ಕರ್ನಾಟಕ

karnataka

ಆಸ್ಟ್ರೇಲಿಯಾ​ ವಿರುದ್ಧದ ಅಂತಿಮ ಪಂದ್ಯದಲ್ಲಿ ಬದಲಾವಣೆ: ಅಕ್ಷರ್​, ಗಿಲ್​, ಶಾರ್ದೂಲ್​ಗೆ ರೆಸ್ಟ್‌; ಕೊಹ್ಲಿ, ರೋಹಿತ್​ ವಾಪಸ್​

By ETV Bharat Karnataka Team

Published : Sep 25, 2023, 12:43 PM IST

ಈಗಾಗಲೇ ಭಾರತ ಮೂರು ಏಕದಿನ ಪಂದ್ಯಗಳ ಸರಣಿ ಗೆದ್ದುಕೊಂಡಿದೆ. ಸೆ.27ರಂದು ಕೊನೆಯ ಪಂದ್ಯ ನಡೆಯಲಿದ್ದು, ತಂಡದಲ್ಲಿ ಮಹತ್ತರ ಬದಲಾವಣೆಯಾಗಿದೆ.

Shubman and Shardul rested  Axar Patel ruled out of Rajkot ODI  Australia tour of India 2023  Saurashtra Cricket Association Stadium Rajkot  India vs Australia 3rd ODI  ಆಸೀಸ್​ ವಿರುದ್ಧದ ಅಂತಿಮ ಪಂದ್ಯದಲ್ಲಿ ಮಹತ್ತರ ಬದಲಾವಣೆ  ಗಿಲ್​ ಶಾರ್ದೂಲ್​ಗೆ ವಿಶ್ರಾಂತಿ  ಕೊಹ್ಲಿ ರೋಹಿತ್​ ವಾಪಸ್​ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯ  ಮೂರು ಏಕದಿನ ಪಂದ್ಯದ ಸರಣಿಯನ್ನು ಗೆದ್ದುಕೊಂಡಿದೆ  ಸರಣಿಯ ಕೊನೆಯ ಪಂದ್ಯ  ಭಾರತ ತಂಡದಲ್ಲಿ ಮಹತ್ತರ ಬದಲಾವಣೆ  ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ  ಎಡ ಕ್ವಾಡ್ರೈಸ್ಪ್ಸ್ ಸ್ಟ್ರೈನ್  ರಾಜ್​ಕೋಟ್ ಏಕದಿನ ಪಂದ್ಯಕ್ಕೆ ಷರತ್ತುಬದ್ಧವಾಗಿ ಆಯ್ಕೆ
ಆಸೀಸ್​ ವಿರುದ್ಧದ ಅಂತಿಮ ಪಂದ್ಯದಲ್ಲಿ ಮಹತ್ತರ ಬದಲಾವಣೆ

ರಾಜ್​ಕೋಟ್​ (ಗುಜರಾತ್)​:ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ಅಕ್ಷರ್ ಪಟೇಲ್ ಹೊರಗುಳಿದಿದ್ದಾರೆ. ಎಡ ಕ್ವಾಡ್ರೈಸ್ಪ್ಸ್ ಸ್ಟ್ರೈನ್ ನೋವು ಎದುರಿಸುತ್ತಿರುವ ಮತ್ತು ರಾಜ್‌ಕೋಟ್ ಏಕದಿನ ಪಂದ್ಯಕ್ಕೆ ಷರತ್ತುಬದ್ಧವಾಗಿ ಆಯ್ಕೆಯಾಗಿರುವ ಆಲ್‌ರೌಂಡರ್ ಇನ್ನೂ ಫಿಟ್​ ಆಗಿಲ್ಲ. ಹೀಗಾಗಿ ಕೊನೆಯ ಪಂದ್ಯಕ್ಕೂ ಅಲಭ್ಯರಾಗಿದ್ದು, ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ತರಬೇತಿ ಪಡೆಯುತ್ತಿದ್ದಾರೆ.

ಇವರ ಬದಲಿಗೆ ರವಿಚಂದ್ರನ್ ಅಶ್ವಿನ್ ಮುಂಬರುವ ವಿಶ್ವಕಪ್‌ನಲ್ಲಿ ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ಮುನ್ನಡೆಸಬಹುದು ಎಂಬ ಭರವಸೆ ಮೂಡಿಸಿದೆ. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಅಶ್ವಿನ್ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿ ನಾಲ್ಕು ವಿಕೆಟ್‌ ಪಡೆದಿದ್ದಾರೆ. ವಿಶೇಷವಾಗಿ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಟ್ಟಿಹಾಕಿ ಉನ್ನತ ದರ್ಜೆಯ ಬೌಲಿಂಗ್ ಕೌಶಲ್ಯ ಪ್ರದರ್ಶಿಸಿದ್ದಾರೆ. ಇದು ವಿಶ್ವಕಪ್ ತಂಡದಲ್ಲಿ ಅಶ್ವಿನ್‌ರನ್ನು ಸೇರಿಸಿಕೊಳ್ಳುವುದಕ್ಕೆ ಪ್ರಮುಖ ಕಾರಣವಾಗುತ್ತಿದೆ. ಬಿಸಿಸಿಐ ಮೂಲಗಳು ಹೇಳುವಂತೆ, ಅಶ್ವಿನ್‌ಗಿಂತ ಮುಂಚಿತವಾಗಿ ಆಯ್ಕೆಯಾದ ಅಕ್ಸರ್, ವಿಶ್ವಕಪ್‌ ಸಮಯಕ್ಕೆ ತಂಡಕ್ಕೆ ಮರಳಲಿದ್ದಾರೆ.

ಅಕ್ಸರ್ ವಿಶ್ವಕಪ್ ಅಭ್ಯಾಸ ಪಂದ್ಯಗಳಿಗೆ ಸಿದ್ಧವಾಗಬಹುದೆಂಬ ಸೂಚನೆಗಳಿವೆ. ಇದು ಭಾರತ ತಂಡವನ್ನು ಗಂಭೀರ ಸಂದಿಗ್ಧತೆಗೆ ಸಿಲುಕಿಸಬಹುದು. ಈ ಹಂತದಲ್ಲಿ ಅಶ್ವಿನ್ ಅವರ ಪ್ರದರ್ಶನ ಆಶಾದಾಯಕವಾಗಿದೆ. ಅಷ್ಟೇ ಅಲ್ಲ, ಮುಂಬರುವ ವಿಶ್ವಕಪ್​ಗೆ ಅಕ್ಸರ್ ಅವರ ಬದಲಿ ಆಟಗಾರನನ್ನು ಆಯ್ಕೆಗಾರರು ಇನ್ನೂ ಘೋಷಿಸಿಲ್ಲ.

ಶುಭಮನ್, ಶಾರ್ದೂಲ್​ಗೆ ವಿಶ್ರಾಂತಿ: ಅಕ್ಸರ್ ಪಟೇಲ್ ಬಳಿಕ ಆಯ್ಕೆಗಾರರು ರಾಜ್‌ಕೋಟ್ ಆಟಕ್ಕೆ ಶುಭಮನ್ ಗಿಲ್ ಮತ್ತು ಶಾರ್ದೂಲ್ ಠಾಕೂರ್ ಅವರಿಗೆ ವಿಶ್ರಾಂತಿ ನೀಡಿದ್ದಾರೆ. ಪ್ರಸ್ತುತ ಮೂರು ಪಂದ್ಯಗಳ ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳುವಿಕೆಯಿಂದ ತಂಡ ಪ್ರಯೋಜನ ಪಡೆಯಲಿದೆ.

ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದ ನಂತರ ವಿಶ್ರಾಂತಿ ಪಡೆದಿರುವ ಜಸ್ಪ್ರೀತ್ ಬುಮ್ರಾ ಇಂದೋರ್‌ಗೆ ಪ್ರಯಾಣಿಸಲಿಲ್ಲ. ಆದ್ರೆ ರಾಜ್‌ಕೋಟ್‌ನಲ್ಲಿ ತಂಡವನ್ನು ಮತ್ತೆ ಸೇರಿಕೊಳ್ಳುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಸೆಪ್ಟೆಂಬರ್ 27ರಂದು ನಿಗದಿಯಾಗಿದೆ.

ಆಯ್ಕೆಗಾರರು ಸೆಪ್ಟೆಂಬರ್ 27ರೊಳಗೆ ಅಂತಿಮ 15 ಆಟಗಾರರ ವಿಶ್ವಕಪ್ ತಂಡವನ್ನು ಹೆಸರಿಸಬೇಕಿದೆ. ಭಾರತ- ಆಸ್ಟ್ರೇಲಿಯಾ ತಂಡಗಳು ಮಂಗಳವಾರ ಮಧ್ಯಾಹ್ನ ಇಂದೋರ್‌ನಿಂದ ರಾಜ್‌ಕೋಟ್‌ಗೆ ಪ್ರಯಾಣಿಸಲಿವೆ. ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯರು 2-0 ರಿಂದ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ:IND vs AUS: ಆಸಿಸ್​ ಮಣಿಸಿ ಸರಣಿ ಜಯಿಸಿದ ಭಾರತ.. ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾಕ್ಕೆ ಎರಡನೇ ಸರಣಿ ಸೋಲು

ABOUT THE AUTHOR

...view details