ಕರ್ನಾಟಕ

karnataka

UPSC Exam Result: ಆಲಮಟ್ಟಿಯ ನೇತ್ರಾ ಮೇಟಿಗೆ 326ನೇ ರ್‍ಯಾಂಕ್

By

Published : Sep 25, 2021, 11:02 AM IST

Updated : Sep 25, 2021, 12:08 PM IST

ಕಳೆದ ಐದು ವರ್ಷಗಳಿಂದ ಸತತ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ನಿಡಗುಂದಿ ತಾಲೂಕಿನ ಆಲಮಟ್ಟಿಯ ನೇತ್ರಾ ಮೇಟಿ ಯುಪಿಎಸ್​ಸಿ ಪರೀಕ್ಷೆ(UPSC Exam Result)ಯಲ್ಲಿ 326ನೇ ರ್‍ಯಾಂಕ್ ಪಡೆಯುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Netra meti
ನೇತ್ರಾ ಮೇಟಿ

ವಿಜಯಪುರ: ಯುಪಿಎಸ್​ಸಿ ಪರೀಕ್ಷೆ(UPSC Exam Result)ಯಲ್ಲಿ ನಿಡಗುಂದಿ ತಾಲೂಕಿನ ಆಲಮಟ್ಟಿಯ ನೇತ್ರಾ ಮೇಟಿ 326ನೇ ರ್‍ಯಾಂಕ್ ಪಡೆಯುವ ಮೂಲಕ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಕಳೆದ ಐದು ವರ್ಷಗಳಿಂದ ಸತತ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ನೇತ್ರಾ ಮೇಟಿ, ಸದ್ಯಕ್ಕೆ ವಿಜಯಪುರದ ಜಲನಗರ ಪೊಲೀಸ್ ಠಾಣೆ ಹಿಂಬದಿಯ ಮನೆಯಲ್ಲಿ ತಂದೆ-ತಾಯಿ, ತಮ್ಮನ‌ ಜೊತೆ ವಾಸವಿದ್ದಾರೆ. ‌ಇವರ ಇಬ್ಬರು ಸಹೋದರಿಯರು ‌ಸಹ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಓರ್ವ ಸಹೋದರಿ ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ಆಗಿದ್ದರೆ, ‌ಕೊನೆಯವಳು ಎಂಬಿಬಿಎಸ್ ಎರಡನೇ ಸೆಮಿಸ್ಟರ್​ನಲ್ಲಿ ಓದುತ್ತಿದ್ದಾಳೆ.

ಈಟಿವಿ ಭಾರತದ ಜೊತೆ ಮನದಾಳದ ಮಾತು ಹಂಚಿಕೊಂಡ ನೇತ್ರಾ

ತಮ್ಮ ಸಾಧನೆ ಕುರಿತು 'ಈಟಿವಿ ಭಾರತ' ಜೊತೆ ಸಂತಸ ಹಂಚಿಕೊಂಡ ನೇತ್ರಾ, ಐಎಎಸ್ ಇಲ್ಲವೇ, ಐ​ಎಫ್ಎಸ್​ ಹುದ್ದೆ ಅಲಂಕರಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

ಮಗಳ ಸಾಧನೆ ಕುರಿತು ಮಾತನಾಡಿದ ಪೋಷಕರು, ನಮಗೆ ಹೆಣ್ಣು ಮಕ್ಕಳು ಎಂದ್ರೆ ಪ್ರಾಣ. ಹೆಣ್ಣು ಅಬಲೆ ಅಲ್ಲ ಸಬಲೆ. ಅವರಿಗೂ ಪುರುಷರಷ್ಟು ಸಮಾನ ಅವಕಾಶ ಕೊಟ್ಟರೆ ಗಗನಕ್ಕೆ ಹಾರುವ ಇಚ್ಛೆ ಇಟ್ಟುಕೊಂಡಿದ್ದಾರೆ ಎಂದರು.

Last Updated :Sep 25, 2021, 12:08 PM IST

ABOUT THE AUTHOR

...view details