ಕರ್ನಾಟಕ

karnataka

ಸಂವಿಧಾನದ ಪೀಠಿಕೆ ಪಠಣ ಮಾಡಿ ನವ ಜೀವನಕ್ಕೆ ಕಾಲಿಟ್ಟ ಯುವ ಜೋಡಿ

By

Published : Jun 7, 2022, 1:27 PM IST

ಶಿವಮೊಗ್ಗ ಜಿಲ್ಲೆಯಲ್ಲಿ ಅಪರೂದ ಮದುವೆ ಸಮಾರಂಭ ನಡೆದಿದೆ. ವಧು-ವರ ಇಬ್ಬರು ಸಂವಿಧಾನದ ಪೀಠಿಕೆ ಪಠಣ ಮಾಡುವ ಮೂಲಕ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.

Couple gets married in Shivamogga, Couple gets married through Constitution chanting, Couple Special marriage in Shivamogga, Shivamogga news, ಶಿವಮೊಗ್ಗದಲ್ಲಿ ವಿಶಿಷ್ಟ ಮದುವೆ, ಸಂವಿಧಾನ ಪಠಣದ ಮೂಲಕ ಜೋಡಿ ಮದುವೆ, ಶಿವಮೊಗ್ಗದಲ್ಲಿ ವಧು ವರನ ವಿಶೇಷ ಮದುವೆ, ಶಿವಮೊಗ್ಗ ಸುದ್ದಿ,
ನವ ಜೀವನಕ್ಕೆ ಕಾಲಿಟ್ಟ ಯುವ ಜೋಡಿ

ಶಿವಮೊಗ್ಗ:ಮದುವೆ ಅಂದ್ರೆ ಅಲ್ಲಿ ಮಂತ್ರಘೋಷ, ವಾದ್ಯಮೇಳ ಸೇರಿದಂತೆ ಇನ್ನಿತರ ಸಂಪ್ರದಾಯದ ಮೂಲಕ ಸಪ್ತಪದಿ ತುಳಿಯುತ್ತಾರೆ. ಆದರೆ ಸಾಗರದ ಶರಾವತಿ ಹಿನ್ನೀರಿನ ಪ್ರದೇಶವಾದ ಕರೂರಿನಲ್ಲಿ ಮದುವೆಯೊಂದು ವಿಶಿಷ್ಟವಾಗಿ ನೆರವೇರಿದೆ. ನವಜೀವನಕ್ಕೆ ಕಾಲಿಟ್ಟ ಜೋಡಿ ಭಾರತದ ಸಂವಿಧಾನದ ಪೀಠಿಕೆಯನ್ನು ಪಠಣ ಮಾಡುವ ಮೂಲಕ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.

ನವ ಜೀವನಕ್ಕೆ ಕಾಲಿಟ್ಟ ಯುವ ಜೋಡಿ

ಸಾಗರ ತಾಲೂಕಿನ ಕರೂರು ಗ್ರಾಮದ ಗಣೇಶ ಹಾರಿಗ ಎಂಬುವರು ಅದೇ ಗ್ರಾಮದ ಮೂಕಾಂಬಿಕಾ ಎಂಬುವರನ್ನು ಸಂವಿಧಾನದ ಪೀಠಿಕೆ ಪಠಣ ಮಾಡುವ ಕೈ ಹಿಡಿದಿದ್ದಾರೆ. ಮದುವೆಯು ಕರೂರಿನ ವೆಂಕಟರಮಣ ದೇವಾಲಯದಲ್ಲಿ ಜರುಗಿತು. ಪತ್ರಕರ್ತರಾದ ಗಣೇಶ ಹಾರಿಗ ಕೊಡಚಾದ್ರಿ ತಪ್ಪಲಿನ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮೂಕಾಂಬಿಕಾರನ್ನು ಮುದುವೆಯಾಗಿದ್ದಾರೆ.

ಓದಿ:ತನ್ನನ್ನು ತಾನೇ ವಿವಾಹ ಮಾಡಿಕೊಳ್ಳಲಿರುವ ಯುವತಿ; 2 ವಾರ ಹನಿಮೂನ್​​: ಗುಜರಾತ್​​ನಲ್ಲೊಂದು ಸೆಲ್ಫ್ ಮ್ಯಾರೇಜ್​

ಮದುವೆಯ ನಂತರ ನವದಂಪತಿ ಸಂವಿಧಾನದ ಪೀಠಿಕೆಯನ್ನು ಪಠಣ ಮಾಡಿದರು. ಈ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ ಆರ್​ ಅಂಬೇಡ್ಕರ್, ನಾರಾಯಣ ಗುರು ಹಾಗೂ ರಾಷ್ಟ್ರಕವಿ ಕುವೆಂಪು ಅವರ ಆದರ್ಶವನ್ನು ಸ್ಮರಿಸಿದರು. ಮದುವೆಗೆ ಬಂದವರು ಮಹಾನ್ ಪುರುಷರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ಎಂದು ಹಾರೈಸಿದರು.

ABOUT THE AUTHOR

...view details