ಕರ್ನಾಟಕ

karnataka

ಕರಗ ಹೊರುವ ವಿಚಾರಕ್ಕೆ ಘರ್ಷಣೆ: ಬೂದಿಗೆರೆ ದ್ರೌಪದಮ್ಮ ಕರಗ ರದ್ದು - Karaga Canceled

By ETV Bharat Karnataka Team

Published : Mar 24, 2024, 1:21 PM IST

ಕರಗ ಹೊರುವ ವಿಚಾರಕ್ಕೆ ಮೂರು ಗುಂಪುಗಳ ನಡುವೆ ಗಲಾಟೆ ನಡೆದ ಪರಿಣಾಮ, ಇತಿಹಾಸ ಪ್ರಸಿದ್ಧ ಬೂದಿಗೆರೆ ದ್ರೌಪದಮ್ಮ ಕರಗ ರದ್ದಾಗಿದೆ.

Budigere Draupadamma Karaga  karaga canceled  karaga  Benagaluru Rural
ಕರಗ ಹೊರುವ ವಿಚಾರಕ್ಕೆ ಮೂರು ಗುಂಪುಗಳ ನಡುವೆ ಗಲಾಟೆ: ಇತಿಹಾಸ ಪ್ರಸಿದ್ಧ ಬೂದಿಗೆರೆ ದ್ರೌಪದಮ್ಮ ಕರಗ ರದ್ದು

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ಇಲ್ಲಿನ ಇತಿಹಾಸ ಪ್ರಸಿದ್ಧ ಬೂದಿಗೆರೆಕರಗ ಹೊರುವ ವಿಚಾರಕ್ಕೆ ಸಂಬಂಧಿಸಿದಂತೆ ತಿಗಳ ಸಮುದಾಯದ ಮೂರು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರಣಕ್ಕೆ ಕರಗ ಮಹೋತ್ಸವನ್ನು ರದ್ದು ಮಾಡಲಾಗಿದೆ.

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಕಾಮನ ಹುಣ್ಣಿಮೆಯಂದು ಪ್ರತೀ ವರ್ಷ ದ್ರೌಪದಿ ದೇವಿ ಕರಗ ಮಹೋತ್ಸವ ನಡೆಯುತ್ತದೆ. ಈ ಬಾರಿ ಕರಗ ಹೊರುವ ವಿಚಾರವಾಗಿ ಸಮುದಾಯದ ಮೂರು ಗುಂಪುಗಳ ನಡುವೆ ಕಿತ್ತಾಟ ಉಂಟಾಗಿದೆ. ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ಮೇ 27 ರಂದು ವಿಚಾರಣೆ ನಡೆಯಲಿದೆ. ಶಾಸ್ತ್ರದ ಪ್ರಕಾರ ಕರಗ ಮಾರ್ಚ್ 25 ರಂದು ನಡೆಯಬೇಕಿತ್ತು. ಆದರೆ, ಪ್ರಕರಣ ಇತ್ಯರ್ಥಗೊಳ್ಳದ ಕಾರಣ ಆಚರಣೆಯೇ ರದ್ದಾಗಿದೆ. ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ:ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಬಿಎಸ್​​ವೈ ಕುಟುಂಬದಿಂದ ರಥೋತ್ಸವ ಸೇವೆ - BSY Temple Visit

ABOUT THE AUTHOR

...view details