ಕರ್ನಾಟಕ

karnataka

ಪಂಜಾಬ್​ ಕಿಂಗ್ಸ್​ ಸೇರಿದ ಸಂಜಯ್​ ಬಂಗಾರ್

By ETV Bharat Karnataka Team

Published : Dec 8, 2023, 10:42 PM IST

ಪಂಜಾಬ್​ ಕಿಂಗ್ಸ್ ತಂಡ ಸಂಜಯ್​ ಬಂಗಾರ್​ ಅವರನ್ನು ತಮ್ಮ ತಂಡದ ಕ್ರಿಕೆಟ್ ಅಭಿವೃದ್ಧಿ ಮುಖ್ಯಸ್ಥರಾಗಿ ನೇಮಕ ಮಾಡಿಕೊಂಡಿದೆ.

Sanjay Bangar
Sanjay Bangar

ಹೈದರಾಬಾದ್​: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ ಕೆಲವೇ ದಿನಗಳು ಬಾಕಿ ಇರುವಾಗ ಪಂಜಾಬ್​ ಕಿಂಗ್ಸ್ (ಪಿಬಿಕೆಎಸ್) ತಂಡದಲ್ಲಿ ಹೊಸ ಹುದ್ದೆಯೊಂದನ್ನು ಸೃಷ್ಠಿಸಿ ಸಂಜಯ್​ ಬಂಗಾರ್​ ಅವರನ್ನು ನೇಮಿಸಿಕೊಂಡಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ ಕೋಚ್​ ಆಗಿದ್ದ ಬಂಗಾರ್​ ಅವರನ್ನು ಕಿಂಗ್ಸ್​ ಈಗ ತಮ್ಮ ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥರಾಗಿ ನೇಮಿಸಿದೆ.

ಪಿಬಿಕೆಎಸ್​ ಎಕ್ಸ್​ ಖಾತೆಯಲ್ಲಿ, "ಪಂಜಾಬ್ ಕಿಂಗ್ಸ್‌ನ ಕ್ರಿಕೆಟ್ ಅಭಿವೃದ್ಧಿಯ ಹೊಸ ಮುಖ್ಯಸ್ಥರಾಗಿ ಸಂಜಯ್ ಬಂಗಾರ್ ಅವರ ಮರಳುವಿಕೆಯನ್ನು ಘೋಷಿಸಲು ಸಂತೋಷಪಡುತ್ತೇವೆ. ಅವರು ನಮ್ಮ ಸಂಸ್ಥೆಗೆ ಅನುಭವ ಮತ್ತು ಪರಿಣತಿಯ ಸಂಪತ್ತನ್ನು ತರುತ್ತಾರೆ ಮತ್ತು ಅವರ ನಾಯಕತ್ವದಲ್ಲಿ ನಮ್ಮ ಕ್ರಿಕೆಟ್ ಅಭಿವೃದ್ಧಿ ಕಾರ್ಯಕ್ರಮಗಳು ಹೊಸ ಎತ್ತರ ತಲುಪುತ್ತವೆ ಎಂಬ ಭರವಸೆ ಇದೆ" ಎಂದು ಪೋಸ್ಟ್​ ಹಂಚಿಕೊಂಡಿದೆ.

ಸಂಜಯ್ ಬಂಗಾರ್ 2014ರಲ್ಲಿ ಸಹಾಯಕ ಕೋಚ್ ಮತ್ತು ಮುಖ್ಯ ಕೋಚ್ ಆಗಿ ಪಂಜಾಬ್​ ಕಿಂಗ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಅದೇ ವರ್ಷ ತಂಡ ಫೈನಲ್‌ಗೇರಿದ್ದು, ರನ್ನರ್​ ಅಪ್​ ಆಗಿತ್ತು.

ಈ ಕುರಿತು ಸಂಜಯ್ ಬಂಗಾರ್ ಪ್ರತ್ರಿಕಿಯಿಸಿದ್ದು, "ಮತ್ತೆ ಪಂಜಾಬ್ ಕಿಂಗ್ಸ್ ಜೊತೆಯಾಗಿರುವುದು ನನ್ನ ಸೌಭಾಗ್ಯ. ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ. ಈ ವರ್ಷ ನಾವು ಕಡಿಮೆ ಸಂಖ್ಯೆಯ ಆಟಗಾರರನ್ನು ಬಿಡುಗಡೆ ಮಾಡಿದ್ದೇವೆ. ತಂಡವನ್ನು ಬಲಪಡಿಸಲು ಮತ್ತು ಯಶಸ್ಸನ್ನು ತಲುಪಿಸಲು ಐಪಿಎಲ್​ ಸಮಯದಲ್ಲಿ ಮತ್ತು ನಂತರ ಸಾಧ್ಯವಾದಷ್ಟು ಕೆಲಸ ಮಾಡುತ್ತೇನೆ" ಎಂದಿದ್ದಾರೆ.

ಸಂಜಯ್‌ ಬಂಗಾರ್ ಐದು ವರ್ಷ ಭಾರತ ತಂಡದ ಬ್ಯಾಟಿಂಗ್ ತರಬೇತುದಾರರಾಗಿ ಕೊಡುಗೆ ನೀಡಿದ್ದಾರೆ. ಈ ಅವಧಿಯಲ್ಲಿ (2018-19) ಭಾರತ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿತ್ತು. ಬಂಗಾರ್ 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ತಲುಪಿದ ಭಾರತದ ತಂಡದ ಭಾಗವಾಗಿದ್ದರು. 2021ರಿಂದ 2023ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಬ್ಯಾಟಿಂಗ್ ಸಲಹೆಗಾರನ ಪಾತ್ರ ವಹಿಸಿಕೊಂಡರು. ಆರ್​ಸಿಬಿ ಈ ವರ್ಷ ಅವರೊಂದಿಗೆ ತಮ್ಮ ಒಪ್ಪಂದವನ್ನು ನವೀಕರಿಸಲಿಲ್ಲ. ಈ ಸ್ಥಾನಕ್ಕೆ ಆ್ಯಂಡಿ ಫ್ಲವರ್ ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿತು.

ಬಿಡುಗಡೆಯಾದ ಆಟಗಾರರು: ಶಾರುಖ್ ಖಾನ್, ರಾಜ್ ಬಾವಾ, ಬಲ್ತೇಜ್ ಧಂಡಾ, ಮೋಹಿತ್ ರಾಥೀ, ಭಾನುಕಾ ರಾಜಪಕ್ಸೆ.

ಉಳಿಸಿಕೊಂಡಿರುವ ಆಟಗಾರರು: ಶಿಖರ್ ಧವನ್, ಜಿತೇಶ್ ಶರ್ಮಾ, ಜಾನಿ ಬೈರ್‌ಸ್ಟೋವ್, ಪ್ರಭ್‌ಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಭಾಟಿಯಾ, ಅಥರ್ವ ಟೈಡೆ, ರಿಷಿ ಧವನ್, ಸ್ಯಾಮ್ ಕರನ್​, ಸಿಕಂದರ್ ರಜಾ, ಶಿವಂ ಸಿಂಗ್, ಹರ್‌ಪ್ರೀತ್ ಬ್ರಾರ್, ಅರ್ಶ್‌ದೀಪ್ ಸಿಂಗ್, ಕಗಿಸೋ ರಬಾಡ, ರಾಹುಲ್ ಚಹಾರ್, ಗುರ್ನೂರ್ ಬ್ರಾರ್, ವಿದ್ವತ್ ಕಾವೇರಪ್ಪ.

ಇದನ್ನೂ ಓದಿ:ಇಂಗ್ಲೆಂಡ್‌ ವಿರುದ್ಧ 2ನೇ ಟಿ20: ಸರಣಿ ಜೀವಂತ ಉಳಿಸಿಕೊಳ್ಳುವುದೇ ಹರ್ಮನ್​ಪ್ರೀತ್​ ಪಡೆ?

ABOUT THE AUTHOR

...view details