೇಖಾ ಹಾವರಡ್ಡಿ ಅಮಾನತಾದ ಸಿಬ್ಬಂದಿ.

ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವನಾಥ ಎಂಬಾತ ಆಕೆಯ ಮನೆಗೆ ನುಗ್ಗಿ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಕುಟುಂಬಸ್ಥರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, "ಅಂಜಲಿಯನ್ನು ವಿಶ್ವನಾಥ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆಕೆ ಒಪ್ಪದೇ ಇದ್ದಾಗ ನೇಹಾ ಹಿರೇಮಠಗೆ ಆದ ಹಾಗೆಯೇ ನಿನಗೂ ಆಗಲಿದೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡಿದ್ದ ನಾವು ಈ ಬಗ್ಗೆ ತಿಳಿಸಲು ಬೆಂಡಿಗೇರಿ ಪೊಲೀಸ್​ ಠಾಣೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಪೊಲೀಸರು "ಇವೆಲ್ಲಾ ಮೂಢನಂಬಿಕೆ" ಎಂದು ಹೇಳಿ ಘಟನೆಯನ್ನು ನಿರ್ಲರ್ಕ್ಷಿಸಿದ್ದರು. ಅಂದೇ ಆರೋಪಿಯ ಮೇಲೆ ಕಠಿಣ ಕ್ರಮ ತೆಗೆದುಕೊಂಡು, ಪ್ರಕರಣ ದಾಖಲಿಸುತ್ತಿದ್ದರೆ ಹತ್ಯೆ ತಪ್ಪಿಸಬಹುದಿತ್ತು" ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಂಜಲಿ‌ ಸಾವಿಗೆ ಕಂಬನಿ ಮಿಡಿದ ವಾಣಿಜ್ಯ ನಗರಿ : ನೇಹಾ ಹಿರೇಮಠ ತಂದೆಯಿಂದ ಒಂದು ಲಕ್ಷ ರೂ. ಧನಸಹಾಯ - Money donate to Anjali family

ಈ ಆರೋಪದ ಹಿನ್ನೆಲೆಯಲ್ಲಿ ಬೆಂಡಿಗೇರಿ ಪೊಲೀಸ್​ ಠಾಣೆಯಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಇನ್ಸ್ಪೆಕ್ಟರ್ ಮತ್ತು ಹೆಡ್​ ಕಾನ್ಸ್​ಟೇಬಲ್ ಕರ್ತವ್ಯ ಲೋಪ ತೋರಿರುವುದು ಕಂಡುಬಂದಿದೆ. ಹೀಗಾಗಿ ಪೊಲೀಸ್​ ಕಮಿಷನರ್​ ಕಠಿಣ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಅಂಜಲಿ ಕೊಲೆ ಪ್ರಕರಣದ ಆರೋಪಿ ಪತ್ತೆಗೆ ಎರಡು ವಿಶೇಷ ತಂಡ ರಚನೆ: ರೇಣುಕಾ ಸುಕುಮಾರ್ - Anjali murder case

ಅಂಜಲಿ ಹತ್ಯೆಗೆ ಖಂಡನೆ: ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​ನಲ್ಲಿ ಪ್ರತಿಭಟನೆ - Protest in Hubballi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.