ಕರ್ನಾಟಕ

karnataka

ಕೊಪ್ಪಳ: ಮಿಠಾಯಿ ಅಂಗಡಿಯಲ್ಲಿ ಗಮನ ಸೆಳೆಯುತ್ತಿವೆ ಘೋಷವಾಕ್ಯಗಳು

By ETV Bharat Karnataka Team

Published : Jan 31, 2024, 8:04 PM IST

ಗಮನಸೆಳೆಯುತ್ತಿವೆ ಜಾಗೃತಿ ಫಲಕ

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಹಾಕಿರುವ ಮಿಠಾಯಿ ಅಂಗಡಿಗಳಲ್ಲಿನ ಜಾಗೃತಿ ಫಲಕಗಳು ಜನಮೆಚ್ಚುಗೆಗೆ ಪಾತ್ರವಾಗಿವೆ. ಗವಿಮಠದ ಜಾತ್ರೆ ಹದಿನೈದು ದಿನಗಳ ಕಾಲ ನಡೆಯುತ್ತದೆ. ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ಜಾತ್ರೆ ಆಗಿರುವ ಗವಿಸಿದ್ದೇಶ್ವರ ಜಾತ್ರೆಗೆ ಬಂದವರು ಇಲ್ಲಿಂದ ಏನನ್ನು ಖರೀದಿಸದಿದ್ದರೂ ಕೊನೆಗೆ ಫಳಾರವನ್ನಂತೂ ಖರೀದಿಸದೇ ಹೋಗಲಾರರು. ಇದು ಇಲ್ಲಿನ ಜಾತ್ರೆಯ ಪದ್ದತಿಯಾಗಿದೆ. ಈ ಕಾರಣಕ್ಕಾಗಿ ಜಾತ್ರೆಯಲ್ಲಿ ಸುಮಾರು 60ಕ್ಕೂ ಹೆಚ್ಚು ತಿನಿಸುಗಳ ಅಂಗಡಿಗಳನ್ನು ಹಾಕಲಾಗಿದೆ.

ಗಮನಸೆಳೆದ ವಿಠಾಯಿ ಅಂಗಡಿ ಘೋಷ ವಾಕ್ಯಗಳು: ಇಲ್ಲಿ ಹಾಕಲಾಗಿರುವ ಮಿಠಾಯಿ ಅಂಗಡಿಗಳಲ್ಲಿ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲೆಂದು ವಿವಿಧ ಘೋಷವಾಕ್ಯಗಳನ್ನು ಹಾಕಿದ್ದಾರೆ. ಅದರಲ್ಲಿ ಸೌಹಾರ್ದತೆ ಕಡೆ ನಮ್ಮ ನಡೆ, ರಾಮಲಲ್ಲಾ ಈಶ್ವರ ಅಲ್ಲಾ ತೇರೇನಾಮ್, ಕಾಯಕ ದೇವೋಭವ, ದುಡ್ಡಿಲ್ಲದವ ಬಡವನಲ್ಲ, ಗುರಿ ಕನಸು ಇಲ್ಲದವ ಬಡವ, ಕಲಿಯುಗದಿಂದ ರಾಮರಾಜ್ಯದ ಕಡೆಗೆ, ಕನ್ನಡ ನಾಮಫಲಕ ಕಡ್ಡಾಯವಾಲಿ ಎಂಬ ಘೋಷವಾಕ್ಯಗಳು ಗಮನ ಸೆಳೆಯುತ್ತಿವೆ.

ಇದನ್ನೂ ಓದಿ: ಈ ರಸ್ತೆಯಲ್ಲಿ ಆನೆಯೇ ಚೆಕ್ಕಿಂಗ್ ಆಫೀಸರ್: ಪ್ರತಿ ವಾಹನ ತಪಾಸಣೆ ನಡೆಸಿದ ಸಲಗ!

ABOUT THE AUTHOR

...view details