ಕರ್ನಾಟಕ

karnataka

ಬೆಳ್ಳಿತೆರೆಯಿಂದ ಸ್ಮಾಲ್‌ ಸ್ಕ್ರೀನ್​ನತ್ತ: OTTಯಲ್ಲಿ '777 ಚಾರ್ಲಿ'

By

Published : Jul 29, 2022, 1:43 PM IST

Updated : Jul 29, 2022, 4:09 PM IST

ಒಬ್ಬ ಮನುಷ್ಯ ಹಾಗು ಶ್ವಾನದ ನಡುವಿನ ಬಾಂಧವ್ಯ ಕಥೆ ಆಧರಿಸಿ ಬಂದ‌ 777 ಚಾರ್ಲಿ ಸಿನೆಮಾ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 150 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೀಗ ಚಿತ್ರವನ್ನು ಮನೆಯಲ್ಲೇ ಕುಳಿತು ವೀಕ್ಷಿಸುವ ಅವಕಾಶ ಒದಗಿ ಬಂದಿದೆ.

777-charlie-cinema-release-in-voot-select-from-july-29
ಬೆಳ್ಳಿತೆರೆಯಿಂದ ಸ್ಮಾಲ್‌ ಸ್ಕ್ರೀನ್​ನತ್ತ.. Voot selectನಲ್ಲಿ ಬರಲಿದೆ '777 ಚಾರ್ಲಿ'

ಸ್ಯಾಂಡಲ್​ವುಡ್​ನಲ್ಲಿ ಈ ವರ್ಷ ಸೂಪರ್ ಹಿಟ್ ಆದ ಸಿನೆಮಾಗಳಲ್ಲಿ '777 ಚಾರ್ಲಿ' ಕೂಡ ಒಂದು. ಸಿಂಪಲ್​ ಸ್ಟಾರ್​​ ರಕ್ಷಿತ್ ಶೆಟ್ಟಿ ಅಭಿನಯ, ಕಿರಣ್‌ರಾಜ್‌ ನಿರ್ದೇಶನದಲ್ಲಿ ಮೂಡಿಬಂದ ಈ ಪ್ಯಾನ್‌ ಇಂಡಿಯಾ ಸಿನೆಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಸದ್ಯ ಚಿತ್ರವನ್ನು ಈಗ ನಿಮ್ಮ ಮನೆಯಲ್ಲೇ ಕುಟುಂಬದ ಜೊತೆ ಕುಳಿತು ನೋಡುವ ಅವಕಾಶ ಬಂದಿದೆ.

ಬಾಕ್ಸ್ ಆಫೀಸ್‌ನಲ್ಲಿ ಸುಮಾರು 150 ಕೋಟಿ ರೂ. ಕಲೆಕ್ಷನ್ ಮಾಡಿದ '777 ಚಾರ್ಲಿ' ಸಿನೆಮಾ ಸದ್ಯ 50ನೇ ದಿನದತ್ತ ಮುನ್ನುಗ್ಗುತ್ತಿದೆ. ರಾಜ್ಯ ಹಾಗೂ ದೇಶ-ವಿದೇಶಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ ಚಿತ್ರವು ಇದೀಗ Voot selectನಲ್ಲಿ ಬರಲಿದೆ. ಈ ಬಗ್ಗೆ ನಟ‌ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ಕೆಲ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

'777 ಚಾರ್ಲಿ'

ಪರಮ್ ವಾ ಸ್ಟುಡಿಯೋಸ್ ನಿರ್ಮಾಣದ ಚಿತ್ರವು Voot selectನಲ್ಲಿ ಇಂದಿನಿಂದ (ಜುಲೈ 29) ಲಭ್ಯವಿದೆ. ನಮ್ಮ 'ಕಿರಿಕ್ ಪಾರ್ಟಿ' ಚಿತ್ರ ಸಹ vootನಲ್ಲಿದೆ. ಭಾರತವಷ್ಟೇ ಅಲ್ಲದೇ, ವಿದೇಶಗಳಲ್ಲೂ "ಚಾರ್ಲಿ" ಚಿತ್ರವನ್ನು ಮೆಚ್ಚಿಕೊಂಡವರು ಅಪಾರ. ಅದರಲ್ಲೂ ಕರ್ನಾಟಕದಲ್ಲಿ ನಮ್ಮ ಚಿತ್ರಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಈ ಗೆಲುವಿಗೆ ಕಾರಣರಾದ ಸಮಸ್ತರಿಗೂ ನನ್ನ ಧನ್ಯವಾದ. ಚಿತ್ರ ಬಿಡುಗಡೆಯಾಗಿ 47 ದಿನಗಳು ಕಳೆದಿದೆ. 49ನೇ ದಿನದಿಂದ ನಮ್ಮ ಚಿತ್ರವನ್ನು Vootನಲ್ಲಿ ನೋಡಬಹುದು‌ ಎಂದಿದ್ದಾರೆ ಸಿಂಪಲ್​ ಸ್ಟಾರ್​.

ಚಿತ್ರವು ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆದರೆ ಈಗ Voot selectನಲ್ಲಿ ಕನ್ನಡದ ಚಾರ್ಲಿಯನ್ನು ಮಾತ್ರ ವೀಕ್ಷಿಸಬಹುದು. ಸಿನೆಮಾ 50 ದಿನ ಪೂರೈಸುತ್ತಿದೆ. ಈ ಖುಷಿ ಸಂಭ್ರಮಿಸಲು ನಮ್ಮ 40 ಜನರ ತಂಡ ಥೈಲ್ಯಾಂಡ್​ಗೆ ಹೋಗುತ್ತಿದೆ ಎಂದು ರಕ್ಷಿತ್ ಹೇಳಿದ್ದಾರೆ.

ಇದನ್ನೂ ಓದಿ:ಕಿಚ್ಚನ 'ವಿಕ್ರಾಂತ್ ರೋಣ' ವಿಶ್ವಾದ್ಯಂತ ರಿಲೀಸ್: ಮೊದಲ ದಿನ ಕಲೆಕ್ಷನ್ ಎಷ್ಟು?

Last Updated :Jul 29, 2022, 4:09 PM IST

ABOUT THE AUTHOR

...view details