ಕರ್ನಾಟಕ

karnataka

ಬಿಎಂಟಿಸಿ ಬಸ್​ಗೆ ಬೈಕ್ ಸವಾರ ಬಲಿ

By

Published : Nov 3, 2022, 11:26 AM IST

Updated : Nov 3, 2022, 12:00 PM IST

ಬೆಂಗಳೂರಿನ ಸುಮ್ಮನಹಳ್ಳಿ ಡಿಪೋ ಬಳಿ ಹಿಂಬದಿಯಿಂದ ಬಂದ ಯಮರೂಪಿ ಬಿಎಂಟಿಸಿ ಬಸ್ ಏಕಾಏಕಿ ಬೈಕ್​ಗೆ ಡಿಕ್ಕಿ ಹೊಡೆದು ಸವಾರನ ಮೇಲೆ ಹತ್ತಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

accident
ಯಮರೂಪಿ ಬಿಎಂಟಿಸಿ ಬಸ್​ಗೆ ಯುವಕ ಬಲಿ

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸುಮನಹಳ್ಳಿ ಡಿಪೋ ಬಳಿ ನಿನ್ನೆ ರಾತ್ರಿ 10:30ರ ಸುಮಾರಿಗೆ ನಡೆದಿದೆ.

ಸುಮನಹಳ್ಳಿಯಿಂದ ಲಗ್ಗೆರೆ ರಸ್ತೆ ಮಾರ್ಗವಾಗಿ ಬೈಕ್ ಸವಾರ ಪ್ರಮೋದ್ (24) ಆಗಮಿಸುತ್ತಿದ್ದಾಗ ಹಂಪ್ ಇದ್ದ ಕಾರಣ ನಿಧಾನವಾಗಿ ಸಾಗಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಬಸ್, ಬೈಕ್​ಗೆ ಗುದ್ದಿ ಸವಾರನ ಮೇಲೆ ಸಂಚರಿಸಿದೆ.

ಬೈಕ್​ಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್

ಇದನ್ನೂ ಓದಿ:ಜ್ಞಾನಭಾರತಿ ವಿವಿಯಲ್ಲಿ ವಿದ್ಯಾರ್ಥಿನಿ ಮೇಲೆ ಹರಿದ ಬಿಎಂಟಿಸಿ ಬಸ್.. ವಿದ್ಯಾರ್ಥಿಗಳಿಂದ ಪ್ರತಿಭಟನೆ

ಯಶವಂತಪುರದಿಂದ ಬನಶಂಕರಿಗೆ ಸಂಚರಿಸುವ ಬಿಎಂಟಿಸಿ ಬಸ್ ಇದಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಸಾರ್ವಜನಿಕರು ಬಸ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳಕ್ಕೆ ಕಾಮಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಚಾಲಕನನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದರು.

Last Updated :Nov 3, 2022, 12:00 PM IST

ABOUT THE AUTHOR

...view details