ETV Bharat / bharat

ದೇಶದಲ್ಲಿ ಅಲ್ಪ ಕುಸಿತ ಕಂಡ ಕೊಲೆ ಪ್ರಕರಣಗಳು; ಎನ್​ಸಿಆರ್​ಬಿ ದತ್ತಾಂಶದಲ್ಲಿ ಬಹಿರಂಗ

author img

By ETV Bharat Karnataka Team

Published : Dec 4, 2023, 4:14 PM IST

ಮೆಟ್ರೋಪಾಲಿಟನ್​ ನಗರದಲ್ಲಿ ಶೇ 3.9ರಷ್ಟು ಕೊಲೆ ಪ್ರಕರಣಗಳು ಹೆಚ್ಚಾಗಿದ್ದು, 2022ರಲ್ಲಿ 2,031 ಕೊಲೆ ಪ್ರಕರಣ ಹೆಚ್ಚಾಗಿದೆ. ಲಕ್ಷದ ಲೆಕ್ಕದಲ್ಲಿ ಅಪರಾಧ ದರ 2.1ರಷ್ಟಿದೆ.

marginal decrease in number of murder cases across India in 2022
marginal decrease in number of murder cases across India in 2022

ನವದೆಹಲಿ: 2022ರಲ್ಲಿ ಭಾರತದಲ್ಲಿ ಕೊಲೆ ಪ್ರಕರಣಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ವರದಿ ತಿಳಿಸಿದೆ. ಇತ್ತೀಚಿಗೆ ವರದಿ ಪ್ರಕಟಿಸಿರುವ ಎನ್​ಸಿಆರ್​ಬಿ, 2021ರಲ್ಲಿ 28,522 ಕೊಲೆ ಪ್ರಕರಣ ದಾಖಲಾದರೆ, 2022ರಲ್ಲಿ 28,522 ಕೊಲೆ ಕೇಸ್​ಗಳು ದಾಖಲಾಗಿವೆ. ಸರಾಸರಿ ದಿನದಲ್ಲಿ 76 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.

ಇನ್ನು ಈ ಕೊಲೆ ಪ್ರಕರಣಗಳ ಹಿಂದೆ ಪ್ರಾಥಮಿಕ ಕಲಹಗಳು ಕಾರಣವಾಗಿವೆ. 9,962 ಕೊಲೆ ಪ್ರಕರಣದ ಹಿಂದಿನ ಕಾರಣ ಇದಾಗಿದ್ದು, ವೈಯಕ್ತಿಕ ದ್ವೇಷದಿಂದ 3,761 ಕೊಲೆ ಕೇಸ್​ ದಾಖಲಾಗದರೆ, ಲಾಭದ ದುರಾಸೆ 1,884 ಕೊಲೆ ಹಿಂದಿನ ಕಾರಣವಾಗಿದೆ.

ದತ್ತಾಂಶಗಳು ತಿಳಿಸಿರುವಂತೆ ಶೇ 95.4ರಷ್ಟು ಕೊಲೆಗಳಲ್ಲಿ ಆರೋಪಿಗಳು ವಯಸ್ಕರಾಗಿದ್ದು, ಶೇ 70ರಷ್ಟು ಪುರುಷರಿಂದ ಕೊಲೆ ನಡೆದಿದೆ. 8,125 ಕೊಲೆ ಹಿಂದೆ ಮಹಿಳೆಯರು ಆರೋಪಿಗಳಾಗಿದ್ದರೆ, 9 ಮಂದಿ ತೃತೀಯ ಲಿಂಗಿಗಳು ಸಹ ಹತ್ಯೆ ಕೇಸ್​ನಲ್ಲಿ ಭಾಗಿಯಾಗಿದ್ದಾರೆ.

ಮೆಟ್ರೋಪಾಲಿಟನ್​ ನಗರದಲ್ಲಿ ಶೇ 3.9ರಷ್ಟು ಕೊಲೆ ಪ್ರಕರಣಗಳು ಹೆಚ್ಚಾಗಿದ್ದು, 2022ರಲ್ಲಿ 2,031 ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಲಕ್ಷದ ಲೆಕ್ಕದಲ್ಲಿ ಅಪರಾಧ ದರ 2.1ರಷ್ಟಿದೆ.

ಎನ್​ಸಿಆರ್​ಪಿ ವರದಿ ಅನುಸಾರ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಎಫ್​ಐಆರ್​ ಪ್ರಕರಣಗಳು ಅಂದ್ರೆ 3,491 ಎಫ್​ಐಆರ್​ ದಾಖಲಾಗದರೆ, ಬಿಹಾರದಲ್ಲಿ 2,930, ಮಹಾರಾಷ್ಟ್ರದಲ್ಲಿ 2,295, ಮಧ್ಯ ಪ್ರದೇಶದಲ್ಲಿ 1,978 ಮತ್ತು ರಾಜಸ್ಥಾನದಲ್ಲಿ 1,834 ಎಫ್​ಐಆರ್​ ದಾಖಲಾಗಿವೆ. ದೇಶದ ಒಟ್ಟಾರೆ ಪ್ರಕರಣದಲ್ಲಿ ಈ ಐದು ರಾಜ್ಯಗಳ ಕೊಲೆ ಪ್ರಕರಣ ದರ ಶೇ 43.92ರಷ್ಟಿದೆ.

ಇನ್ನು ಸಿಕ್ಕಿಂನಲ್ಲಿ (9), ನಾಗಾಲ್ಯಾಂಡ್​ನಲ್ಲಿ 21, ಮಿಜೋರಾಂನಲ್ಲಿ 31, ಗೋವಾದಲ್ಲಿ 44 ಮತ್ತು ಮಣಿಪುರದಲ್ಲಿ 47 ಕೊಲೆ ಪ್ರಕರಣದಲ್ಲಿ ಎಫ್​ಐಆರ್​ ದಾಖಲಾಗಿವೆ.

ಜಾರ್ಖಂಡ್​ನಲ್ಲಿ ಲಕ್ಷ ಜನಸಂಖ್ಯೆಗೆ 4 ಅಂದರೆ 1550 ಕೊಲೆ ಪ್ರಕರಣ ದಾಖಲಾಗಿವೆ. ಅರುಣಾಚಲ್​ ಪ್ರದೇಶದಲ್ಲಿ 3.6, ಛತ್ತೀಸ್​ಗಢ್​ ಮತ್ತು ಹರಿಯಾಣಗಳೆರಡರಲ್ಲೂ 3.4, ಉತ್ತರ ಪ್ರದೇಶದಲ್ಲಿ 1.5, ಬಿಹಾರದಲ್ಲಿ 2.3, ಮಹಾರಾಷ್ಟ್ರದಲ್ಲಿ 1.8 ಮತ್ತು ಮಧ್ಯ ಪ್ರದೇಶದಲ್ಲಿ 2.3 ಹಾಗೂ ರಾಜಸ್ಥಾನದಲ್ಲಿ 2.3 ಪ್ರಕರಣದ ದರ ಇದೆ.

ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ 2022ರಲ್ಲಿ 509 ಪ್ರಕರಣಗಳು ದಾಖಲಾದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 99, ಪುದುಚೇರಿ 30, ಚಂಢೀಗಡ್​ನಲ್ಲಿ 18, ದಾದ್ರಾ ಮತ್ತು ನಗರ್​ ಹವೇಲಿ ಮತ್ತು ಡಮನ್​ ಮತ್ತು ಡಿಯು 16, ಅಂಡಮಾನ್​ ಮತ್ತು ನಿಕೋಬರ್​ ದ್ವೀಪದಲ್ಲಿ 7, ಲಡಾಖ್​ 5 ಮತ್ತು ಲಕ್ಷದ್ವೀಪ್​ನಲ್ಲಿ 0 ಪ್ರಕರಣಗಳು ದಾಖಲಾಗಿವೆ.

ಮೆಟ್ರೋಪಾಲಿಟನ್​ ಸಿಟಿ ಬೆಂಗಳೂರಿನಲ್ಲಿ 173 ಕೊಲೆ ಪ್ರಕರಣ ದಾಖಲಾದರೆ, ಮುಂಬೈನಲ್ಲಿ 135, ಲಕ್ನೋದಲ್ಲಿ 131, ಪಾಟ್ನಾದಲ್ಲಿ 107 ಮತ್ತು ಚೆನ್ನೈನಲ್ಲಿ 101 ಪ್ರಕರಣಗಳು ವರದಿಯಾಗಿವೆ. (ಐಎಎನ್​ಎಸ್​​)

ಇದನ್ನೂ ಓದಿ: ರೈತ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಯುಎನ್ ಮಾನವ ಹಕ್ಕುಗಳ ಕಚೇರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.