ಕರ್ನಾಟಕ

karnataka

ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್: 40 ಗಂಟೆ ನಾಪತ್ತೆಯಾಗಿದ್ದ ನಟ ಸಾಹಿಲ್ ಖಾನ್ ವಶಕ್ಕೆ - Mahadev Betting App Case

By ETV Bharat Karnataka Team

Published : Apr 28, 2024, 12:42 PM IST

ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ ಅವರನ್ನು ಮುಂಬೈ ಸೈಬರ್ ಸೆಲ್​ನ ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ.

Sahil Khan
ಸಾಹಿಲ್ ಖಾನ್

ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಾಹಿಲ್ ಖಾನ್ ಅವರನ್ನು ಮುಂಬೈ ಸೈಬರ್ ಸೆಲ್​ನ ವಿಶೇಷ ತನಿಖಾ ತಂಡ (ಎಸ್ಐಟಿ) ವಶಕ್ಕೆ ಪಡೆದಿದೆ. ಬಾಂಬೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ನಟನನ್ನು ಛತ್ತೀಸ್‌ಗಢದ ಜಗದಲ್‌ಪುರದಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಅಧಿಕಾರಿಗಳ ಕಣ್ತಪ್ಪಿಸಿ ಸರಿಸುಮಾರು 40 ಗಂಟೆಗಳ ಕಾಲ ಛತ್ತೀಸ್​ಗಢದಲ್ಲಿ ತಲೆಮರೆಸಿಕೊಂಡಿದ್ದ ಸಾಹಿಲ್ ಖಾನ್​​ನನ್ನು ವಶಕ್ಕೆ ಪಡೆಯಲು ಮುಂಬೈ ಕ್ರೈಂ ಬ್ರಾಂಚ್​​ನ ವಿಶೇಷ ತನಿಖಾ ತಂಡ ಮಹತ್ವದ ಕಾರ್ಯಾಚರಣೆ ಕೈಗೊಂಡಿತ್ತು. ತನ್ನ ರಕ್ಷಣೆಗೆ ಮುಂಚಿತವಾಗಿ ಜಾಮೀನು ಪಡೆಯಲು ಪ್ರಯತ್ನಿಸಿದರೂ ಹೈಕೋರ್ಟ್‌ ನಿರ್ಧಾರದಿಂದ ನಟ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂತಿಮವಾಗಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.

ಬೆಟ್ಟಿಂಗ್ ಸೈಟ್ ನಡೆಸುತ್ತಿರುವುದು ಮತ್ತು ಅಕ್ರಮ ಬೆಟ್ಟಿಂಗ್ ಪ್ರಚಾರದ ಆರೋಪಗಳು ಸಾಹಿಲ್​ ಖಾನ್ ಮೇಲಿದ್ದು, ಮುಂಬೈನಿಂದ ಪರಾರಿಯಾಗಿದ್ದರು. ಆಗಾಗ್ಗೆ ತಮ್ಮ ಸ್ಥಳ ಬದಲಾಯಿಸುತ್ತಿದ್ದರು. ಬೆಟ್ಟಿಂಗ್ ಪ್ರಕರಣದಲ್ಲಿ ನಟ ಶಾಮೀಲಾಗಿರುವುದು ಮತುಂಗಾ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

2023ರ ಡಿಸೆಂಬರ್​ನಲ್ಲಿ ಸಾಹಿಲ್ ಖಾನ್, ಇತರೆ ಮೂವರಿಗೆ ಮುಂಬೈ ಸೈಬರ್ ಸೆಲ್​ನ ಎಸ್‌ಐಟಿ ವಿಚಾರಣೆಗೆ ಕರೆಯಿತು. ಆದರೆ ಸಮನ್ಸ್‌ಗೆ ಪ್ರತಿಕ್ರಿಯಿಸಲು ಖಾನ್ ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಹಚ್ಚಲು ಪ್ರಯತ್ನಗಳು ತೀವ್ರಗೊಂಡಿದ್ದವು.

ಇದನ್ನೂ ಓದಿ:ಘಟಾನುಘಟಿ ತಾರಾಗಣದ 'ಕಲ್ಕಿ 2898 ಎಡಿ' ಬಿಡುಗಡೆಗೆ ಮುಹೂರ್ತ ನಿಗದಿ - Kalki 2898 AD

ಹಗರಣದ ಆಪಾದಿತ ಪ್ರಮಾಣ ಎಫ್‌ಐಆರ್ ಪ್ರಕಾರ 15,000 ಕೋಟಿ ರೂ.ನಷ್ಟಿದೆ. ಜಾರಿ ನಿರ್ದೇಶನಾಲಯ ಹೊರಡಿಸಿದ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಆಧರಿಸಿ, ಪ್ರಮುಖ ಶಂಕಿತ ಆರೋಪಿಗಳಲ್ಲಿ ಒಬ್ಬರಾದ ರವಿ ಉಪ್ಪಲ್ ಅವರನ್ನು ಕಳೆದ ವರ್ಷ ದುಬೈನಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ:ಸಲ್ಮಾನ್​ ಮನೆ ಬಳಿ ದಾಳಿ ಪ್ರಕರಣ​: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರನಿಗೆ ಲುಕ್‌ಔಟ್ ನೋಟಿಸ್ - Salman Khan Case

ಸ್ಟೈಲ್, ಎಕ್ಸ್‌ಕ್ಯೂಸ್ ಮಿ ಯಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸಾಹಿಲ್ ಖಾನ್ ಇತ್ತೀಚಿನ ವರ್ಷಗಳಲ್ಲಿ ಫಿಟ್ನೆಸ್ ಉದ್ಯಮದತ್ತ ಗಮನ ಹರಿಸಿದ್ದಾರೆ. ಡಿವೈನ್ ನ್ಯೂಟ್ರಿಷಿಯನ್​​​ ಸಂಸ್ಥೆಯನ್ನು ನಿರ್ವಹಿಸುತ್ತಿದ್ದಾರೆ.

ABOUT THE AUTHOR

...view details