ಕರ್ನಾಟಕ

karnataka

ತೋಟಗಾರಿಕಾ ವಿವಿ ಘಟಿಕೋತ್ಸವ: ಆಧುನಿಕ ಕೃಷಿ ಪದ್ಧತಿಗೆ ಒತ್ತು ನೀಡುವಂತೆ ರಾಜ್ಯಪಾಲರ ಸಲಹೆ

By

Published : May 26, 2022, 10:34 AM IST

ಘಟಿಕೋತ್ಸವದಲ್ಲಿ ಇದೇ ಮೊದಲು ಬಾರಿಗೆ ಹಿರಿಯೂರಿನ ಹೆಚ್.ಏಕಾಂತಯ್ಯನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ನಂತರ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತೋ.ವಿ.ವಿಯಿಂದ 25 ಹಾಗೂ ದಾನಿಗಳು ಕೊಡಮಾಡುವ 52 ಪದಕಗಳು ಸೇರಿ ಒಟ್ಟು 77 ಚಿನ್ನದ ಪದಕಗಳನ್ನು ಪ್ರದಾನ ಮಾಡಿ ಸಾಧಕರನ್ನು ಗೌರವಿಸಲಾಯಿತು.

11th Convocation Of Horticultural University
11th Convocation Of Horticultural University

ಬಾಗಲಕೋಟೆ: ವಿದ್ಯಾವಂತರು ನೌಕರಿ ಪಡೆಯಲು ಅಥವಾ ಉದ್ಯಮಿಯಾಗಲು ಪ್ರಯತ್ನಿಸುವುದು ಹೆಚ್ಚು. ಇದರ ಜೊತೆಗೆ ಕನಿಷ್ಠ ಪಕ್ಷ ತೋಟಗಾರಿಕೆ ಅಧ್ಯಯನ ಅಭಿರುಚಿ ಬೆಳೆಸಿಕೊಳ್ಳಬೇಕು. ಅದನ್ನು ನಿರಂತರವಾಗಿ ಉಳಿಸಿಕೊಂಡು ದೇಶದ ಕೃಷಿಯನ್ನು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನವನಗರದ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ತೋ.ವಿ.ವಿಯ 11ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಭಾರತೀಯ ಹವಾಮಾನವು ಇತರೆ ದೇಶಗಳಿಗೆ ಹೋಲಿಸಿದರೆ ಅತ್ಯುತ್ತಮವಾಗಿದೆ. ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲದ ಋತುಮಾನಸಾರವಾಗಿ ಇಲ್ಲಿ ವಿಭಿನ್ನ ಬೆಳೆಗಳನ್ನು ಬೆಳೆಯಬಹುದು. ಇಂದಿಗೂ ಕೂಡಾ ನಮ್ಮ ದೇಶ ಕೃಷಿ ಪ್ರಧಾನವಾಗಿದ್ದು, ಕೃಷಿ ಪದವೀಧರರು ವಿವಿಧ ಪ್ರಯೋಗ ಮತ್ತು ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದರು.


ಸಚಿವ ಮುನಿರತ್ನ ಮಾತನಾಡಿ, ವಿದ್ಯಾರ್ಥಿಗಳು ತೋಟಗಾರಿಕೆಯಲ್ಲಿ ಕಲಿತ ಜ್ಞಾನವನ್ನು ರೈತರ ಆದಾಯ ಹೆಚ್ಚಿಸಲು ಬಳಸಬೇಕು. ಹೊಸ ತಂತ್ರಜ್ಞಾನವನ್ನು ರೈತರ ಜಮೀನುಗಳಿಗೆ ತಲುಪಿಸುವಲ್ಲಿ ಶ್ರಮಿಸಬೇಕು. ಇಸ್ರೇಲ್ ಅತಿ ಸಣ್ಣ ಮತ್ತು ಕಡಿಮೆ ನೀರಾವರಿ ಹೊಂದಿದ್ದರೂ ಕೂಡಾ ಕೃಷಿಯಲ್ಲಿ ವಿಶೇಷ ಛಾಪು ಮೂಡಿಸಿದೆ. ನಮ್ಮಲ್ಲೂ ಕೂಡಾ ಆ ಮಾದರಿ ಕೃಷಿ ಆಗಬೇಕಿದೆ ಎಂದರು.

ಘಟಿಕೋತ್ಸವದಲ್ಲಿ ಇದೇ ಮೊದಲು ಬಾರಿಗೆ ಹಿರಿಯೂರಿನ ಹೆಚ್.ಏಕಾಂತಯ್ಯನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ನಂತರ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತೋ.ವಿ.ವಿಯಿಂದ 25 ಹಾಗೂ ದಾನಿಗಳು ಕೊಡಮಾಡುವ 52 ಪದಕಗಳು ಸೇರಿ ಒಟ್ಟು 77 ಚಿನ್ನದ ಪದಕಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ವಿವಿಯ ವ್ಯವಸ್ಥಾಪಕ ಮಂಡಳಿಯ ಸದಸ್ಯರು, ಕುಲಪತಿ ಡಾ.ಕೆ.ಎಂ.ಇಂದಿರೇಶ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹಾಗೂ ಬೋಧಕ, ಬೋಧಕೇತರ ಸಿಬ್ಭಂದಿ ಉಪಸ್ಥಿತರಿದ್ದರು.

ABOUT THE AUTHOR

...view details