ETV Bharat / bharat

ಸೋನಿಯಾ ಗಾಂಧಿ ವಿಚಾರಣೆ: ಇಡಿ, ಕಾಂಗ್ರೆಸ್​ ಕಚೇರಿಗೆ ಖಾಕಿ ಸರ್ಪಗಾವಲು

author img

By

Published : Jul 21, 2022, 11:02 AM IST

Updated : Jul 21, 2022, 11:37 AM IST

ಸೋನಿಯಾ ಗಾಂಧಿ ವಿಚಾರಣೆ: ಇಡಿ, ಕಾಂಗ್ರೆಸ್​ ಕಚೇರಿಗೆ ಖಾಕಿ ಸರ್ಪಗಾವಲು
ಸೋನಿಯಾ ಗಾಂಧಿ ವಿಚಾರಣೆ: ಇಡಿ, ಕಾಂಗ್ರೆಸ್​ ಕಚೇರಿಗೆ ಖಾಕಿ ಸರ್ಪಗಾವಲು

ಕಾಂಗ್ರೆಸ್​ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನು ಇಂದು ಇಡಿ ಅಧಿಕಾರಿಗಳು ನ್ಯಾಷನಲ್​ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್​ ಪ್ರತಿಭಟನೆ ನಡೆಸುತ್ತಿದೆ.

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಂದು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಲಿದ್ದು, ಇತ್ತ ಕಾಂಗ್ರೆಸ್​ ಪ್ರತಿಭಟನೆ ನಡೆಸುತ್ತಿದೆ. ಹೀಗಾಗಿ ಇಲ್ಲಿನ ಕಾಂಗ್ರೆಸ್ ಪ್ರಧಾನ ಕಚೇರಿ ಮತ್ತು ಜಾರಿ ನಿರ್ದೇಶನಾಲಯ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ.

ಸೋನಿಯಾ ವಿಚಾರಣೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕೇಂದ್ರ ಕಚೇರಿಯಿಂದ ಇಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಬಹುದು ಎಂದು ಹೇಳಲಾಗಿದೆ. ಪ್ರತಿಭಟನಾಕಾರರನ್ನು ಇಡಿ ಕಚೇರಿಯತ್ತ ತೆರಳುವುದನ್ನು ತಡೆಯಲು ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆ ನೀಡಲಾಗಿದೆ.

ಇಡಿ, ಕಾಂಗ್ರೆಸ್​ ಕಚೇರಿಗೆ ಖಾಕಿ ಸರ್ಪಗಾವಲು
ಇಡಿ, ಕಾಂಗ್ರೆಸ್​ ಕಚೇರಿಗೆ ಖಾಕಿ ಸರ್ಪಗಾವಲು

ಇದಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ, ಅರೆಸೇನಾ ಪಡೆ ಮತ್ತು ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ. ಇದಲ್ಲದೇ, ಪ್ರತಿಭಟನೆಯ ಮುನ್ಸೂಚನೆಯ ಹಿನ್ನೆಲೆ ದೆಹಲಿ ಸಂಚಾರ ಪೊಲೀಸರು ಕೆಲವು ರಸ್ತೆಗಳನ್ನು ಬಂದ್​ ಮಾಡಿದ್ದು, ಪರ್ಯಾಯ ರಸ್ತೆಗಳನ್ನು ಬಳಸಲು ಜನರಿಗೆ ಸಲಹೆ ನೀಡಲಾಗಿದೆ.

ಪ್ರಿಯಾಂಕಾ ಭೇಟಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಂದು ಇಡಿ ಮುಂದೆ ಹಾಜರಾಗಲಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಭೇಟಿ ಮಾಡಿದರು. ಸೋನಿಯಾ ನಿವಾಸಕ್ಕೆ ತೆರಳಿ ಕೆಲವೊತ್ತು ಚರ್ಚಿಸಿದರು ಎಂದು ತಿಳಿದು ಬಂದಿದೆ.

ಸೋನಿಯಾಗೆ ಮಾತಿನ ಸಮಸ್ಯೆ?: ಕೊರೊನಾಗೆ ತುತ್ತಾಗಿದ್ದ ಸೋನಿಯಾ ಗಾಂಧಿ ಅವರು ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದು, ಮಾತಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ವಿಚಾರಣೆಯನ್ನು ತಾತ್ಕಾಲಿಕವಾಗಿ ಕೈಬಿಡಬೇಕು ಎಂದು ಕೋರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋನಿಯಾ ಗಾಂಧಿ ಅವರ ವೈದ್ಯಕೀಯ ದಾಖಲೆಗಳೊಂದಿಗೆ ಇಡಿ ಕಚೇರಿಗೆ ಆಗಮಿಸಿ ತಮ್ಮ ತಾಯಿ ಮಾತನಾಡುವ ಸಮಸ್ಯೆ ಎದುರಿಸುತ್ತಿರುವ ಕಾರಣ ಅವರಿಗೆ ವಿಚಾರಣೆಯಿಂದ ವಿನಾಯಿತಿ ನೀಡಲು ಕೋರಬಹುದು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ಗುರುವಾರ ತಿಳಿಸಿವೆ. ಕೋವಿಡ್ ನಂತರದ ಸಮಸ್ಯೆಗಳಿಂದಾಗಿ ಸೋನಿಯಾ ಗಾಂಧಿ ಅವರು ಮಾತನಾಡುವಾಗ ತೊದಲುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಶೀಘ್ರದಲ್ಲೇ ಮಿನಿ ಸಂಪುಟ ವಿಸ್ತರಣೆ: ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸೇರ್ಪಡೆ ಸಾಧ್ಯತೆ?

Last Updated :Jul 21, 2022, 11:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.