ಕರ್ನಾಟಕ

karnataka

ಕಾರು ಅಪಘಾತ: ಹುಟ್ಟಿದ ದಿನವೇ ಸಾವಿಗೀಡಾದ ಬರ್ತಡೇ ಬಾಯ್

By ETV Bharat Karnataka Team

Published : Jan 12, 2024, 4:01 PM IST

ಹುಟ್ಟುಹಬ್ಬದ ದಿನವೇ ಯುವಕನೊಬ್ಬ ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

ಕಾರು ಅಪಘಾತ
ಕಾರು ಅಪಘಾತ

ಕಾರು ಅಪಘಾತ

ಹಾಸನ :ಹುಟ್ಟುಹಬ್ಬದ ಸೆಲೆಬ್ರೇಷನ್‌ ಮಾಡಿ ಪ್ರಯಾಣ ಮಾಡುತ್ತಿದ್ದಾಗ ಕಾರು ಅಪಘಾತವಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಕ್ಷಿತ್ (22), ಕುಶಾಲ್ (24) ಮೃತ ಯುವಕರು. ಅಭಿಷೇಕ್, ನಿಶಾಂತ್, ಮಂಜುನಾಥ್ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಹಾಸನದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ರಾತ್ರಿ ಬರ್ತಡೇ ಬಾಯ್ ರಕ್ಷಿತ್ ಹುಟ್ಟುಹಬ್ಬವನ್ನು ಶಾಂತಿಗ್ರಾಮದ ಫ್ಲೈಓವರ್ ಮೇಲೆ ಆಚರಿಸಿದ ಆತನ ಗೆಳೆಯರು, ನಂತರ ಪ್ರಯಾಣ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಎಲೆಕ್ಟ್ರಿಕ್ ಪೋಲ್‌ಗೆ ಡಿಕ್ಕಿ ಹೊಡೆದು, ರಸ್ತೆ ಬದಿಯ ರೈತನ ಜಮೀನಿಗೆ ಹಾರಿ ಬಿದ್ದಿದೆ. ಪರಿಣಾಮ ರಕ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಕುಶಾಲ್ ಚಿಕಿತ್ಸೆ ಫಲಕಾರಿಯಾಗದೇ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲೈಓವರ್ ನಿರ್ಮಾಣವಾಗುವ ಮುನ್ನ ಇದೇ ಸ್ಥಳದಲ್ಲಿ 5 ಮಂದಿ ರೈತರು ಬಸ್ ಅಪಘಾತದಲ್ಲಿ ಮೃತಪಟ್ಟಿದ್ದರು. ಬಳಿಕ ವೊಲ್ವೋ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದ್ದು, 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದವು. ನಂತರ ದ್ವಿಚಕ್ರ ವಾಹನ ಸೇರಿದಂತೆ ಕಾರುಗಳು ಅಪಘಾತಕ್ಕೀಡಾಗಿ ಇಲ್ಲಿ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಡ ಹಾಕಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಇದನ್ನ ಅಪಘಾತಗಳು ಅಂತ ಘೋಷಣೆ ಮಾಡಿತ್ತು.

ಇತ್ತೀಚೆಗಷ್ಟೇ ಫ್ಲೈಓವರ್ ನಿರ್ಮಾಣವಾದ ಬಳಿಕ ಗ್ಯಾಸ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಫ್ಲೈಓವರ್ ಮೇಲೆ ಪಲ್ಟಿಯಾಗಿತ್ತು. ನಂತರ ಇದು ಎರಡನೇ ಅಪಘಾತವಾಗಿದ್ದು, ಇಬ್ಬರನ್ನು ಬಲಿ ತೆಗೆದುಕೊಂಡಿದೆ.

ಯುವ ವೈದ್ಯ ಸೇರಿ ಮೂವರು ಸಾವು (ಪ್ರತ್ಯೇಕ ಪ್ರಕರಣ): ರಸ್ತೆ ಪಕ್ಕ ನಿಂತಿದ್ದ ಲಾರಿಗೆ ರಭಸವಾಗಿ ಕಾರು ಗುದ್ದಿದ ಪರಿಣಾಮ ಸ್ಥಳದಲ್ಲೇ ಯುವ ವೈದ್ಯ ಸಾವನ್ನಪ್ಪಿ, ಇಬ್ಬರು ಎಂಬಿಎ ಪದವೀಧರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಬಿ. ಎಸ್ ಯಡಿಯೂರಪ್ಪ ಮಾರ್ಗದಲ್ಲಿ (ಜನವರಿ-9-24) ರಾತ್ರಿ ನಡೆದಿತ್ತು. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸೌರಬ್ ಕಾಂಬಳೆ (25) ಸ್ಥಳದಲ್ಲೇ ಮೃತಪಟ್ಟ ಯುವ ವೈದ್ಯ. ಜಮಖಂಡಿಯ ಗಿರೀಶ ಕರೆಮ್ಮನವರ (25), ಚೇತನ್ ಧರಿಗೌಡರ (25) ಗಂಭೀರ ಗಾಯಗೊಂಡಿದ್ದರು.

ಕೂಡಲೇ ಸ್ಥಳೀಯರು ಮತ್ತು ಸಂಚಾರ ಠಾಣೆಯ ಪೊಲೀಸರು, ಇಬ್ಬರು ಗಾಯಾಳು ಯುವಕರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿತ್ತು. ರಾತ್ರಿ ಪಾರ್ಟಿ ಮುಗಿಸಿ ಮರಳುವಾಗ ನಿಂತ ಲಾರಿಗೆ ರಭಸವಾಗಿ ಗುದ್ದಿದ ಕಾರು ಅಪಘಾತದ ರಭಸಕ್ಕೆ ನಾಲ್ಕೈದು ಪಲ್ಟಿ ಹೊಡೆದಿತ್ತು. ಸ್ಥಳಕ್ಕೆ ಬೆಳಗಾವಿ ದಕ್ಷಿಣ ಸಂಚಾರ ಠಾಣೆ ‌ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ:ಮೂರು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳು: ಯುವ ವೈದ್ಯ ಸೇರಿ ಮೂವರು ಸಾವು

ABOUT THE AUTHOR

...view details