ಕರ್ನಾಟಕ

karnataka

ಬಿಜೆಪಿಯಿಂದ ಹಣ ಪಡೆದಿಲ್ಲ.. ಸರ್ಕಾರ ಉಳಿಸಲು ಹಾಗೆ ಹೇಳಿದ್ದು: ಶಾಸಕ ಶ್ರೀನಿವಾಸ್​ ಗೌಡ

By

Published : Mar 30, 2019, 2:34 AM IST

ಬಿಜೆಪಿಯಿಂದ ಹಣಪಡೆದಿದ್ದೆ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ಶಾಸಕ ಶ್ರೀನಿವಾಸ್​ ಗೌಡ ಅವರಿಗೆ ಎಸಿಬಿ ಕ್ಲೀನ್ ಚಿಟ್ ಕೊಟ್ಟಿದೆ. ಹೀಗಾಗಿ ಪ್ರಕರಣದಿಂದ ಶ್ರೀನಿವಾಸ್​ ಗೌಡ ಬಚಾವ್ ಆದಾಂತಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಶಾಸಕ ಶ್ರೀನಿವಾಸ್​ ಗೌಡ

ಬೆಂಗಳೂರು:ಬಿಜೆಪಿ ಶಾಸಕರಾದ ವಿಶ್ವನಾಥ್, ಅಶ್ವಥ್ ನಾರಾಯಣ, ಯೋಗೇಶ್ವರ್ ನನಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು‌ ನನಗೆ 25 ಕೋಟಿ ರೂ ಹಣದ ಆಮಿಷ ಇಟ್ಟಿದ್ರು. ಅಡ್ವಾನ್ಸ್ ಆಗಿ 5 ಕೋಟಿ ರೂ ನೀಡಿದ್ರು. ಈ ಹಿನ್ನೆಲೆಯಲ್ಲಿ ತಿಂಗಳು ಹಣ ಮನೆಯಲ್ಲಿ ಇತ್ತು ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಶ್ರೀನಿವಾಸ್ ಗೌಡ ಹೇಳಿದ್ರು.

ಆದ್ರೆ ತನಿಖಾಧಿಕಾರಿಗಳಿಗೆ ಇದಕ್ಕೆ ಬೇಕಾದ ಸಾಕ್ಷಿಗಳು ಸಿಕ್ಕಿಲ್ಲ. ಶ್ರೀನಿವಾಸ್​ ಗೌಡ ಅವರು ಬಿಜೆಪಿಯಿಂದ ಹಣ ಪಡೆದಿದ್ದಕ್ಕೆ ಪುರಾವೆ ಇಲ್ಲ. ಅಲ್ಲದೆ ಬಿಜೆಪಿಯಿಂದ ಹಣ ಪಡೆದು ಮನೆಯಲ್ಲಿಟ್ಟಿದ್ದಕ್ಕೂ ದಾಖಲೆ ಇಲ್ಲ ಎಂದು ಎಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ.

ಶಾಸಕ ಶ್ರೀನಿವಾಸ್​ ಗೌಡ

ಉಲ್ಟಾ ಹೊಡೆದ ಶ್ರೀನಿವಾಸ್​ ಗೌಡ:

ಇನ್ನು ಮಾಧ್ಯಮದಲ್ಲಿ ಯಾಕೆ ಈ ರೀತಿ ಹೇಳಿಕೆ ನೀಡಿದ್ರಿ ಎಂಬ ಎಸಿಬಿ ಪ್ರಶ್ನೆಗೆ ನಾನು ಆ ಕ್ಷಣಕ್ಕೆ ಹಾಗೇ ಹೇಳಬೇಕಾಯ್ತು. ಬಿಜೆಪಿ ಮುಖಂಡರು ನನಗೆ 25 ಕೋಟಿ ಆಫರ್ ಮಾಡಿದ್ರು. 5 ಕೋಟಿ ಹಣ ಮುಂಗಡ ಹಣ ಕೊಟ್ಟಿದ್ರು ಎಂದು ಹೇಳುವ ಸನ್ನಿವೇಶ ಇತ್ತು. ನಾನು ಹಾಗೆ ಹೇಳಿದ್ದರಿಂದ ಆಪರೇಷನ್ ಕಮಲಕ್ಕೆ ಬ್ರೇಕ್ ಬಿದ್ದಿದೆ. ಸಮ್ಮಿಶ್ರ ಸರ್ಕಾರ ಉಳಿಸೋ ಸಲುವಾಗಿ ಆ ರೀತಿ ಹೇಳಿದ್ದೆ. ಆದ್ರೆ ನಾನು ಯಾವುದೇ ಹಣ ಪಡೆದಿಲ್ಲ ಎಂದಿದ್ದಾರೆ.

ದೂರುದಾರರ ಬಳಿಯೂ ಇಲ್ಲ ಸೂಕ್ತ ಸಾಕ್ಷ್ಯ:
ಶಾಸಕ ಶ್ರೀನಿವಾಸ್​ ಗೌಡ ಹಣ ಪಡೆದಿದ್ದಾರೆ ಎಂದು ಆರ್​ಟಿಐ ಕಾರ್ಯಕರ್ತ ದೂರು ನೀಡಿದ್ರು. ಆದ್ರೆ ದೂರುದಾರರಬಳಿಯಾವುದೇ ವಿಡಿಯೋ ಸಾಕ್ಷ್ಯಗಳು ಇಲ್ಲ. ‌ಖುದ್ದು ಶಾಸಕರೇ ಹಣ ಪಡೆದಿದ್ದೆ ಅಂತ ಮಾದ್ಯಮಗಳಿಗೆ ಹೇಳಿದ್ರು. ಮಾದ್ಯಮಗಳಿಗೆ ನೀಡಿದ್ದಹೇಳಿಕೆ ಮೇರೆಗೆ ದೂರು ದಾಖಲಿಸಿದ್ದೇವೆ ಎಂದಿದ್ದಾರೆ. ಹೀಗಾಗಿ ಶ್ರೀನಿವಾಸ್ ಗೌಡಗೆ ಬಿಗ್ ರೀಲಿಫ್ ನೀಡಲು ಎಸಿಬಿ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

KN_Bng_10_29_Srenivas Gowda_bhavya_7204498
Bhavya

ವಿಶೇಷ ಸುದ್ದಿ

ಕೋಲಾರ ಶಾಸಕ ಶ್ರೀನಿವಾಸಗೌಡರಿಗೆ ಬಿಗ್ ರಿಲೀಫ್.!
ಬಿಜೆಪಿ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ಈ ರೀತಿ ಹೇಳಿಕೆ ನಿಡಿದ್ದೆ ಎಂದ ಕೋಲಾರ ಶಾಸಕ

ಅಪರೇಷನ್ ಕಮಲ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಜೆಡಿಎಸ್ ಶಾಸಕ ಶ್ರೀನಿವಾಸ್ಗೆ ಕ್ಲೀನ್ ಚಿಟ್ ಎಸಿಬಿ ಕೊಟ್ಟಿದೆ. ಹೀಗಾಗಿ ಎಸಿಬಿ ಕೇಸ್ನಿಂದ ಶ್ರೀನಿವಾಸಗೌಡ ಬಚಾವ್ ಆದಾಂತಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ..

ತಾವೇ ಕೊಟ್ಟ ಹೇಳಿಕೆಯನ್ನ ಸುಳ್ಳು ಎಂದ ದ ಜೆಡಿಎಸ್ ಶಾಸಕ.

ಬಿಜೆಪಿ ಶಾಸಕರಾದ ವಿಶ್ವನಾಥ್, ಅಶ್ವಥ್ ನಾರಾಯಣ, ಯೋಗೇಶ್ವರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು‌ 25 ಕೋಟಿ ಹಣದ ಆಮೀಷ ಇಟ್ಟಿದ್ರು. ಅಡ್ವಾನ್ಸ್ ಆಗಿ 5 ಕೋಟಿ ನೀಡಿದ್ರು.. ಈ ಹಿನ್ನೆಲೆ ತಿಂಗಳು ಹಣ ಮನೆಯಲ್ಲಿ ಇತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ್ ಗೌಡ ಹೇಳಿದ್ರು..ಆದ್ರೆ ತನಿಖಾಧಿಕಾರಿಗಳಿಗೆ ಇದಕ್ಕೆ ಬೇಕಾದ ಸಾಕ್ಷಿಗಳು ಸಿಕ್ಕಿಲ್ಲ. ಹಾಗೆಶ್ರೀನಿವಾಸಗೌಡ ಬಿಜೆಪಿಯಿಂದ ಪಡೆದಿದ್ದ ಹಣಕ್ಕೆ ಪುರಾವೆ ಇಲ್ಲಂಯಾಗಿದೆ. ಹಾಗೆ ಬಿಜೆಪಿಯಿಂದ ಹಣ ಪಡೆದು ಮನೆಯಲ್ಲಿಟ್ಟಿದ್ದಕ್ಕು ದಾಖಲೆ ಇಲ್ಲ ಎಂದು ಎಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ.

ತಮ್ಮ ಹೇಳಿಕೆಯನ್ನೆ ಉಲ್ಟಾ ಹೊಡೆದ ಶ್ರೀನಿವಾಸಗೌಡ.

ಇನ್ನು ಮಾಧ್ಯಮದಲ್ಲಿ ಯಾಕೆ ಈ ರೀತಿ ಹೇಳಿಕೆ ನೀಡಿದ್ರಿ ಎಂಬ ಎಸಿಬಿ ಪ್ರಶಗೆ ಶ್ರೀನಿವಾಸ್ ನಾನು ಆ ಕ್ಷಣಕ್ಕೆ ಹಾಗೇ ಹೇಳಬೇಕಾಯ್ತು .ಬಿಜೆಪಿ ಮುಖಂಡರು ನನಗೆ 25 ಕೋಟಿ ಆಫರ್ ಮಾಡಿದ್ರು. 5 ಕೋಟಿ ಹಣ ಮುಂಗಡ ಹಣ ಕೊಟ್ಟಿದ್ರು ಎಂದು ಹೇಳುವ ಸನ್ನಿವೇಶ ಇತ್ತು.ನಾನು ಹಾಗೇ ಹೇಳಿದ್ದರಿಂದ ಮೈತ್ರಿ ಸರ್ಕಾರ ಉಳಿಯಿತು.ಬಿಜೆಪಿ ಆಪರೇಷನ್ ಕಮಲಕ್ಕೆ ಬ್ರೇಕ್ ಬಿದ್ದಿದೆ.ಸಮ್ಮಿಶ್ರ ಸರ್ಕಾರ ಉಳಿಸೋ ಸಲುವಾಗಿ ಆ ರೀತಿ ಹೇಳಿದ್ದೆ.ಆದ್ರೆ ನಾನು ಯಾವುದೇ ಹಣ ಪಡೆದಿಲ್ಲ ಎಂದಿದ್ದಾನೆ.

ಇನ್ನೂ ದೂರುದಾರರ ಬಳಿಯು ಇಲ್ಲ ಸೂಕ್ತ ಸಾಕ್ಷ್ಯ.

ಶಾಸಕ ಶ್ರೀನಿವಾಸಗೌಡ ಹಣ ಪಡೆದಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ದೂರು ನೀಡಿದ್ರು..ಆದ್ರೆ ದೂರು ದಾರರ ಬಳಿ
ಯಾವುದೇ ವಿಡಿಯೀ ಸಾಕ್ಷ್ಯಗಳು ಇಲ್ಲ.‌ಖುದ್ದು ಶಾಸಕರೇ ಹಣ ಪಡೆದಿದ್ದೆ ಅಂತ ಮಾದ್ಯಮಗಳಿಗೆ ಹೇಳಿದ್ರು. ಮಾಧ್ಯಮಗಳ ಹೇಳಿಕೆ ಮೇರೆಗೆ ದೂರು ದಾಖಲಿಸಿದ್ದೇವೆ ಎಂದಿದ್ದಾರೆ. ಹೀಗಾಗಿ ಶ್ರೀನಿವಾಸ್ ಗೌಡಗೆ ಬಿಗ್ ರೀಲಿಫ್ ನೀಡಲು ಎಸಿಬಿ ನಿರ್ಧಾರ ಮಾಡಿದೆ..

TAGGED:

ABOUT THE AUTHOR

...view details