ಕರ್ನಾಟಕ

karnataka

ಸೋನಿಯಾ ಗಾಂಧಿಗೆ ನಾನೂ ಸ್ವಾಗತ ಕೋರುತ್ತೇನೆ: ರಾಜ್ಯ ಬಿಜೆಪಿ ಉಪಾಧ್ಯಕ್ಷ  ಸವದಿ

By

Published : Oct 3, 2022, 5:29 PM IST

Updated : Oct 3, 2022, 8:01 PM IST

ಭಾರತ್​ ಜೋಡೋ ಪಾದಯಾತ್ರೆ ಹಿನ್ನೆಲೆ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಅವರನ್ನ ನಾನೂ ಸ್ವಾಗತಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೇಳಿದರು.

KN_ATH_01_03
ಲಕ್ಷ್ಮಣ್​ ಸವದಿ

ಅಥಣಿ: ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಆಗಮಿಸಿದ್ದು, ಅವರಿಗೆ ನಾನು ಸ್ವಾಗತ ಕೋರುತ್ತೇನೆ, ಅವರು ಕಾಲು ಇಟ್ಟಲೆಲ್ಲ ಬಿಜೆಪಿಯ ಕಮಲ ಅರಳುತ್ತದೆ. ಹಾಗಾಗಿ ನಾನು ಅವರನ್ನ ಸ್ವಾಗತ ಬಯಸುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಲಕ್ಷ್ಮಣ್ ಸವದಿ ಕೈ ಮುಖಂಡರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನೂತನವಾಗಿ ಪೊಲೀಸ್ ಠಾಣಾ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್ ಪಕ್ಷದವರು ಭಾರತ್​ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ, ಭಾರತ ಎಲ್ಲಿ ಒಡೆದಿದೆ ಎಂದು ಇವರು ಜೋಡೋ ಕಾರ್ಯಕ್ರಮ ಮಾಡುತ್ತಿದ್ದಾರೆ.

ಭಾರತ ಜೋಡೋ ಎಂಬುವುದು ಡಿಕೆ ಶಿವಕುಮಾರ್, ಸಿದ್ದರಾಮಯ್ಯರನ್ನ ಒಟ್ಟುಗೂಡಿಸಲಿಕ್ಕೆ ಮಾಡುತ್ತಿರುವ ಯಾತ್ರೆ ಎಂದು ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು. ಭಾರತದಲ್ಲಿ ಜಮ್ಮು ಕಾಶ್ಮೀರವನ್ನು ಹೊರಗಿಟ್ಟು ಭಾರತ ಒಡೆದಿದ್ದು ಕಾಂಗ್ರೆಸ್ನವರು. ಆದರೆ, ಜಮ್ಮು ಕಾಶ್ಮೀರದ 370ನೇ ವಿಧಿ ರದ್ದು ಮಾಡಿ ಭಾರತ ಜೋಡಣೆ ಮಾಡಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಸವದಿ ಪ್ರತಿಪಾದಿಸಿದರು.

ಭಾರತ್​ ಜೋಡೋ ಬಗ್ಗೆ ಲಕ್ಷಣ್​ ಸವದಿ ಪ್ರತಿಕ್ರಿಯೆ

ಅಂದಿನ ಗುಜರಾತ್​ನ ಗೃಹ ಸಚಿವರಾದ ಸರ್ದಾರ್ ವಲ್ಲಭ್​ಭಾಯಿ ಪಟೇಲ್ ಅವರು ರಾಜನೀತಿಯನ್ನು ರದ್ದು ಮಾಡಿ ಅಖಂಡ ಭಾರತ ನಿರ್ಮಾಣ ಮಾಡಿದ್ದು ಇತಿಹಾಸ. ಆದರೆ, ಕಾಂಗ್ರೆಸ್ ನವರು ಏನು ಜೋಡಣೆ ಮಾಡುತ್ತಿದ್ದಾರೆ ಎಂದು ಸವದಿ ಕೈ ಪಕ್ಷದ ವಿರುದ್ಧ ಹರಿಹಾಯ್ದಾದರು.

ಪಿಎಫ್​ಐ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯೆ:ದೇಶಾದ್ಯಂತ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರದಿಂದ ಐದು ವರ್ಷ ಪಿಎಫ್​ಐ ಬ್ಯಾನ್ ಮಾಡಲಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವಂತ ಸಂಘಟನೆಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ದಾಕ್ಷಿಣ್ಯ ಕ್ರಮಗಳನ್ನು ಜರಗಿಸುತ್ತೇವೆ. ಆದರೆ, ಪಿಎಫ್ಐ ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್ ನವರು ಮನಬಂದಂತೆ ಮಾತನಾಡುತ್ತಿದ್ದಾರೆ.

ಮೊದಲು ತಾಕತ್ತಿದ್ದರೆ ಪಿಎಫಐ ಬ್ಯಾನ್ ಮಾಡಲೆಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಸವಾಲ್ ಹಾಕಿದ್ದರು. ಬ್ಯಾನ್ ಆಗುತ್ತಿದ್ದಂತೆ ಮತ್ತೆ ಆರ್​ಎಸ್​ಎಸ್ ಬಗ್ಗೆ ಮಾತನಾಡುತ್ತಾರೆ. ಆರ್​ಎಸ್​ಎಸ್ ದೇಶಭಕ್ತರನ್ನು ಹುಟ್ಟು ಹಾಕುವ ಕಾರ್ಖಾನೆ. ಸ್ವಾತಂತ್ರ್ಯ ಪೂರ್ವದಿಂದಲೂ ಆರ್​ಎಸ್​ಎಸ್ ಸಂಘಟನೆ ದೇಶಕ್ಕೆ ದುಡಿದಿದೆ. ಸದ್ಯ ಕಾಂಗ್ರೆಸ್ ನವರಿಗೆ ಮಾತನಾಡುವುದಕ್ಕೆ ಏನೂ ಇಲ್ಲ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆಂದು ಸವದಿ ಆರೋಪಿಸಿದರು.

ಸಚಿವ ಸಂಪುಟ ವಿಸ್ತರಣೆ: ಸಚಿವ ಸಂಪುಟ ವಿಸ್ತರಣೆ ಪುನರಚನೆ ನನಗೆ ಮಾಹಿತಿ ಇಲ್ಲ, ಎಲ್ಲವನ್ನು ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ನನಗೂ ಸಚಿವ ಸ್ಥಾನ ಕೊಟ್ಟರೆ ನಾನು ನಿಮಗೆ ಮೊದಲು ಅಭಿನಂದನೆ ಹೇಳುತ್ತೇನೆ ಎಂದರು.

ಇದನ್ನೂ ಓದಿ:ಕೊಲೆಗಡುಕರ ಕೇಸ್ ವಾಪಸ್ ತಗೆದುಕೊಂಡರಲ್ಲ ಅದಕ್ಕೆ ಕಾಂಗ್ರೆಸ್ ನಶಿಸುತ್ತಿದೆ : ಕೆ ಎಸ್​ ಈಶ್ವರಪ್ಪ

Last Updated :Oct 3, 2022, 8:01 PM IST

ABOUT THE AUTHOR

...view details