ಕರ್ನಾಟಕ

karnataka

ಸಿ.ಟಿ.ರವಿಗೆ ತುಂಬಾ ಅನ್ಯಾಯವಾಗಿದೆ: ಬಿ.ಎಸ್.ಯಡಿಯೂರಪ್ಪ - B S Yediyurappa

By ETV Bharat Karnataka Team

Published : Apr 11, 2024, 11:00 PM IST

Updated : Apr 11, 2024, 11:09 PM IST

ನಮ್ಮ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಅವಕಾಶ ಕೊಡಿಸುವ ಬಗ್ಗೆ ನಾನು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

BS Yediyurappa
ಬಿಎಸ್ ಯಡಿಯೂರಪ್ಪ

ಸಿ.ಟಿ.ರವಿಗೆ ತುಂಬಾ ಅನ್ಯಾಯವಾಗಿದೆ: ಬಿ.ಎಸ್.ಯಡಿಯೂರಪ್ಪ

ಚಿಕ್ಕಮಗಳೂರು:ನಮ್ಮ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಇವತ್ತು ಅನ್ಯಾಯವಾಗಿದೆ. ಯಾರು ವಿಧಾನಸಭೆಯಲ್ಲಿ ಗುಡುಗಬೇಕಿತ್ತೋ ಅವರು ಹೊರಗಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸಭೆ ಅಥವಾ ವಿಧಾನ ಪರಿಷತ್​ನಲ್ಲಿ ಅವರಿಗೆ ಅವಕಾಶ ಸಿಗಲೇಬೇಕು ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಮತ ಪ್ರಚಾರಕ್ಕೆ ಜಿಲ್ಲೆಗೆ ಬಿಎಸ್​ವೈ ಆಗಮಿಸಿದ್ದಾರೆ. ಸಕ್ಕರಾಯಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಕುರಿತು ಮಾತನಾಡಿ, ಸಿ.ಟಿ.ರವಿ ಅವರಿಗೆ ಅವಕಾಶ ಸಿಗುವ ಬಗ್ಗೆ ನಾನು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ನಾನು ಮಾಡುತ್ತೇನೆ ಎಂದು ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಅಬ್ಬರದ ಭಾಷಣ ಮಾಡಿದರು. 4 ಬಾರಿ ಶಾಸಕನಾಗಿದ್ದಾಗ ಹೆಚ್ಚು ಕೆಲಸ ಮಾಡಿದ್ದೆ. ಆದರೂ, ಈ ಬಾರಿ ಚುನಾವಣೆಯಲ್ಲಿ ಸೋತೆ, ಚುನಾವಣೆ ಸಂದರ್ಭದಲ್ಲಿ ಕೆಲಸ ಚರ್ಚೆ ಆಗಲಿಲ್ಲ, ಅಪಪ್ರಚಾರ ಚರ್ಚೆಯಾಯಿತು. ನನ್ನ ಹಣೆ ಬರಹ ಕೆಟ್ಟಿತ್ತು. ಜೆಡಿಎಸ್ ಕೂಡ ನನ್ನ ವಿರುದ್ಧವಾಗಿಯೇ ಕೆಲಸ ಮಾಡಿತ್ತು. ಜೆಡಿಎಸ್ ಅಭ್ಯರ್ಥಿ ಇದ್ದರೂ ನನ್ನ ವಿರುದ್ಧವಾಗಿ ಕೆಲಸ ಮಾಡಲಾಯಿತು. ನಮ್ಮ ನಾಯಕರ ಹೆಸರನ್ನೂ ಬಳಸಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದರು ಎಂದು ರವಿ ತಮ್ಮ ಸೋಲನ್ನು ನೆನೆದರು.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣಾ ರಣಕಣ ದಿನದಿಂದ ದಿನ ರಂಗು ಏರುತ್ತಿದೆ. ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾದ ಕೋಟ ಶ್ರೀನಿವಾಸ್ ಪೂಜಾರಿ ಪರ ದಿನದಿಂದ ದಿನಕ್ಕೆ ಮತಬೇಟೆ ಹಾಗೂ ಪ್ರಚಾರ ಕಾರ್ಯವೂ ಜೋರಾಗುತ್ತಿದೆ. ಸ್ಟಾರ್ ಪ್ರಚಾರಕರು ಹಾಗೂ ರಾಜ್ಯ ಮಟ್ಟದ ನಾಯಕರು ಜಿಲ್ಲೆಗೆ ಆಗಮಿಸಿ ಮತಯಾಚನೆ ಮಾಡುತ್ತಿದ್ದಾರೆ.

ಇದನ್ನೂ ಓದಿ:'ಕಮಲ' ಬಿಟ್ಟು 'ಕೈ' ಹಿಡಿದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ - Vivek Hebbar

Last Updated :Apr 11, 2024, 11:09 PM IST

ABOUT THE AUTHOR

...view details