ETV Bharat / bharat

ಹಿಂದಿ ಬಿಗ್​​ಬಾಸ್​ ವಿರುದ್ಧ ಭುಗಿಲೆದ್ದ ಆಕ್ರೋಶ; 'ಜಿಹಾದಿ' ಹರಡುವ ಶೋ ಎಂದು ಟ್ವಿಟರ್​ ಟ್ರೆಂಡ್​!

author img

By

Published : Oct 5, 2019, 9:36 PM IST

ಬಿಗ್​ಬಾಸ್​ ವಿರುದ್ಧ ಆಕ್ರೋಶ

ಆರಂಭಗೊಂಡ ಮೊದಲ ವಾರದಲ್ಲೇ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿರುವ ಹಿಂದಿ ಬಿಗ್​ಬಾಸ್​ ಶೋ ವಿರುದ್ಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಶುರುವಾಗಿದ್ದು, ರಿಯಾಲಿಟಿ ಶೋ ಬ್ಯಾನ್​ ಮಾಡುವಂತೆ ಆಗ್ರಹಿಸಲಾಗಿದೆ.

ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್​ ನಡೆಸಿಕೊಂಡು ಬರುತ್ತಿರುವ ಹಿಂದಿ ಬಿಗ್​ ಬಾಸ್​ ಪ್ರತಿ ವರ್ಷ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗುತ್ತಿದ್ದು, ಸದ್ಯ ಪ್ರಸಾರಗೊಳ್ಳುತ್ತಿರುವ 13ನೇ ಆವೃತ್ತಿ ರಿಯಾಲಿಟಿ ಶೋ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಆರಂಭಗೊಂಡ ಮೊದಲ ವಾರದಲ್ಲೇ ಮನೆಯಲ್ಲಿರುವ ಅಭ್ಯರ್ಥಿಗಳ ನಡುವೆ ವಾಗ್ವಾದ, ಜಗಳ ಹಾಗೂ ಅಶ್ಲೀಲ ಪದಗಳ ಬಳಕೆ ಹೆಚ್ಚಾಗಿದ್ದು, ಇದರ ಮಧ್ಯೆ ಟ್ವಿಟರ್​​ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ವಾರದ ಹಿಂದೆಯಷ್ಟೇ ಈ ಶೋ ಆರಂಭಗೊಂಡಿದ್ದು, ಈಗಾಗಲೇ ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಘಟನೆಗಳು ಈ ಕಾರ್ಯಕ್ರಮದಲ್ಲಿ ನಡೆಯುತ್ತಿದ್ದು, ತಕ್ಷಣವೇ ನಿಷೇಧ ಹೇರಬೇಕು ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.

ಬಿಗ್​ಬಾಸ್​​ನಲ್ಲಿ ನಡೆಯುತ್ತಿರುವ ಟಾಸ್ಕ್​ಗಳಲ್ಲಿ ಹಿಂದೂ ಹುಡುಗಿಯರನ್ನ ಮುಸ್ಲಿಂ ಹುಡುಗರೊಂದಿಗೆ ಮಾತ್ರ ತೋರಿಸುತ್ತಿದ್ದು, ಮುಸ್ಲಿಂ ಹುಡುಗಿಯರನ್ನ ಹಿಂದೂ ಹುಡುಗರೊಂದಿಗೆ ಯಾಕೆ ತೋರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಬಿಗ್​​ಬಾಸ್​ ಜಿಹಾದ್ ಹುಟ್ಟುಹಾಕುತ್ತಿದೆ ಎಂದಿದ್ದಾರೆ. ಇದರ ಮಧ್ಯೆ ಕೆಲವರು ಬಿಗ್​ಬಾಸ್​ ಪರ ಬ್ಯಾಟ್ ಬೀಸಿದ್ದು, ರಿಯಾಲಿಟಿ ಶೋನಲ್ಲಿ ನಡೆಯುವ ಕೆಲವೊಂದು ಘಟನೆಗಳಿಂದ ಮಾತ್ರ ಅದನ್ನು ಬ್ಯಾನ್​ ಮಾಡಿ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.

  • Personally I don't like BIG BOSS, the kind of content they are showing is totally unacceptable.
    Colors channel is trying to ruin Indian Culture. I don't know what they want to show n what message they want to serve in society.
    #BOYCOTT#Colors#BIGBOSS@narendramodi @PMOIndia

    — AJAY KAPOOR🇮🇳 (@ajaykapoorlko) October 4, 2019 " class="align-text-top noRightClick twitterSection" data=" ">
Intro:Body:

ಹಿಂದಿ ಬಿಗ್​​ಬಾಸ್​ ವಿರುದ್ಧ ಭುಗಿಲೆದ್ದ ಆಕ್ರೋಶ... 'ಜಿಹಾದಿ' ಹರಡುವ ಶೋ ಎಂದು ಟ್ವಿಟರ್​ ಟ್ರೆಂಡ್​! 

ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್​ ನಡೆಸಿಕೊಂಡು ಬರುತ್ತಿರುವ ಹಿಂದಿ ಬಿಗ್​ ಬಾಸ್​ ಪ್ರತಿ ವರ್ಷ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗುತ್ತಿದ್ದು, ಸದ್ಯ ಪ್ರಸಾರಗೊಳ್ಳುತ್ತಿರುವ 13ನೇ ಆವೃತ್ತಿ ರಿಯಾಲಿಟಿ ಶೋ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. 



ಆರಂಭಗೊಂಡ ಮೊದಲ ವಾರದಲ್ಲೇ ಮನೆಯಲ್ಲಿರುವ ಅಭ್ಯರ್ಥಿಗಳ ನಡುವೆ ವಾಗ್ವಾದ, ಜಗಳ ಹಾಗೂ ಅಶ್ಲೀಲ ಪದಗಳ ಬಳಿಕೆ ಹೆಚ್ಚಾಗಿದ್ದು, ಇದರ ಮಧ್ಯೆ ಟ್ವೀಟರ್​​ನಲ್ಲಿ ಜನರು ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ವಾರದ ಹಿಂದೆಯಷ್ಟೇ ಈ ಶೋ ಆರಂಭಗೊಂಡಿದ್ದು, ಈಗಾಗಲೇ ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಘಟನೆಗಳು ಈ ಕಾರ್ಯಕ್ರಮದಲ್ಲಿ ನಡೆಯುತ್ತಿದ್ದು, ತಕ್ಷಣವೇ ಬ್ಯಾನ್​ ಮಾಡಬೇಕು ಎನ್ನುವ ಮಾತು ಕೇಳಿ ಬರುತ್ತಿವೆ.



ಬಿಗ್​ಬಾಸ್​​ನಲ್ಲಿ ನಡೆಯುತ್ತಿರುವ ಟಾಸ್ಕ್​ಗಳಲ್ಲಿ ಹಿಂದೂ ಹುಡುಗಿಯರನ್ನ ಮುಸ್ಲಿಂ ಹುಡುಗರೊಂದಿಗೆ ಮಾತ್ರ ತೋರಿಸುತ್ತಿದ್ದು, ಮುಸ್ಲಿಂ ಹುಡುಗಿಯರನ್ನ ಹಿಂದೂ ಹುಡುಗರೊಂದಿಗೆ ಯಾಕೆ ತೋರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದು, ಬಿಗ್​​ಬಾಸ್​ ಜಿಹಾದ್ ಹುಟ್ಟಿಹಾಕುತ್ತಿದೆ ಎಂದಿದ್ದಾರೆ. ಇದರ ಮಧ್ಯೆ ಕೆಲವರು ಬಿಗ್​ಬಾಸ್​ ಪರ ಬ್ಯಾಟ್ ಬೀಸಿದ್ದು, ರಿಯಾಲಿಟಿ ಶೋನಲ್ಲಿ ನಡೆಯುವ ಕೆಲವೊಂದು ಘಟನೆಗಳಿಂದ ಮಾತ್ರ ಅದನ್ನು ಬ್ಯಾನ್​ ಮಾಡಿ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.