ETV Bharat / bharat

ದೇಶದಲ್ಲಿ 60 ಹೊಸ ಆನೆ ಕಾರಿಡಾರ್​ ಗುರುತಿಸಿದ ಕೇಂದ್ರ ಸರ್ಕಾರ

author img

By ETV Bharat Karnataka Team

Published : Aug 24, 2023, 10:44 PM IST

ಆನೆಗಳು ತಮ್ಮ ಆವಾಸಸ್ಥಾನದಿಂದ ಮತ್ತೊಂದು ಪ್ರದೇಶಕ್ಕೆ ಸುಲಭ ಸಂಚಾರ ನಡೆಸಲು, ಮಾನವ-ಆನೆ ಸಂಘರ್ಷ ತಪ್ಪಿಸಲು, ಅಪಘಾತಕ್ಕೆ ಪ್ರಾಣಿಗಳು ಬಲಿಯಾಗುವುದನ್ನು ತಡೆಯಲು ಈ ಕಾರಿಡಾರ್​ ಗುರುತಿಸಲಾಗಿದೆ.

60 new elephant corridor identified by center
60 new elephant corridor identified by center

ನವದೆಹಲಿ: ಕೇಂದ್ರ ಸರ್ಕಾರ ಹೊಸದಾಗಿ 60 ಆನೆ ಕಾರಿಡಾರ್‌ಗಳನ್ನು ಗುರುತಿಸಿದೆ. ಆನೆಗಳ ಎರಡು ದೊಡ್ಡ ಆವಾಸಸ್ಥಾನಗಳನ್ನು ಸಂಪರ್ಕಿಸುವ ಮಾರ್ಗವೇ ಈ ಆನೆ ಕಾರಿಡಾರ್​. ಇವು ಆನೆಗಳು ಮುಕ್ತವಾಗಿ ತಮ್ಮ ಆವಾಸಸ್ಥಾನದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲು ಅವಕಾಶ ಮಾಡಿಕೊಡುತ್ತದೆ. ಹೊಸ ಆನೆ ಕಾರಿಡಾರ್​ ಸೇರ್ಪಡೆ ಮೂಲಕ ದೇಶದಲ್ಲಿ ಇದೀಗ ಆನೆ ಕಾರಿಡಾರ್‌ಗಳ​ ಸಂಖ್ಯೆ 150 ತಲುಪಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ವರದಿ ತಿಳಿಸಿದೆ.

ಕಡೆಯದಾಗಿ 2010ರಲ್ಲಿ ಕೇಂದ್ರ ಸರ್ಕಾರ ಆನೆ ಕಾರಿಡಾರ್​ ಗುರುತಿಸಿ, ಒಟ್ಟು 88 ಆನೆ ಕಾರಿಡಾರ್​ ಪಟ್ಟಿ ಬಿಡುಗಡೆ ಮಾಡಿತ್ತು. ಈ ವರದಿಯನ್ನು ಕೇಂದ್ರ ಪರಿಸರ ಖಾತೆ ಸಚಿವ ಭುಪೇಂದ್ರ ಯಾದವ್ ಈ ತಿಂಗಳ​​ ಆಗಸ್ಟ್​ 12ರಂದು ಪ್ರಕಟಿಸಿದ್ದರು. ವರದಿಯಲ್ಲಿ 2010ರಲ್ಲಿ ಪಟ್ಟಿ ಮಾಡಲಾದ 88 ಆನೆ ಕಾರಿಡಾರ್‌ಗಳಲ್ಲಿ 74 ಆನೆ ಕಾರಿಡಾರ್​ಗಳ ಬಳಕೆ ಸಕ್ರಿಯವಾಗಿವೆ ಎಂದು ತಿಳಿಸಲಾಗಿದೆ.

ಕಾರಿಡಾರ್​ಗಳನ್ನು ಪತ್ತೆ ಮಾಡಿರುವುದರಿಂದ ಇವು ಆನೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುರಕ್ಷಿತವಾಗಿ ಚಲಿಸಲು ಅವಕಾಶ ಮಾಡಿಕೊಡುತ್ತದೆ. ಮಾನವ-ಪ್ರಾಣಿಗಳ ಸಂಘರ್ಷವನ್ನು ತಗ್ಗಿಸುವ ಜೊತೆಗೆ ಸಂಚಾರದ ವೇಳೆ ಪ್ರಾಣಿಗಳ ಅಪಘಾತ ಕಡಿಮೆ ಮಾಡುತ್ತದೆ. 2019-21ರವರೆಗೆ ಮಾನವ- ಆನೆಗಳ ಸಂಘರ್ಷದಲ್ಲಿ 301 ಆನೆಗಳು ಮತ್ತು 1,401 ಮನುಷ್ಯರು ಸಾವನ್ನಪ್ಪಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚಿನ ಆನೆ ಕಾರಿಡರ್ (26)​ ಗುರುತಿಸಲಾಗಿದೆ. 2021ರಲ್ಲಿ ಸಚಿವಾಲಯ ಕಾರಿಡಾರ್​ ಗುರುತಿಸುವಿಕೆಯನ್ನು ಆರಂಭಿಸಿತು. ಎರಡು ವರ್ಷಗಳ ಬಳಿಕ ನಾವು ವರದಿ ಸಿದ್ಧ ಮಾಡಿದ್ದು, 150 ಕಾರಿಡಾರ್​ ಪತ್ತೆ ಮಾಡಿದ್ದೇವೆ ಎಂದು ಹೇಳಿದೆ. ಹಾಗೆಂದ ಮಾತ್ರಕ್ಕೆ ಕೇವಲ 150 ಕಾರಿಡಾರ್​ ಇದೆ ಎಂದು ಅರ್ಥವಲ್ಲ. ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಆದರೆ, ನಮ್ಮಿಂದ ಪತ್ತೆ ಮಾಡಲು ಸಾಧ್ಯವಾಗಿದ್ದು 150 ಎಂದು ಸಚಿವಾಲಯದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

MoEFCCನ ಎಲಿಫೆಂಟ್ ಪ್ರಾಜೆಕ್ಟ್​ ಮತ್ತು ರಾಜ್ಯ ಅರಣ್ಯ ಇಲಾಖೆ ಜೊತೆ ಭಾರತದ ವನ್ಯಜೀವಿ ಸಂಸ್ಥೆಯ ತಾಂತ್ರಿಕ ಬೆಂಬಲದ ಒಟ್ಟಾರೆ ಪ್ರಯತ್ನದಿಂದ ಈ ವರದಿ ಹೊರಬಂದಿದೆ. ಶೇ 84ರಷ್ಟು (126) ಆನೆ ಕಾರಿಡಾರ್​ಗಳು ರಾಜ್ಯ ಗಡಿಯೊಳಗೆ ಬಂದಿದೆ. ಶೇ 12ರಷ್ಟು ಅಂದರೆ 19 ಕಾರಿಗಳು ಅಂತರರಾಜ್ಯ ಆನೆ ಕಾರಿಡಾರ್​ ಆಗಿದ್ದು, ಇದು ರಾಜ್ಯದಿಂದ ರಾಜ್ಯಕ್ಕೆ ಪ್ರವೇಶ ಹೊಂದಿದೆ. ಇದರ ಜೊತೆಗೆ 6 ಅಂತರರಾಷ್ಟ್ರೀಯ ಆನೆ ಕಾರಿಡಾರ್‌ಗಳಿದ್ದು, ಇದು ಭಾರತ ಮತ್ತು ನೇಪಾಳ ಗಡಿ ಹೊಂದಿವೆ. ಈ ಕಾರಿಡಾರ್​ಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ರಾಜ್ಯ ಸರ್ಕಾರದೊಂದಿಗೆ ಭೂ-ಮೌಲ್ಯಮಾಪನ ಸಮೀಕ್ಷೆಗಳನ್ನು ನಡೆಸಿದೆ.

ಜಗತ್ತಿನಲ್ಲಿಯೇ ಏಷ್ಯಾನ್​ ಆನೆ ಅಳಿವಿನಂಚಿನ ಪ್ರಾಣಿ. ಪ್ರಸ್ತುತ ಏಷ್ಯಾದ 13 ಪ್ರದೇಶಗಳಲ್ಲಿ ಈ ಆನೆಗಳಿವೆ. ಭಾರತ ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಆನೆಗಳ ಸಂತತಿ, ಅಂದರೆ ಶೇ 60 ರಷ್ಟನ್ನು ಹೊಂದಿದೆ. (ಎಎನ್​ಐ)

ಇದನ್ನೂ ಓದಿ: ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.