ಕರ್ನಾಟಕ

karnataka

'ಚೆನ್ನಾಗಿ ಹೇಳಿದ್ರಿ ಸರ್': ನೆರೆದೇಶಗಳೊಂದಿಗೆ ಭಾರತದ ಸಂಬಂಧಗಳ ಕುರಿತು ಜೈಶಂಕರ್ ಹೇಳಿಕೆ ಶ್ಲಾಘಿಸಿದ ಬಿಗ್ ಬಿ

By ETV Bharat Karnataka Team

Published : Mar 4, 2024, 3:52 PM IST

ನೆರೆಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧಗಳ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿಕೆಯನ್ನು ಅಮಿತಾಬ್ ಬಚ್ಚನ್ ಶ್ಲಾಘಿಸಿದ್ದಾರೆ.

ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಹೈದರಾಬಾದ್ : ಪ್ರಾದೇಶಿಕ ಉದ್ವಿಗ್ನತೆ ನಡುವೆ ಭಾರತದ ಸಹಾನುಭೂತಿ ವಿಧಾನವನ್ನು ಎತ್ತಿ ತೋರಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಇತ್ತೀಚೆಗೆ ಮಾಡಿದ ಕಾಮೆಂಟ್ ಬಗ್ಗೆ ಅಮಿತಾಬ್ ಬಚ್ಚನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾರತ ಉಪಖಂಡ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತವು ಬೆದರಿಕೆ ಒಡ್ಡುವಂತೆ( ಬುಲ್ಲಿ) ವರ್ತಿಸುತ್ತಿದೆಯೇ? ಎಂಬ ಪ್ರಶ್ನೆಗೆ ಜೈಶಂಕರ್ ಪ್ರತಿಕ್ರಿಯಿಸಿದ್ದರು.

ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋ ಕ್ಲಿಪ್‌ನಲ್ಲಿ ಸೆರೆ ಹಿಡಿಯಲಾದ ಜೈಶಂಕರ್ ಅವರ ಹೇಳಿಕೆಗಳು ಭಾರತ ಮತ್ತು ಅದರ ನೆರೆಹೊರೆಯವರ ನಡುವಿನ ಪರಿವರ್ತಕ ಸಂಬಂಧವನ್ನು ಒತ್ತಿ ಹೇಳುತ್ತವೆ. ಎಕ್ಸ್​ನಲ್ಲಿ ಬಳಕೆದಾರರು ಹಂಚಿಕೊಂಡ ವಿಡಿಯೋದಲ್ಲಿ, ನೆರೆಯ ದೇಶಗಳಲ್ಲಿ ಸಂಕಷ್ಟದ ಸಮಯದಲ್ಲಿ $4.5 ಶತಕೋಟಿ ಡಾಲರ್​​ ಸೇರಿದಂತೆ ಭಾರತದ ಮಹತ್ವದ ನೆರವು ಕೊಡುಗೆಗಳನ್ನು ಉಲ್ಲೇಖಿಸಿ, ನಿಜವಾಗಿ ಬೆದರಿಸುವವರು ಸಹಾಯ ಹಸ್ತ ಚಾಚುವುದಿಲ್ಲ ಎಂದು ಜೈಶಂಕರ್ ಒತ್ತಿ ಹೇಳಿದ್ದಾರೆ. ಈ ಪ್ರತಿಕ್ರಿಯೆ ಸಾರ್ವಜನಿಕರಿಗೆ ಮಾತ್ರವಲ್ಲದೇ ಸ್ಕ್ರೀ ಐಕಾನ್ ಅಮಿತಾಭ್​ ಬಚ್ಚನ್ ಅವರ ಗಮನವನ್ನು ಕೂಡಾ ಸೆಳೆದಿದೆ.

ಟ್ವಿಟರ್‌ನಲ್ಲಿ ಅಮಿತಾಬ್ ಬಚ್ಚನ್ ಜೈಶಂಕರ್ ಅವರ ಹೇಳಿಕೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಸೋಮವಾರ ಮಧ್ಯಾಹ್ನ ಟ್ವೀಟ್‌ನಲ್ಲಿ "WAH!! ಚೆನ್ನಾಗಿ ಹೇಳಿದ್ದೀರಿ ಸರ್" ಎಂದು ತಮ್ಮ ಒಪ್ಪಿಗೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಟ್ವೀಟ್ ಪ್ರತಿಕ್ರಿಯೆಗಳ ಕೋಲಾಹಲಕ್ಕೆ ಕಾರಣವಾಗಿದೆ. ಕೆಲವರು ರಾಜಕೀಯಕ್ಕೆ ಅವರ ಸಂಭಾವ್ಯ ಪ್ರವೇಶದ ಬಗ್ಗೆ ಊಹಾಪೋಹ ಮಾಡಿದ್ದಾರೆ. ಜೈಶಂಕರ್ ಅವರು ರಾಷ್ಟ್ರದ ಅತ್ಯುತ್ತಮ ರಾಜತಾಂತ್ರಿಕರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರಲ್ಲಿ ಒಬ್ಬರು ಎಂದು ಪ್ರತ್ಯುತ್ತರ ಕೂಡಾ ನೀಡಿದ್ದಾರೆ.

ಏತನ್ಮಧ್ಯೆ, ಭಾನುವಾರದ ದಿವಸ ಬಾಲಿವುಡ್​​ನ ಬಿಗ್​ ಸ್ಟಾರ್​ ಅಮಿತಾಭ್​ ಬಚ್ಚನ್ ಮತ್ತು ಅವರ ಕುಟುಂಬವು ಗುಜರಾತ್‌ನ ಜಾಮ್‌ನಗರದಲ್ಲಿ ಅಂಬಾನಿ ಕುಟುಂಬ ಆಯೋಜಿಸಿದ್ದ ವಿವಾಹಪೂರ್ವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಅವರ ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯ ರೈ ಮತ್ತು ಮಗಳು ಶ್ವೇತಾ ಬಚ್ಚನ್ ಜೊತೆಗೆ, ಅಮಿತಾಭ್​ ಬಚ್ಚನ್​​ ತಮ್ಮ ಮೊಮ್ಮಕ್ಕಳಾದ ಆರಾಧ್ಯ, ಅಗಸ್ತ್ಯ ಮತ್ತು ನವ್ಯಾ ಅವರೊಂದಿಗೆ ಹಬ್ಬವನ್ನು ಆನಂದಿಸಿದರು. ಸೋಮವಾರ ಮುಂಜಾನೆ ಮುಂಬೈಗೆ ಹಿಂದಿರುಗುವ ಮೊದಲು ಅಮಿತಾಭ್ ನಂತರ ತಮ್ಮ ಬ್ಲಾಗ್‌ನಲ್ಲಿ ಈವೆಂಟ್‌ನ ಅನುಭವಗಳನ್ನು ಹಂಚಿ ಕೊಂಡಿದ್ದಾರೆ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ ಬಚ್ಚನ್: ಮನೆಯಿಂದ ದೇಗುಲಕ್ಕೆ ಕೇವಲ 15 ನಿಮಿಷದ ಹಾದಿ

ABOUT THE AUTHOR

...view details