ETV Bharat / bharat

24 ವಾರಗಳ ಗರ್ಭಪಾತಕ್ಕೆ ಅವಕಾಶ ನೀಡಿದ ಸುಪ್ರೀಂ..'ಸುರಕ್ಷತೆಯ ಅಂಶ' ಅಧ್ಯಯನಕ್ಕೆ AIIMSಗೆ ನಿರ್ದೇಶನ

author img

By

Published : Jul 21, 2022, 8:38 PM IST

SUPREME COURT
SUPREME COURT

ಗರ್ಭಿಣಿಯಾದ ಅವಿವಾಹಿತ ಮಹಿಳೆಗೆ ತನ್ನ 24 ವಾರಗಳ ಗರ್ಭವನ್ನು ತೆಗೆದುಹಾಕಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಆದರೆ, ಸುರಕ್ಷತೆ ಅಂಶ ಅಧ್ಯಯನಕ್ಕೆ ಏಮ್ಸ್​ಗೆ ನಿರ್ದೇಶನ ನೀಡಿದೆ.

ನವದೆಹಲಿ: ಗರ್ಭಪಾತವು ಮಹಿಳೆಯ ಜೀವಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಅನುಮೋದಿಸಿದರೆ, ಅವಿವಾಹಿತ ಮಹಿಳೆ 24 ವಾರಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂಕೋರ್ಟ್​​ ಅನುಮತಿ ನೀಡಿದೆ. ಅದಕ್ಕಾಗಿ ವೈದ್ಯಕೀಯ ಮಂಡಳಿ ರಚಿಸುವಂತೆ ಏಮ್ಸ್​ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ವೈದ್ಯಕೀಯ ಮಂಡಳಿ ರಚಿಸುವಂತೆ ತಿಳಿಸಿರುವ ಸುಪ್ರೀಂಕೋರ್ಟ್​​ ಗರ್ಭಾವಸ್ಥೆ ಸುರಕ್ಷಿತವಾಗಿದ್ದರೆ ಗರ್ಭಪಾತ ಮಾಡಿದ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಏಮ್ಸ್​ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ಜಸ್ಟಿಸ್​​ ಡಿವೈ ಚಂದ್ರಚೂಡ್​ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್​ ಅವರನ್ನೊಳಗೊಂಡ ಪೀಠ ಮಹಿಳೆಯೊಬ್ಬರ ಮನವಿ ಮೇರೆಗೆ ಈ ಆದೇಶ ನೀಡಿದೆ. ಈಗಾಗಲೇ ದೆಹಲಿ ಹೈಕೋರ್ಟ್​ ಈ ಮನವಿ ತಿರಸ್ಕಾರ ಮಾಡಿದೆ. ಇದನ್ನೇ ಪ್ರಶ್ನೆ ಮಾಡಿದ್ದ ಅವಿವಾಹಿತ ಮಹಿಳೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿರಿ: ಸಹೋದ್ಯೋಗಿ ಮೇಲೆ ಅತ್ಯಾಚಾರ, ಗರ್ಭಪಾತ.. ಆರೋಪಿಗೆ ಹೈಕೋರ್ಟ್​ ಜಾಮೀನು ನೀಡಿದ್ದೇಕೆ ಗೊತ್ತಾ?

ಮಹಿಳೆ ಅವಿವಾಹಿತೆ ಎಂಬ ಕಾರಣಕ್ಕೆ ಮಹಿಳೆಯ ಗರ್ಭಪಾತ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ಎಂದಿರುವ ಡಿವೈ ಚಂದ್ರಚೂಡ್​​ ನೇತೃತ್ವದ ಕೋರ್ಟ್​, ಏಮ್ಸ್​​ ವೈದ್ಯಕೀಯ ಮಂಡಳಿಯ ನಿಯಮಗಳಿಗೆ ಅನುಗುಣವಾಗಿದ್ದರೆ ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಮಧ್ಯಂತರ ತೀರ್ಪು ನೀಡಿದೆ.

ಮಹಿಳೆಯ ಜೀವಕ್ಕೆ ಯಾವುದೇ ತೊಂದರೆಯಾಗದಂತೆ ಭ್ರೂಣವನ್ನು ತೆಗೆಯಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲು ಏಮ್ಸ್​​ ವೈದ್ಯಕೀಯ ಮಂಡಳಿಗೆ ಅನುಮತಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.