ಕರ್ನಾಟಕ

karnataka

ಇಂದಿರಾ ಗಾಂಧಿ 105ನೇ ಜನ್ಮ ದಿನ: ಗೌರವ ಸಲ್ಲಿಸಿದ ಸೋನಿಯಾ, ಖರ್ಗೆ.. ಅಜ್ಜಿ ಸ್ಮರಿಸಿದ ರಾಹುಲ್​, ವರುಣ್

By

Published : Nov 19, 2022, 4:36 PM IST

ಇಂದಿರಾ ಗಾಂಧಿ ಸ್ಮಾರಕವಾದ ಶಕ್ತಿ ಸ್ಥಳಕ್ಕೆ ಕಾಂಗ್ರೆಸ್​​ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ತೆರಳಿ ಪುಷ್ಪ ನಮನ ಸಲ್ಲಿಸಿದರು.

rahul-gandhi-today-paid-tribute-to-indira-gandhi-on-her-birth-anniversary
ಇಂದಿರಾ ಗಾಂಧಿ 105ನೇ ಜನ್ಮ ದಿನ: ಗೌರವ ಸಲ್ಲಿಸಿದ ಸೋನಿಯಾ, ಖರ್ಗೆ.. ಅಜ್ಜಿಯ ಸ್ಮರಿಸಿದ ರಾಹುಲ್​, ವರುಣ್

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 105ನೇ ಜನ್ಮದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದರಾದ ರಾಹುಲ್​ ಗಾಂಧಿ, ವರುಣ್ ಗಾಂಧಿ ಗೌರವ ಸಲ್ಲಿಸಿದ್ದಾರೆ.

ದಿ. ಇಂದಿರಾ ಗಾಂಧಿ ಸ್ಮಾರಕವಾದ ಶಕ್ತಿ ಸ್ಥಳಕ್ಕೆ ಕಾಂಗ್ರೆಸ್​​ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಭೂಪಿಂದರ್ ಹೂಡಾ ಸೇರಿದಂತೆ ಇತರ ನಾಯಕರು ತೆರಳಿ ಪುಷ್ಪ ನಮನ ಸಲ್ಲಿಸಿದರು.

ಪ್ರಧಾನಿ ಮೋದಿ ಸಹ ಇಂದಿರಾ ಗಾಂಧಿ ಜನ್ಮದಿನ ನಿಮಿತ್ತ ಗೌರವ ಸೂಚಿಸಿದ್ದು, ನಮ್ಮ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅವರ ಜನ್ಮ ದಿನದಂದು ನಮನಗಳು ಎಂದು ಟ್ವೀಟ್‌ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಜ್ಜಿ ಇಂದಿರಾ ಗಾಂಧಿ ಅವರನ್ನು ದೇಶಕ್ಕೆ 'ದುರ್ಗೆ' ಮತ್ತು ಶತ್ರುಗಳಿಗೆ 'ಕಾಳಿ' ಎಂದು ವರ್ಣಿಸಿದ್ದಾರೆ.

ಇಂದಿರಾ ಗಾಂಧಿ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳೆದರು, ಭಾರತದ ಮಹಾನ್ ನಾಯಕರಿಂದ ಕಲಿತರು, ತನ್ನ ತಂದೆಯ ಪ್ರೀತಿಯ ಅಮ್ಮ, ದೇಶಕ್ಕೆ ದುರ್ಗೆ, ಶತ್ರುಗಳಿಗೆ ಕಾಳಿ, ತೇಜಸ್ವಿನಿ, ಪ್ರಿಯದರ್ಶಿನಿ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೇ, ಭಾರತ್ ಜೋಡೋ ಯಾತ್ರೆಯಲ್ಲಿ ತೊಡಿರುವ ರಾಹುಲ್​ ಗಾಂಧಿ ಮಹಾರಾಷ್ಟ್ರದ ಶೇಗಾಂವ್​ನಲ್ಲಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಬಿಜೆಪಿ ಸಂಸದರಾದ ವರುಣ್ ಗಾಂಧಿ ಕೂಡ ತಮ್ಮ ಅಜ್ಜಿಗೆ ನಮನ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ ನಾಯಕತ್ವ ಮಾತ್ರವಲ್ಲ ಔದಾರ್ಯವೂ ಹೌದು, ಶಕ್ತಿ ಮಾತ್ರವಲ್ಲದೇ ಮಾತೃತ್ವ ಕೂಡ ಹೌದು, ನಾನು ದೇಶ ಮಾತೆಗೆ ತಲೆಬಾಗುತ್ತೇನೆ ಮತ್ತು ನನ್ನ ಪ್ರೀತಿಯ ಅಜ್ಜಿ ತನ್ನ ಜನ್ಮದ ಗೌರವಗಳು ಎಂದು ವರುಣ್ ಗಾಂಧಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:'ಇದು ಯದ್ಧದ ಯುಗವಲ್ಲ' ಮೋದಿ G20 ಜಂಟಿ ಘೋಷಣೆಗೆ ಜೋ ಬೈಡನ್​ ಶ್ಲಾಘನೆ

ABOUT THE AUTHOR

...view details