ETV Bharat / bharat

ಪುದುಚೇರಿಯಲ್ಲಿ ಪ್ರವಾಸಿ ಮಹಿಳೆಯ ದಿರಿಸಿನ ಬಗ್ಗೆ ಪೊಲೀಸ್​ ಆಕ್ಷೇಪ: ವಿವಾದದ ವಿಡಿಯೋ ವೈರಲ್​

author img

By

Published : Feb 28, 2022, 9:53 AM IST

Controversy
ವಿವಾದದ ವಿಡಿಯೋ

ಪ್ರವಾಸಿ ಮಹಿಳೆಯೊಬ್ಬರು ಧರಿಸಿದ್ದ ಬಟ್ಟೆಯ ಬಗ್ಗೆ ಪೊಲೀಸ್​ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿ ವಿವಾದ ಉಂಟಾದ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುದುಚೇರಿ: ಕಳೆದ ಶನಿವಾರ ಪ್ರವಾಸಿ ಮಹಿಳೆಯೊಬ್ಬರು ಧರಿಸಿದ್ದ ಬಟ್ಟೆಯ ಬಗ್ಗೆ ಪೊಲೀಸ್​ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿ ವಿವಾದ ಉಂಟಾದ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುದುಚೇರಿಯ ಬೀಚ್​ ರಸ್ತೆ, ಅರವಿಂದ ಆಶ್ರಮ, ಆರೋವಿಲ್ಲೆ ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಇಲ್ಲಿಗೆ ಬೆಂಗಳೂರು, ತಮಿಳುನಾಡು, ಕೇರಳ ಸೇರಿದಂತೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಭೇಟಿ ನೀಡುವುದು ಸಾಮಾನ್ಯ. ಕಳೆದ ಶನಿವಾರ (ಫೆ.26)ದಂದು ಮಹಿಳೆಯರ ಬಟ್ಟೆಯ ಬಗ್ಗೆ ಪೊಲೀಸ್​ ಸಿಬ್ಬಂದಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ವಿವಾದ ಹುಟ್ಟು ಹಾಕಿತ್ತು.

ಪುದುಚೇರಿಯಲ್ಲಿ ಪ್ರವಾಸಿ ಮಹಿಳೆಯ ದಿರಿಸಿನ ಬಗ್ಗೆ ಪೊಲೀಸ್​ ಆಕ್ಷೇಪ

ವಿಡಿಯೋದಲ್ಲಿರುವಂತೆ ಪ್ರವಾಸಿ ಮಹಿಳೆಯೊಬ್ಬರು ಮಾಡರ್ನ್ ಡ್ರೆಸ್​ ಹಾಕಿಕೊಂಡು ಅರವಿಂದ ಆಶ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸರು ಮಹಿಳೆಯ ಬಟ್ಟೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸ್ಥಳದಲ್ಲಿ ಅಂತಹ ಬಟ್ಟೆಗಳನ್ನು ಹಾಕಿಕೊಳ್ಳಬಾರದು ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.

ಇದಕ್ಕೆ ಅಸಮಾಧಾನಗೊಂಡ ಮಹಿಳೆ ತನ್ನ ದಿರಿಸಿನ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಇದನ್ನು ಅಲ್ಲಿಯೇ ಇದ್ದ ಮತ್ತೊಬ್ಬ ಪ್ರವಾಸಿಗರು ವಿಡಿಯೋ ಮಾಡಿದ್ದಾರೆ. ಇದೀಗ ವೈರಲ್​ ಆಗಿದ್ದು, ತರಹೇವಾರಿ ಕಮೆಂಟ್​ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: 14 ಮಕ್ಕಳು ಸೇರಿ 352 ಮಂದಿ ಸಾವು ಎಂದ ಉಕ್ರೇನ್‌; ಮೊದಲ ಬಾರಿಗೆ ಪ್ರಾಣಹಾನಿ ಒಪ್ಪಿಕೊಂಡ ರಷ್ಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.