ಕರ್ನಾಟಕ

karnataka

ಬಾಡಿ ಬಿಲ್ಡಿಂಗ್ ಮಾಡಿ ಕ್ರೇಜ್ ಹುಟ್ಟಿಸಿದ ಬಿಚ್ಚುಗತ್ತಿ ಹೀರೋ ರಾಜವರ್ಧನ್

By ETV Bharat Karnataka Team

Published : Oct 9, 2023, 7:48 PM IST

ಬಿಚ್ಚುಗತ್ತಿ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್ ಸಿಕ್ಸ್​ ಪ್ಯಾಕ್​ ಮಾಡಿಕೊಂಡು ನ್ಯೂ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ​

Bichchugatti hero Rajavardhan New look
ರಾಜವರ್ಧನ್

ಸಿಕ್ಸ್​ ಪ್ಯಾಕ್​ ಮಾಡಿಕೊಂಡು ನ್ಯೂ ಲುಕ್​ನಲ್ಲಿ ಬಿಚ್ಚುಗತ್ತಿ ಹೀರೋ ರಾಜವರ್ಧನ್

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಅಭಿನಯದಿಂದ ಅಲ್ಲದೇ ತಮ್ಮ ಫಿಟ್ನೆಸ್ ಜೊತೆಗೆ ಸಿಕ್ಸ್ ಪ್ಯಾಕ್ ಹೀರೋಗಳಾಗಿ ಬೆಳ್ಳಿ ತೆರೆ ಮೇಲೆ ಮಿಂಚಿದ್ದಾರೆ. ಅದ್ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ಸುದೀಪ್, ದರ್ಶನ್, ದುನಿಯಾ ವಿಜಯ್, ವಿನೋದ್ ಪ್ರಭಾಕರ್, ಧ್ರುವ ಸರ್ಜಾ ಸೇರಿದಂತೆ ಸಾಕಷ್ಟು ನಟರು ಬಾಡಿ ಬಿಲ್ಡ್ ಮಾಡಿ ಸಿಲ್ವರ್ ಸ್ಕ್ರೀನ್ ಮೇಲೆ ವಿಜೃಂಭಿಸಿದ್ದಾರೆ. ಇವ್ರ ಸಾಲಿಗೆ ಬಿಚ್ಚುಗತ್ತಿ ಸಿನಿಮಾ ಖ್ಯಾತಿಯ ರಾಜವರ್ಧನ್ ಹೊಸ ಸೇರ್ಪಡೆ ಆಗುತ್ತಿದ್ದಾರೆ.

ಹೌದು, ಹಿರಿಯ ನಟ ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್ ಬಿಚ್ಚುಗತ್ತಿ ಚಿತ್ರದ ಮೂಲಕ ತನ್ನದೇ ಬೇಡಿಕೆಯನ್ನು ಹೊಂದಿರುವ ನಟ. ಆರಡಿ ಉದ್ದ, ಕಟ್ಟುಮಸ್ತಾದ ದೇಹ, ನೋಡೋಕೆ ಚಾಕಲೇಟ್ ಬಾಯ್ ತರ ಇರುವ ರಾಜವರ್ಧನ್ ಗಜರಾಮ ಅಂತಾ ಸಿನಿಮಾ ಮಾಡ್ತಾ ಇರೋದು ಗೊತ್ತಿರುವ ವಿಚಾರ. ಈ ಮಧ್ಯೆ ರಾಜವರ್ಧನ್ ಫಿಟ್ನೆಸ್​​ಗೆ ಹೆಚ್ಚು ಒತ್ತು ಕೊಟ್ಟು ಜಿಮ್​ನಲ್ಲಿ ಬೆವರು ಸುರಿಸಿ ಸಿಕ್ಸ್ ಪ್ಯಾಕ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಚಿತ್ರಕಲಾ ಪರಿಷತ್​ನಲ್ಲಿ ಡಬಲ್ ಡಿಗ್ರಿ ಮಾಡಿರುವ ರಾಜರ್ಧನ್ ವಿಷುವಲ್ ಆರ್ಟ್ಸ್​ನಲ್ಲಿ ಪದವಿ ಪಡೆದಿದ್ದಾರೆ. ಕಲೆ ಬಗ್ಗೆ ಹೆಚ್ಚು ಒಲವು ಹೊಂದಿರುವ ಇವರು ಬ್ಯುಸಿನೆಸ್ ಮಾಡ್ಬೇಕು ಅಂದುಕೊಂಡಿದ್ದರು. ಆದರೆ ತಂದೆಯ ರಕ್ತದಲ್ಲಿ ಕಲೆ ಅನ್ನೋದು ಬಂದಿರುವುದರಿಂದ ಈ ಸಿನಿಮಾ ಇಂಡಸ್ಟ್ರಿಗೆ ಬರುವಂತೆ ಮಾಡಿದೆ.

ಈ ಬಗ್ಗೆ ಮಾತನಾಡಿರೋ ರಾಜವರ್ಧನ್ ಇವರ ಮೂಲ ಹೆಸರು ರಾಜೇಂದ್ರ ಅಂತೆ. ಆದರೆ ಸಿನಿಮಾಗೆ ಬರುವಾಗ ಹೆಸರು ಚೇಂಜ್ ಮಾಡ್ಬೇಕಾಯ್ತು. ಅದಕ್ಕೆ ನನ್ನ ಹೆಸರಲ್ಲಿ ರಾಜ್ ಜೊತೆಗೆ ವರ್ಧನ್​ ಸೇರಿಸಿದ್ವಿ. ಯಾಕಂದ್ರೆ ಇಬ್ಬರು ದಿಗ್ಗಜ ನಟರಾದ ಡಾ ರಾಜ್​ಕುಮಾರ್ ಹಾಗು ಡಾ ವಿಷ್ಣುವರ್ಧನ್ ಹೆಸರು ಕೇಳಿದಂತೆ ಆಗುತ್ತದೆ ಎಂದಿದ್ದಾರೆ.

ಪ್ರತಿದಿನ ಜಿಮ್​ನಲ್ಲಿ ಎರಡು ಗಂಟೆಗಳ ವರ್ಕ್ ಔಟ್ ಮಾಡಿ ಬಾಡಿ ಬಿಲ್ಡ್ ಮಾಡಿದ್ದಾರೆ. ಆರಡಿ ಹೈಟ್ ಇರುವ ರಾಜವರ್ಧನ್ ನಾಲ್ಕೈದು ಕಾಸ್ಟೂಮ್​ನಲ್ಲಿ ಕಲರ್ ಫುಲ್ ಫೋಟೋಶೂಟ್ ಮಾಡಿಸಿದ್ದಾರೆ. ಕಟ್ಟುಮಸ್ತಾಗಿ ದೇಹವನ್ನು ಹುರಿಗೊಳಿಸಿರುವ ರಾಜವರ್ಧನ್ ಸಿನಿಮಾ ಹೇಗೆ ಇರಬೇಕೊ ಹಾಗೇ ರಾಜವರ್ಧನ್ ಮೇಕ್ ಓವರ್ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ ಗಜರಾಮ ಸಿನಿಮಾದಲ್ಲಿ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ರಾಜವರ್ಧನ್ ಬಾಡಿ ಬಿಲ್ಡ್ ಮಾಡಿ ಬೊಂಬಾಟ್ ಫೋಟೋಶೂಟ್ ಮಾಡಿಸಿದ್ದಾರೆ. ರಾಜವರ್ಧನ್ ಜಿಮ್ ಬಾಡಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಕಳೆದ ಆರು ತಿಂಗಳಿಂದ ಎಫರ್ಟ್ ಹಾಕಿ ರಾಜವರ್ಧನ್ ಈ ಬಾಡಿಯನ್ನ ಬಿಲ್ಡ್ ಮಾಡಿ ಗಮನ ಸೆಳೆದಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಗಜರಾಮ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಈ ಮಧ್ಯೆ ರಾಜವರ್ಧನ್ ಶರ್ಟ್ ಲೆಸ್ ಫೋಟೋಶೂಟ್ ನಲ್ಲಿ ಸಖತ್ತಾಗೆ ಮಿಂಚಿದ್ದಾರೆ.

ಇದನ್ನೂ ಓದಿ:ನನ್ನ ತಂದೆಯನ್ನು ಅಪಘಾತದಲ್ಲಿ ಕಳೆದುಕೊಂಡ ನನಗೆ ಆ ನೋವಿನ ಅರಿವಿದೆ: ಕಾರು ಅಪಘಾತದ ಬಗ್ಗೆ ನಟ ನಾಗಭೂಷಣ ಮೊದಲ ಪ್ರತಿಕ್ರಿಯೆ

ABOUT THE AUTHOR

...view details