ಕರ್ನಾಟಕ

karnataka

ಕಾಂಗ್ರೆಸ್ ಪಕ್ಷ ಕೇವಲ ಭರವಸೆ ನೀಡುವ ಸರ್ಕಾರ: ಸಿಎಂ ಬೊಮ್ಮಾಯಿ ಲೇವಡಿ

By

Published : Feb 27, 2023, 6:45 AM IST

Updated : Feb 27, 2023, 7:22 AM IST

ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಹಲವು ಕಾಮಗಾರಿಗಳಿಗೆ ಚಾಲನೇ ನೀಡಿದ್ದು, ಈ ಸಂದರ್ಭದಲ್ಲಿ ಮಾತನಾಡಿ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

bhagalkot
ಬಾಗಲಕೋಟೆ

ಬಾಗಲಕೋಟೆಯಲ್ಲಿ ವಿವಿಧ ಕಾಮಗಾರಿಗೆ ಚಾಲನೆ ಕೊಟ್ಟ ಬಿಜೆಪಿ ಮುಖಂಡರು

ಬಾಗಲಕೋಟೆ: ಕಾಂಗ್ರೆಸ್ ಸರ್ಕಾರ ಹೇಗಿದೆ ಎಂದರೆ, ಹಿಂದೆ ಒಬ್ಬ ಶ್ರೀಮಂತ ಇದ್ದನಂತೆ, ಏನಾದರೂ ಕೇಳೋಕೆ ಹೋದರೆ ದೇತಾ ಹುಂ ಅಂತಿದ್ದರು. ನಂತರ ಒಂದು ತಿಂಗಳ ಬಳಿಕ ದಿಲಾತಾ ಹುಂ ಎಂದು, ಇನ್ನೆರಡು ತಿಂಗಳ ಬಿಟ್ಟು ಹೋದರೆ ದೇನೆವಾಲೊ ಕೊ ದಿಖಾತಾ ಹುಂ ಅಂತಾರೆ. ಇಂತಹ ರಾಜಕಾರಣ ಈಗ ನಡೆಯುತ್ತಿದೆ. ಜನರು ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.

ಅವರು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಪರ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಬಹಿರಂಗ ವೇದಿಕೆಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಸರ್ಕಾರ ಕೇವಲ ಭರವಸೆ ನೀಡುತ್ತಾ ಹೋಗುತ್ತದೆ. ಈಗ ಗ್ಯಾರಂಟಿ ಕಾರ್ಡ್​ ಮಾಡಿದ್ದಾರೆ. ಆದರೆ, ನಾವು ಮಾಡಿರುವ ಕೆಲಸ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.

ಇದೇ ಸಮಯದಲ್ಲಿ ಮಾತನಾಡಿದ ಅವರು, ತೇರದಾಳ ಮತಕ್ಷೇತ್ರದ ಬಹು ದಿನಗಳ ಬೇಡಿಕೆಯಾದ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಯಿಂದ 33 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದ ಮುಖ್ಯಮಂತ್ರಿ ಅವರು ಒಟ್ಟು 475 ಕೋಟಿ ರೂ.ಗಳ ವೆಚ್ಚದಲ್ಲಿ ಈ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ತೇರದಾಳ ಕ್ಷೇತ್ರದ 11 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಈ ಕಾರ್ಯ ಕೂಡಲೇ ಕಾರ್ಯಗತಗೊಂಡು ಜಮೀನುಗಳಿಗೆ ನೀರು ದೊರೆಯುವಂತಾಗಬೇಕು ಎಂದರು.

ಈ ಯೋಜನೆಯಿಂದ ಈ ಭಾಗದ ಜಮೀನಿಗೆ ನೀರು ದೊರೆತಾಗ ಭೂಮಿತಾಯಿ ಹಸಿರು ಸೀರೆ ಉಟ್ಟಾಗ ಸಂಪತ್ತು ಬರಿತವಾದ ನಾಡು ಆಗುತ್ತದೆ. ಆಗ ಭೂಮಿ ತಾಯಿ ಬಂಗಾರದ ಬೆಳೆ ಕೊಡುತ್ತಾಳೆ. ಇದರಿಂದ ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯ. ಈ ಭಾಗದ ಸಮಗ್ರ ಅಭಿವೃದ್ದಿಗಾಗಿ ನೀರಾವರಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಹತ್ತು ಹಲವು ರೂಪಿಸಲಾಗಿದೆ. ಈ ಹಿಂದೆ ನೀರಾವರಿ ಸಚಿವರಾದಾಗ ಮುಳವಾಡ ಏತ ನೀರಾವರಿ, ಚಿಮ್ಮಡ ಏತ ನೀರಾವರಿ, ಗುತ್ತಿ ಬಸವಣ್ಣ ನೀರಾವರಿ ಯೋಜನೆ ನೆನಗುದಿಗೆ ಬಿದ್ದಿದ್ದವು. ಅವುಗಳಿಗಳಿಗೆ ಕಾಯಕಲ್ಪ ನೀಡಲಾಗಿದೆ ಎಂದರು. ನಮ್ಮ ಸರ್ಕಾರ ರೈತರಿಗೆ, ನೇಕಾರರರಿಗೆ ಸೇರಿದಂತೆ ಎಲ್ಲರಿಗೂ ಅನುಕೂಲ ಮಾಡಿದೆ. ನೇಕಾರ ಸನ್ಮಾನ ಯೋಜನೆಯಲ್ಲಿ ನೇಕಾರರ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆ ಜಾರಿ ಮಾಡಲಾಗಿದೆ ಎಂದರು.

ಮುಂದುವರಿದು, ಯುವಕರು ಮಹಿಳೆಯರು ಎರಡು ಎಂಜಿನ್ ಇದ್ದ ಹಾಗೆ, ಅವರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದವರು ನೀವು ಅಧಿಕಾರಲ್ಲಿದ್ದಾಗ ಏನು ಮಾಡಿದ್ದೀರಿ. ನಾವು ಮಾಡಿದ ಅಭಿವೃದ್ಧಿ ಕಾರ್ಯದಲ್ಲಿ ಬರಿ ಮೊಸರಲ್ಲಿ ಕಲ್ಲು ಹುಡುಕುತ್ತೀರಿ. ರೈತರಿಗೆ ವಿಮೆಯಿರಲಿಲ್ಲ. ಬೆಳೆಗಳಿಗೆ ಆವರ್ತ ನಿಧಿ ಮಾಡಿದ್ದೇವೆ. ನೀರಾವರಿಗೆ ಹೆಚ್ಚು ಆದ್ಯತೆ ಕೊಟ್ಟಿದ್ದೇವೆ. ಕಾಂಗ್ರೆಸ್ ಸರಕಾರ ಯುಕೆಪಿ ಯೋಜನೆಗೆ ಹತ್ತು ವರ್ಷ ಧಾರಣೆ ಫಿಕ್ಸ್​ ಮಾಡಲಿಲ್ಲ. ಸಿಎಮ್ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ಕರೆದು ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಆದರೆ, ನಮ್ಮ ಸರರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗೆ ಧರ ನಿಗಧಿಪಡಿಸಿ ಒಳ್ಳೆಯ ಕಾರ್ಯ ಮಾಡಿದ್ದೇವೆ.

ದಣಿವರಿಯದೆ ಕೆಲಸ ಮಾಡೋದು ಸಿದ್ದಣ್ಣ ಎಂದು ಶಾಸಕ ಸಿದ್ದು ಸವದಿ ಅವರ ಕುರಿತು ಹೊಗಳಿಕೆಯ ಮಾತನಾಡಿದರು. ವಾರಕ್ಕೊಮ್ಮೆ ಎರಡು ದಿನ ಬೆಂಗಳೂರಿಗೆ ಬಂದು ಎಲ್ಲ ಕೆಲಸ ಮಾಡಿಕೊಳ್ಳೋದು. ಮತ್ತೆ ಕ್ಷೇತ್ರದಲ್ಲಿ ಓಡಾಡೋದು ಕ್ಷೇತ್ರದ ಅತಿ ಹೆಚ್ಚು ಕೆಲಸ ಮಾಡಿಸಿಕೊಂಡಿದ್ದಾರೆ.
ಅವನ ಕಾಟಕ್ಕೆನೆ ಬೇಗ ಸಹಿ ಮಾಡಿ ಕಳಿಸ್ತಿನಿ. ಆದರೆ ಸ್ವಂತಕ್ಕೆ ಯಾವುದೇ ಕೆಲಸ ಕೇಳಿಲ್ಲ ಎಂದರು.

ಇದೇ ಸಮಯದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, 475 ಕೋಟಿ ರೂ.ಗಳ ವೆಚ್ಚದಲ್ಲಿ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಗೆ ಖರ್ಚು ಮಾಡಲಾಗುತ್ತಿದ್ದು, ಇದರಿಂದ 33 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಕೊಡುವ ಒಂದು ದೊಡ್ಡ ಯೋಜನೆಯಾಗಿದೆ. ಅಖಂಡ ವಿಜಯಪುರ-ಬಾಗಲಕೋಟೆ ಜಿಲ್ಲೆಗೆ ಅತೀ ಹೆಚ್ಚು ನೀರಾವರಿ ಯೋಜನೆಗೆ ಮಂಜೂರಾತಿ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆ ಒಂದರಲ್ಲಿ 3,200 ಕೋಟಿ ರೂ.ಗಳ 1.4 ಲಕ್ಷ ಹೆಕ್ಟೇರ್ ನೀರಾವರಿ ಯೋಜನೆಗೆ ಸಿಎಂ ಮಂಜೂರಾತಿ ನೀಡಿ ಕಾಮಗಾರಿ ಪ್ರಾರಂಭಿಸಿದ್ದಾರೆ ಎಂದರು. ಈ ಮುಂಚೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು, ಹಿಪ್ಪರಗಿ ಗ್ರಾಮದಲ್ಲಿರುವ ಮಠಕ್ಕೆ ಭೇಟಿ ನೀಡಿ, ಸ್ಥಳೀಯ ಮಹಾರಾಜ ಅವರ ಆಶೀರ್ವಾದ ಪಡೆದುಕೊಂಡು ಬಂದರು.

ಇದನ್ನೂ ಓದಿ:ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ನಾಯಕರಿಲ್ಲ, ನಮ್ಮ ಪಕ್ಷದಲ್ಲಿ ಇದ್ದಾರೆ: ಪ್ರಹ್ಲಾದ್ ಜೋಶಿ

Last Updated :Feb 27, 2023, 7:22 AM IST

ABOUT THE AUTHOR

...view details