ಕರ್ನಾಟಕ

karnataka

ಮಹಾಲಯ ಅಮವಾಸ್ಯೆ ದಿನವೇ ವಾಮಾಚಾರ ಶಂಕೆ.. ಆತಂಕದಲ್ಲಿ ಮನೆ ಮಂದಿ

By

Published : Sep 28, 2019, 8:49 PM IST

Updated : Sep 28, 2019, 9:25 PM IST

ಸಿರಗುಪ್ಪ ನಗರದ ವ್ಯಕ್ತಿಯೊಬ್ಬರ ಮನೆ ಮುಂದೆ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ.

ವಾಮಾಚಾರ

ಬಳ್ಳಾರಿ: ಮಹಾಲಯ ಅಮಾವಾಸ್ಯೆ ದಿನದಂದೇ ಜಿಲ್ಲೆಯ ಸಿರುಗುಪ್ಪ ನಗರದ ಸದಾಶಿವ ನಗರದ ನಿವಾಸಿ ಲೋಕೇಶ್ ಎಂಬುವರ ಮನೆಯ ಮುಂದೆ ವಾಮಾಚಾರ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.

ಸಿರಗುಪ್ಪ ನಗರದ ಲೋಕೇಶ್ ಎಂಬುವವರ ಮನೆ ಮುಂದೆ ವಾಮಾಚಾರ ನಡೆಸಿರುವ ದೃಶ್ಯ

ಟೈಲರ್ ವೃತ್ತಿಯಲ್ಲಿರುವ ಲೋಕೇಶ್​ ಬಾಡಿಗೆ ಮನೆಯಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಬೆಳಗಿನಜಾವ ಮನೆ ಬಾಗಿಲು ತೆರೆದ ತಕ್ಷಣ ಈ ವಾಮಾಚಾರ ನಡೆಸಿರುವ ದೃಶ್ಯ ಕಂಡು ಬಂದಿದ್ದು, ಆತಂಕಕ್ಕೀಡಾಗಿದ್ದಾರೆ.

ಅಲ್ಲದೇ ವಾಮಾಚಾರಕ್ಕೆ ಐದು ಕೋಳಿಯನ್ನು ಬಲಿ ಕೊಡಲಾಗಿದೆ. ಮನೆಯ ಮುಂಭಾಗ ಕೋಳಿಯ ತಲೆ ಹಾಗೂ ಕಾಲುಗಳನ್ನು ಇಟ್ಟು, ದೊಡ್ಡ ಕಪ್ಪುಬಟ್ಟೆಯ ಮೇಲೆ ಅಕ್ಕಿ ಅದರ ಮೇಲೆ ತೆಂಗಿನಕಾಯಿ ಇತರ ಸಾಮಗ್ರಿಗಳೊಂದಿಗೆ ಪೂಜೆ ಮಾಡಲಾಗಿದೆ.

ಅಮವಾಸ್ಯೆ ಹಿಂದಿನ ನಡುರಾತ್ರಿ ನಡೆದಿರುವ ಈ ವಾಮಾಚಾರದ ಕೃತ್ಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ವಾಮಾಚಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ನಗರಸಭೆ ಪೌರಕಾರ್ಮಿಕರಿಗೆ ಕರೆಮಾಡಿ ಎತ್ತಿ ಬಿಸಾಡಿದ್ದಾರೆ.

Intro:ಮಹಾಲಯ ಅಮಾವಾಸ್ಯೆ ದಿನದಂದು…
ಸಿರುಗುಪ್ಪ ಸದಾಶಿವನಗರದಲ್ಲಿಂದು ವಾಮಾಚಾರದ ಶಂಕೆ!
ಬಳ್ಳಾರಿ: ಮಹಾಲಯ ಅಮಾವಾಸ್ಯೆ ದಿನದಂದೇ ಜಿಲ್ಲೆಯ ಸಿರುಗುಪ್ಪಾದ ಸದಾಶಿವನಗರದ ನಿವಾಸಿ ಲೋಕೇಶ ಎಂಬುವರ ಮನೆಯ ಹೊಸ್ತಿಲ ಮುಂದೆಯೇ ವಾಮಾಚಾರ ಮಾಡಿಸಿರುವ ಶಂಕೆ ಹಬ್ಬಿದೆ. ಈ ವಾಮಾಚಾರದಿಂದಾಗಿ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.
ಟೈಲರ್ ವೃತ್ತಿಯಲ್ಲಿರುವ ಲೋಕೇಶ ಅವರು ಮೇಲ್ಗಡೆಯ ಮನೆಯನ್ನು ಬಾಡಿಗೆ ಪಡೆದುಕೊಂಡು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಬೆಳಗಿನಜಾವ ಮನೆ ಬಾಗಿಲು ತೆರೆದ ತತ್ ಕ್ಷಣದಲ್ಲಿಯೇ ಈ ವಾಮಾಚಾರದ ಶಂಕೆಯ ದೃಶ್ಯ ಕಂಡು ಒಂದ್ ಕ್ಷಣ ನಿಬ್ಬೆರಗಾಗಿದ್ದಾರೆ. ಮನೆಯ ಬಾಗಿಲ ಹೊಸ್ತಿಲ ಮುಂದೆ ದೊಡ್ಡ ಪ್ರಮಾಣದ ವಾಮಾಚಾರವನ್ನು ಕಂಡು ಆತಂಕಕ್ಕೀಡಾಗಿದ್ದಾರೆ.
ಅಲ್ಲದೇ, ಆ ವಾಮಾಚಾರಕ್ಕೆ ಐದು ಕೋಳಿಯನ್ನು ಬಲಿ ಕೊಡಲಾಗಿದೆ. ಮನೆಯ ಮುಂಭಾಗ ಕೋಳಿಯ ತಲೆ ಹಾಗೂ ಕಾಲುಗಳನ್ನು ಇಟ್ಟು, ದೊಡ್ಡ ಕಪ್ಪುಬಟ್ಟೆಯ ಮೇಲೆ ಅಕ್ಕಿ ಅದರ ಮೇಲೆ ತೆಂಗಿನಕಾಯಿ, ಕೋಳಿಯ ತಲೆಯಿಟ್ಟು, ಇತರೆ ಸಾಮಾಗ್ರಿ ಗಳೊಂದಿಗೆ ಪೂಜೆ ಮಾಡಲಾಗಿದೆ.
ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಗುಂಪು ಗುಂಪಾಗಿ ಜನ
ಸೇರಿ ಎದೆ ಝಲ್‍ ಎನ್ನಿಸುವ ದೃಶ್ಯ ಕಂಡು ಅನೇಕ ತೆರನಾಗಿ ಮಾತಾಡಿಕೊಂಡರು. ಇಂತಹ ಜನನಿಬಿಡ ಪ್ರದೇಶ ವ್ಯಾಪ್ತಿಯ ಮಹಡಿ ಮೇಲಿನ ಮನೆಯ ಮುಂದೆ ಶುಕ್ರವಾರ ಮಧ್ಯರಾತ್ರಿ ಅಂದರೆ ಸರ್ವಪಿತೃ ಅಮವಾಸ್ಯೆ ಹಿಂದಿನ ನಡುರಾತ್ರಿ ನಡೆದಿರುವ ಈ ವಾಮಾಚಾರದ ದುಶ್ಕೃತ್ಯದ ಘಟನೆ ಅನೇಕ ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ಮನೆಯಲ್ಲಿನ ಚಿಕ್ಕಮಕ್ಕಳೂ ಸೇರಿದಂತೆ ಕುಟುಂಬದವರು ಮತ್ತು ಸುತ್ತಮುತ್ತಲಿನ ನಿವಾಸಿಗಳು ಈ ಕೃತ್ಯದಿಂದ ಬಹಳಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈ ವಾಮಾಚಾರಕ್ಕೆ ಸಂಭಂಧಿಸಿದ ವಸ್ತುಗಳನ್ನು ನಗರಸಭೆ ಪೌರಕಾರ್ಮಿಕರಿಗೆ ಕರೆಮಾಡಿ ಎತ್ತಿ ಬಿಸಾಡಿದ್ದಾರೆ.
ಸಾಕಷ್ಟು ಮುಂದುವರೆದ ಈ ವೈಜ್ಞಾನಿಕ ಕಾಲದಲ್ಲೂ ಕೂಡ ಇಂಥ ಕೃತ್ಯ ನಡೆದಿರೋದು ಅತ್ಯಂತ ಖೇದಕರ ಸಂಗತಿ. ಕೆಲವೇ ನಿರ್ದಿಷ್ಠ ದಿನ ಮತ್ತು ಸಮಯದಲ್ಲಿ ಎಸಗುವ ವಾಮಾಚಾರ ಕ್ರಿಯೆಗಳು ಪರಿಣಾಮಕಾರಿ ಫಲ ನೀಡುತ್ತದೆ ಎನ್ನುವುದೂ ಕೆಲವರ ನಂಬಿಕೆ ಯಾಗಿದೆ.
Body:ಶುಕ್ರವಾರ ಮಧ್ಯರಾತ್ರಿ ಮಾಟಮಂತ್ರಗಳ ಕೂಡಿದ ವಾಮಾಚಾರ ಈ ನಗರದಲ್ಲಿ ನಡೆದಿದೆ. ಅದನ್ನು ನಾನು ಸೂಕ್ಷ್ಮವಾಗಿ ಪರಿಶೀಲಿಸಿ ದ್ದೇನೆ. ಅದರಿಂದ ಮನೆಯವರಿಗಾಗಲೀ, ನೆರೆಯವರಿಗಾಗಲೀ ಯಾವುದೇ ಅಪಾಯವಿಲ್ಲ. ದೈವ ಶಕ್ತಿಯನ್ನು ಪಾಲಿಸಬೇಕು. ದೈವಿಶಕ್ತಿ ಮುಂದೆ ಯಾವ ದುಷ್ಠಶಕ್ತಿಗಳ ಆಟ ನಡೆಯೋದಿಲ್ಲ. ಯಾರೋ ಭಯ ಬೀಳಿಸಲು ಮಾಡಿರುವ ಕುತಂತ್ರದ ಕೆಲಸ ಇದಾಗಿದೆ. ಯಾವ ತೊಂದರೆಯೂ ಇಲ್ಲ ಎಂದು ರಾಜಶೇಖರ ಶಾಸ್ತ್ರಿ ತಿಳಿಸಿದ್ದಾರೆ.
ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ವಾದರೂ ಸುದ್ದಿ ತಿಳಿದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ‌ ನೀಡಿ ವೀಕ್ಷಣೆ ಮಾಡಿದ್ದಾರೆ. ಇಂತಹ ಕೃತ್ಯ ನಡೆಸುವವರನ್ನು ಪತ್ತೆಹಚ್ಚಿ ಸಾರ್ವಜನಿಕರ ನೆಮ್ಮದಿ ವಾಸಕ್ಕೆ ಅನುವು ಮಾಡಿಕೊಡಬೇಕು ಎಂದು ಸದಾಶಿವನಗರದ ನಿವಾಸಿಗಳು ವಿನಂತಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_SIRUGUPPA_VAMACHAR_NEWS_7203310

KN_BLY_4f_SIRUGUPPA_VAMACHAR_NEWS_7203310
Last Updated :Sep 28, 2019, 9:25 PM IST

ABOUT THE AUTHOR

...view details