ETV Bharat / bharat

ಉಮೇಶ್ ಪಾಲ್ ಹತ್ಯೆ ಪ್ರಕರಣ: ಆರೋಪಿ ಗುಡ್ಡು ಮುಸ್ಲಿಂ ಮನೆ ಧ್ವಂಸಗೊಳಿಸಲು ಪೊಲೀಸರಿಂದ ಸಿದ್ಧತೆ

author img

By

Published : May 1, 2023, 3:57 PM IST

ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ ದಾಳಿಕೋರ ಗುಡ್ಡು ಮುಸ್ಲಿಂ ತಲೆಮರೆಸಿಕೊಂಡಿದ್ದಾನೆ. ಈತನಿಗಾಗಿ ಪೊಲೀಸ್ ತಂಡಗಳು ತೀವ್ರ ಶೋಧ ನಡೆಸುತ್ತಿವೆ.

Guddu Muslim ancestral house will collapse
ಆರೋಪಿ ಗುಡ್ಡು ಮುಸ್ಲಿಂ ಮನೆ ಧ್ವಂಸಗೊಳಿಸಲು ಪೊಲೀಸರಿಂದ ಸಿದ್ಧತೆ

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಬಾಂಬ್ ದಾಳಿಕೋರ ಗುಡ್ಡು ಮುಸ್ಲಿಂ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ದೆಹಲಿ ಪೊಲೀಸರು ಗುಡ್ಡು ಮುಸ್ಲಿಂ ತಲೆಗೆ ಐದು ಲಕ್ಷ ಬಹುಮಾನ ಇಟ್ಟಿದ್ದು, ಆರೋಪಿಯ ಬಂಧನಕ್ಕೆ ತಲಾಶ್​ ನಡೆಸಿದ್ದಾರೆ. ಉಮೇಶ್ ಪಾಲ್ ಅವರನ್ನು ಕೊಲ್ಲಲು ಗುಡ್ಡು ಮುಸ್ಲಿಂ, ದೆಹಲಿಯಿಂದ ಶಸ್ತ್ರಾಸ್ತ್ರಗಳನ್ನು ತರಲು ಹೇಳಿದ್ದನು ಎಂದು ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳಸಾಗಣೆದಾರನೊಬ್ಬ ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ಇದಾದ ನಂತರ ದೆಹಲಿ ಪೊಲೀಸರು ಪ್ರಯಾಗ್‌ರಾಜ್‌ನ ಸರಯ್ಯ ಸ್ವರಾಜ್ ನಗರದಲ್ಲಿರುವ ಗುಡ್ಡು ಮುಸ್ಲಿಂ ಅವರ ಪೂರ್ವಜರ ಮನೆ ಬಾಲಿಗೆ ನೋಟಿಸ್ ಅಂಟಿಸಿದ್ದಾರೆ. ಆ ಮನೆ ಕೆಡವಲು ಸಿದ್ಧತೆ ನಡೆದಿದೆ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 41ರ ಅಡಿಯಲ್ಲಿ ಗುಡ್ಡು ಮುಸ್ಲಿಂ ವಿರುದ್ಧ ವಾರಂಟ್: ದೆಹಲಿ ಪೊಲೀಸರು ಬಂಧಿಸಿರುವ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆದಾರನಿಂದ ಪಡೆದ ಮಾಹಿತಿಯ ಆಧಾರದ ಮೇಲೆ, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 41ರ ಅಡಿಯಲ್ಲಿ ಅಸದ್, ಗುಡ್ಡು ಮುಸ್ಲಿಂ ಮತ್ತು ಅಸದ್ ಕಾಲಿಯಾ ವಿರುದ್ಧ ವಾರಂಟ್ ಹೊರಡಿಸಲಾಗಿದೆ. ಯುಪಿ ಎಸ್‌ಟಿಎಫ್‌ನ ಎನ್‌ಕೌಂಟರ್‌ನಲ್ಲಿ ಅಸದ್ ಹತನಾಗಿದ್ದಾನೆ. ಅಸದ್ ಕಾಲಿಯಾ ಕೂಡ ಯುಪಿ ಪೊಲೀಸರ ವಶದಲ್ಲಿದ್ದಾನೆ. ಆದ್ರೆ, ಗುಡ್ಡು ಮುಸ್ಲಿಂ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಭಾನುವಾರ ಸಂಜೆ ದೆಹಲಿ ಪೊಲೀಸ್ ತಂಡವು ಶಿವಕುಟಿ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲಾ ಅವರ ಸಾರಯ್ಯ ಸ್ವರಾಜ್ ನಗರದಲ್ಲಿರುವ ಗುಡ್ಡು ಮುಸ್ಲಿಂನ ಪೂರ್ವಜರ ಮನೆಗೆ ತಲುಪಿತು. ಆ ತಂಡವು, ಅಲ್ಲಿರುವ ಮನೆ ಬಾಗಿಲಿಗೆ ಪೊಲೀಸ್​ ತಂಡವು ನೋಟಿಸ್ ಅನ್ನು ಅಂಟಿಸಿದೆ.

ಗುಡ್ಡು ಮುಸ್ಲಿಂ ಸಹೋದರಿ ಹೇಳಿದ್ದೇನು?: ಗುಡ್ಡು ಮುಸ್ಲಿಂ ಮನೆಯಿಂದ ಸ್ವಲ್ಪ ದೂರದಲ್ಲಿ ವಾಸವಾಗಿರುವ ಗುಡ್ಡು ಮುಸ್ಲಿಂ ಸಹೋದರಿ ನಸ್ರೀನ್ ಬಾನೊ ಮಾಧ್ಯಮಗಳೊಂದಿಗೆ ಮಾತನಾಡಿದರು, ''ಗುಡ್ಡು ಮುಸ್ಲಿಂನನ್ನು ಮೊದಲು ಮೊಹಮ್ಮದ್ ಮುಸ್ಲಿಂ ಎಂದು ಕರೆಯಲಾಗುತ್ತಿತ್ತು. 13ನೇ ವಯಸ್ಸಿನಲ್ಲಿ, ನಮ್ಮ ತಂದೆ ಅವನನ್ನು ಹೊಡೆದು ಮನೆಯಿಂದ ಹೊರಹಾಕಿದ್ದರು. ಅಂದಿನಿಂದ ಅವನನ್ನು ನಾವು ನೋಡಿಲ್ಲ. ಬಾಲ್ಯದಿಂದಲೂ ಗುಡ್ಡು ಮುಸ್ಲಿಂ ತುಂಬಾ ಚೇಷ್ಟೆಗಾರರಾಗಿದ್ದ. ಅವನು ಓದಲು ಶಾಲೆಗೆ ಹೋಗುತ್ತಿಲಿಲ್ಲ. ನಸ್ರೀನ್ ಬಾನೊ ಅವರು 10ನೇ ವಯಸ್ಸಿನಲ್ಲಿ ಸ್ಕೂಟರ್ ತಯಾರಿಸುವ ಅಂಗಡಿಯಲ್ಲಿ ದಿನಕ್ಕೆ 2 ರೂಪಾಯಿಗೆ ಕೆಲಸಕ್ಕೆ ಸೇರಿಸಿದ್ದರು'' ಎಂದು ಹೇಳಿದರು.

ಸರಗಳ್ಳತನ ಮಾಡುತ್ತಿದ್ದ ಗುಡ್ಡು ಮುಸ್ಲಿಂ- ಮುಜುಗರಕ್ಕೆ ಒಳಗಾಗಿದ್ದ ಕುಟುಂಬಸ್ಥರು: ''ಆಗ ಗುಡ್ಡು ಮುಸ್ಲಿಂ ವಿಸಿಆರ್​ನಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುತ್ತಿದ್ದನು. ಹಲವು ಬಾರಿ ಸರಗಳ್ಳತನ ಮಾಡಿ ಕುಟುಂಬಸ್ಥರಿಗೆ ತೊಂದರೆ ನೀಡುತ್ತಿದ್ದ. ಇದರಿಂದ ತೊಂದರೆಗೀಡಾದ ತಂದೆ ಆತನನ್ನು ಮನೆಯಿಂದ ಹೊರಹಾಕಿದ್ದಾರೆ. ಈ ನಡುವೆ ಗುಡ್ಡು ಮುಸ್ಲಿಂ ಏನು ಮಾಡಿದ್ದ ಎಂಬುದು ತನಗೆ ಗೊತ್ತಿಲ್ಲ'' ಎಂದ ಅವರು, ತನ್ನ ಕುಟುಂಬದ ಯಾವುದೇ ಸದಸ್ಯರು ಅತೀಕ್ ಅಹ್ಮದ್ ಅಥವಾ ಅವರ ಕುಟುಂಬವನ್ನು ಭೇಟಿ ಮಾಡಿಲ್ಲ'' ಎಂದು ನಸ್ರೀನ್ ಬಾನೊ ಹೇಳಿದ್ದಾರೆ.

ಇದನ್ನೂ ಓದಿ: ಆಪರೇಷನ್ ಕಾವೇರಿ: ಸುಡಾನ್‌ನಿಂದ 186 ಮಂದಿ ಭಾರತೀಯರು ವಾಪಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.