ಕರ್ನಾಟಕ

karnataka

ಬಿದ್ದಿರುವ ಮನೆಗಳಿಗೆ ಪರಿಹಾರ ವಿತರಿಸಿ: ಕೊರಡೂರು ಗ್ರಾಮಸ್ಥರ ಪ್ರತಿಭಟನೆ

By

Published : Feb 2, 2021, 7:53 AM IST

2019ರ ಅತಿವೃಷ್ಟಿ ಮತ್ತು 2020ರಲ್ಲಿ ಸುರಿದ ಧಾರಾಕಾರ ಮಳೆಗೆ ಕೊರಡೂರು ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ 30ಕ್ಕೂ ಅಧಿಕ ಮನೆಗಳು ಬಿದ್ದಿದ್ದು, ಪರಿಹಾರ ವಿತರಿಸುವಂತೆ ಒತ್ತಾಯಿಸಿ ಕೊರಡೂರು ಗ್ರಾಮಸ್ಥರು ಕಳೆದ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

Residents of Koradur demanded as redress for fallen houses
ಬಿದ್ದಿರುವ ಮನೆಗಳಿಗೆ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಕೊರಡೂರು ಗ್ರಾಮಸ್ಥರ ಪ್ರತಿಭಟನೆ

ಹಾವೇರಿ: ನೆರೆ ಮತ್ತು ಧಾರಾಕಾರ ಮಳೆ ಪರಿಣಾಮ ಬಿದ್ದಿರುವ ಮನೆಗಳಿಗೆ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಹಾವೇರಿ ತಾಲೂಕಿನ ಕೊರಡೂರು ಗ್ರಾಮಸ್ಥರು ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊರಡೂರು ಗ್ರಾಮಸ್ಥರ ಪ್ರತಿಭಟನೆ

ತಾಲೂಕಿನ ಹೊಸಕಿತ್ತೂರು ಗ್ರಾಮ ಪಂಚಾಯತ್​ ಕಚೇರಿ ಮುಂದೆ ಕೊರಡೂರು ಗ್ರಾಮದ ಅಂಬೇಡ್ಕರ್​​ ಕಾಲೋನಿ ನಿವಾಸಿಗಳು ಪ್ರತಿಭಟನೆ ಆರಂಭಿಸಿದ್ದಾರೆ. 2019ರ ಅತಿವೃಷ್ಟಿ ಮತ್ತು 2020ರಲ್ಲಿ ಸುರಿದ ಧಾರಾಕಾರ ಮಳೆಗೆ ಕಾಲೋನಿಯಲ್ಲಿ 30ಕ್ಕೂ ಅಧಿಕ ಮನೆಗಳು ಬಿದ್ದಿವೆ. ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ಪರಿಹಾರ ಸಿಗುವವರೆಗೂ ನಿರಂತರ‌ ಪ್ರತಿಭಟನೆ ನಡೆಸುವುದಾಗಿ ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:2013ರ ಎಟಿಎಮ್​ ಹಲ್ಲೆ ಪ್ರಕರಣ: ಇಂದು ಅಪರಾಧಿ ಮಧುಕರ್​ಗೆ ಶಿಕ್ಷೆ ಪ್ರಮಾಣ ಪ್ರಕಟ

ಕುಟುಂಬ ಸಮೇತ ಪಂಚಾಯತ್​​ ಕಚೇರಿ ಮುಂದೆಯೇ ಸೇರಿದ ಪ್ರತಿಭಟನಾಕಾರರು, ಅಲ್ಲಿಯೇ ಅಡುಗೆ ತಯಾರಿಸಿ, ಊಟ ಮಾಡಿದರು.

ABOUT THE AUTHOR

...view details