ಕರ್ನಾಟಕ

karnataka

ಕುಮಾರಸ್ವಾಮಿ ಪಂಚರತ್ನ ಯಾತ್ರೆಗೆ ಪ್ರತಿಭಟನೆ ಬಿಸಿ: ಗೋ ಬ್ಯಾಕ್ ಘೋಷಣೆ

By

Published : Feb 14, 2023, 4:17 PM IST

ಕುಮಾರಸ್ವಾಮಿ ಪಂಚರತ್ನ ಯಾತ್ರೆಗೆ ಪ್ರತಿಭಟನೆ ಬಿಸಿ: ಗೋ ಬ್ಯಾಕ್ ಘೋಷಣೆ

ಧಾರವಾಡ:ಜೆಡಿಎಸ್​ ಪಕ್ಷದ ಪಂಚರತ್ನ ಯಾತ್ರೆ ಹಿನ್ನೆಲೆ ಬೈಲಹೊಂಗಲದಿಂದ ಧಾರವಾಡಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರತಿಭಟನೆ ಬಿಸಿ ಮುಟ್ಟಿದೆ. ಪಂಚರತ್ನ ಯಾತ್ರೆಯ ಆರಂಭದಲ್ಲಿಯೇ ಪ್ರತಿಭಟನೆ ಬಿಸಿ ತಟ್ಟಿದ್ದು. ‘ಗೋ ಬ್ಯಾಕ್ ಕುಮಾರಸ್ವಾಮಿ’ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.

ಕುಮಾರಸ್ವಾಮಿ ಆವರ ಬ್ರಾಹ್ಮಣ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ‘ಗೋ ಬ್ಯಾಕ್​ ಕುಮಾರಸ್ವಾಮಿ’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿ, ಧಾರವಾಡ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದರು. ಧಾರವಾಡದ ಡಿಪೋ ಸರ್ಕಲ್‌ನಲ್ಲಿ ಜಮಾಯಿಸಿ ಬಿಜೆಪಿ ಕಾರ್ಯಕರ್ತರು ಹೆಚ್​ಡಿಕೆ ವಿರುದ್ಧ ದಿಕ್ಕಾರ ಕೂಗಿ, ಪ್ರಧಾನಿ ಮೋದಿ ಭಾವಚಿತ್ರವನ್ನು ಹಿಡಿದು ಮೋದಿ, ಪ್ರಲ್ಹಾದ್​ ಜೋಶಿ ಪರ ಘೋಷಣೆ ಹಾಕಿದರು.

ಇದನ್ನೂ ಓದಿ:ಜೆಡಿಎಸ್​ನತ್ತ ಮುಖ ಮಾಡಿದ ಬಿಜೆಪಿ ಮಾಜಿ ಶಾಸಕ: ಹಾಲಹರವಿ ನೀಡಿರುವ ಸ್ಪಷ್ಟನೆ ಏನು?

ABOUT THE AUTHOR

...view details