ETV Bharat / bharat

ದೇಶಾದ್ಯಂತ ಕಳೆದ 14 ವರ್ಷಗಳಲ್ಲಿ 1,357 ಆನೆಗಳ ಸಾವು.. ಆರ್​ಟಿಐ ಅರ್ಜಿಯಲ್ಲಿ ಬಯಲಾದ ಪ್ರಮುಖ ಅಂಶವೇನು ಗೊತ್ತಾ?

author img

By ETV Bharat Karnataka Team

Published : Sep 21, 2023, 5:40 PM IST

over-1300-elephants-died-in-india-in-last-14-years-reveals-rti-reply
ದೇಶಾದ್ಯಂತ ಕಳೆದ 14 ವರ್ಷಗಳಲ್ಲಿ 1,357 ಆನೆಗಳ ಸಾವು... ಆರ್​ಟಿಐ ಅರ್ಜಿಯಲ್ಲಿ ಬಯಲಾದ ಪ್ರಮುಖವೇನು ಗೊತ್ತಾ?

Death of elephants in India: ಉತ್ತರಾಖಂಡದ ಆರ್​ಟಿಐ ಕಾರ್ಯಕರ್ತ ಹೇಮಂತ್ ಗೋನಿಯಾ ಸಲ್ಲಿಸಿದ್ದ ಆರ್​ಟಿಐ ಅರ್ಜಿಗೆ ಸಿಕ್ಕ ಉತ್ತರದ ಪ್ರಕಾರ, ದೇಶದಲ್ಲಿ ಕಳೆದ 14 ವರ್ಷಗಳಲ್ಲಿ 1,357 ಆನೆಗಳು ಮೃತಪಟ್ಟಿವೆ. ಬಹುತೇಕ ಆನೆಗಳು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.

ಹಲ್ದ್ವಾನಿ (ಉತ್ತರಾಖಂಡ): ಆನೆಗಳಿಗೆ ಸಂಬಂಧಿಸಿದಂತೆ ಆತಂಕಕಾರಿ ಮಾಹಿತಿಯೊಂದು ಹೊರ ಬಿದ್ದಿದೆ. ಕಳೆದ 14 ವರ್ಷಗಳಲ್ಲಿ ದೇಶಾದ್ಯಂತ ಒಟ್ಟಾರೆ 1,357 ಆನೆಗಳು ಸಾವನ್ನಪ್ಪಿವೆ ಎಂದು ಮಾಹಿತಿ ಹಕ್ಕು ಅರ್ಜಿ (ಆರ್​ಟಿಐ) ಬಹಿರಂಗಪಡಿಸಿದೆ. ಯಾವ, ಯಾವ ಕಾರಣಗಳಿಂದಾಗಿ ಎಷ್ಟು ಆನೆಗಳು ಮೃತಪಟ್ಟಿವೆ ಎಂಬ ಅಂಕಿ-ಅಂಶಗಳು ಸಹ ಆರ್​ಟಿಐ ಅರ್ಜಿಗೆ ಉತ್ತರ ರೂಪದಲ್ಲಿ ಲಭ್ಯವಾಗಿದೆ.

ಉತ್ತರಾಖಂಡದ ಹಲ್ದ್ವಾನಿ ನಿವಾಸಿಯಾದ ಆರ್‌ಟಿಐ ಕಾರ್ಯಕರ್ತ ಹೇಮಂತ್ ಗೋನಿಯಾ ಎಂಬುವರು ಜೂನ್ ತಿಂಗಳಲ್ಲಿ ಆನೆಗಳ ಕುರಿತಂತೆ ಪ್ರಧಾನಮಂತ್ರಿ ಕಚೇರಿಯಲ್ಲಿರುವ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಕೇಳಿದ್ದರು. ಆರ್​ಐಟಿ ಅರ್ಜಿ ಮೂಲಕ ನಾಲ್ಕು ಪ್ರಮುಖ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕೆ ಆನೆ ಯೋಜನೆ (Project Elephant)ಯ ವಿಜ್ಞಾನಿ ಡಾ.ಮುತಮಿಜ್ ಸೆಲ್ವನ್ ಅವರ ಹೆಸರಲ್ಲಿ ಇತ್ತೀಚೆಗೆ ಆರ್‌ಟಿಐ ಅರ್ಜಿಗೆ ಉತ್ತರ ಸ್ವೀಕರಿಸಲಾಗಿದೆ ಎಂದು ಗೋನಿಯಾ ತಿಳಿಸಿದ್ದಾರೆ.

ಉತ್ತರಾಖಂಡದ ಆರ್​ಟಿಐ ಕಾರ್ಯಕರ್ತ ಸಲ್ಲಿಸಿದ್ದ ಆರ್​ಟಿಐ ಅರ್ಜಿಯಿಂದ ಲಭ್ಯವಾದ ಮಾಹಿತಿ
ಉತ್ತರಾಖಂಡದ ಆರ್​ಟಿಐ ಕಾರ್ಯಕರ್ತ ಸಲ್ಲಿಸಿದ್ದ ಆರ್​ಟಿಐ ಅರ್ಜಿಯಿಂದ ಲಭ್ಯವಾದ ಮಾಹಿತಿ

ಇದನ್ನೂ ಓದಿ: ಆಂಧ್ರದಲ್ಲಿ ವಿದ್ಯುತ್ ಪ್ರವಹಿಸಿ ನಾಲ್ಕು ಆನೆಗಳ ದಾರುಣ ಸಾವು

ಆರ್‌ಟಿಐ ಅರ್ಜಿಗೆ ಸಿಕ್ಕ ಉತ್ತರದ ಪ್ರಕಾರ, ಕಳೆದ 14 ವರ್ಷಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 1,357 ಆನೆಗಳು ಮೃತಪಟ್ಟಿವೆ. ಇವುಗಳ ಸಾವಿಗೆ ಪ್ರಮುಖವಾಗಿ ವಿದ್ಯುತ್​ ಮತ್ತು ರೈಲು ಅಪಘಾತ ಹಾಗೂ ಬೇಟೆ ಎಂಬ ಕಾರಣಗಳನ್ನೂ ತಿಳಿಸಲಾಗಿದೆ. ಒಟ್ಟಾರೆ 1,357 ಆನೆಗಳ ಪೈಕಿ 898 ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ. 228 ಆನೆಗಳು ರೈಲು ಡಿಕ್ಕಿಯಿಂದ ಮೃತಪಟ್ಟಿವೆ. 191 ಆನೆಗಳು ಬೇಟೆಗಾರರಿಂದ ಬಲಿಯಾಗಿವೆ. ಸುಮಾರು 40 ಆನೆಗಳು ವಿಷ ಸೇವಿಸಿ ಸಾವನ್ನಪ್ಪಿವೆ ಎಂಬ ಅಂಶ ಬಹಿರಂಗವಾಗಿದೆ ಎಂದು ಅರ್ಜಿದಾರ ಹೇಮಂತ್ ಗೋನಿಯಾ ವಿವರಿಸಿದ್ದಾರೆ. ಉತ್ತರಾಖಂಡವೊಂದರಲ್ಲೇ ಕಳೆದ 14 ವರ್ಷಗಳಲ್ಲಿ 27 ಆನೆಗಳು ರೈಲಿಗೆ ಸಿಲುಕಿ ಅಸುನೀಗಿವೆ ಎಂದೂ ಹೇಳಿದ್ದಾರೆ.

ದೇಶಾದ್ಯಂತ ಒಟ್ಟು 29,964 ಆನೆಗಳು: ದೇಶಾದ್ಯಂತ 29,964 ಒಟ್ಟು ಆನೆಗಳು ಇವೆ. ಇದರಲ್ಲಿ ಈಶಾನ್ಯ ಅರುಣಾಚಲ, ಅಸ್ಸೋಂ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್​, ಪಶ್ಚಿಮ ಬಂಗಾಳ, ಮಣಿಪುರ ಮತ್ತು ಮಿಜೋರಾಂ ಒಳಗೊಂಡಿರುವ ಈಶಾನ್ಯ ಭಾಗದಲ್ಲಿ ಅಂದಾಜು 10,139 ಆನೆಗಳಿವೆ. ಒಡಿಶಾ, ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ (ದಕ್ಷಿಣ) ಒಳಗೊಂಡಿರುವ ಪೂರ್ವ ಮಧ್ಯ ಭಾಗದಲ್ಲಿ 3,128 ಆನೆಗಳು ಹಾಗೂ ವಾಯುವ್ಯ ಭಾಗದಲ್ಲಿ ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ 2,085 ಆನೆಗಳು ಹಾಗೂ ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳ ಒಳಗೊಂಡಿರುವ ದಕ್ಷಿಣ ಭಾಗದಲ್ಲಿ 14,612 ಆನೆಗಳಿವೆ ಎಂಬ ಮಾಹಿತಿ ನೀಡಲಾಗಿದೆ ಎಂದು ಗೋನಿಯಾ ಹೇಳಿದ್ದಾರೆ.

ಇದೇ ವೇಳೆ, ದೇಶದಲ್ಲಿ ಆನೆಗಳು ಹಠಾತ್ತನೆ ಸಾವಿನ ರೀತಿಯನ್ನು ಗಮನಿಸಿದರೆ ಅವುಗಳ ಸಂರಕ್ಷಣೆ ಹೆಸರಲ್ಲಿ ಬಜೆಟ್‌ನಲ್ಲಿ ಭಾರಿ ಖರ್ಚು ಮಾಡುತ್ತಿರುವ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಕೇಂದ್ರ ಅರಣ್ಯ ಪರಿಸರ ಸಚಿವಾಲಯವು ಆನೆಗಳ ರಕ್ಷಣೆ, ಸಂರಕ್ಷಣೆ ಮತ್ತು ಉತ್ತೇಜನಕ್ಕೆ ವಿಶೇಷವಾದ ಪ್ರಯತ್ನಯನ್ನು ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ 60 ಹೊಸ ಆನೆ ಕಾರಿಡಾರ್​ ಗುರುತಿಸಿದ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.