ETV Bharat / bharat

ಏನಿದು ಕಾಮನ್​​ವೆಲ್ತ್​ ದಿನ: ಏತಕ್ಕಾಗಿ ಈ ದಿನವನ್ನು ಭಾರತದಲ್ಲಿ ಆಚರಿಸಲಾಗುತ್ತೆ? - Honouring Queen Victoria

author img

By ETV Bharat Karnataka Team

Published : May 24, 2024, 5:01 AM IST

ಕಾಮನ್​ವೆಲ್ತ್​ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಮೇ 24 ರಂದು ಆಚರಿಸಲಾಗುತ್ತದೆ. ಕಾಮನ್‌ವೆಲ್ತ್‌ನ ಸದಸ್ಯ ರಾಷ್ಟ್ರಗಳ ನಡುವೆ ಇರುವ ಇತಿಹಾಸ, ವೈವಿಧ್ಯತೆ ಹಾಗೂ ಇತರ ಮೌಲ್ಯಗಳನ್ನು ಸ್ಮರಿಸುವುದು ಈ ದಿನದ ಉದ್ದೇಶವಾಗಿದೆ.

what is the  commonwealth-day, why celebrate this day
ಕಾಮನ್​​ವೆಲ್ತ್​ ದಿನ: ವಿಕ್ಟೋರಿಯಾ ರಾಣಿ ಗೌರವಿಸುವ ದಿನವಿದು! (ETV Bharat)

ಹೈದರಾಬಾದ್: ಭಾರತದಲ್ಲಿ ಪ್ರತಿ ವರ್ಷ ಮೇ 24 ರಂದು ಕಾಮನ್‌ವೆಲ್ತ್ ದಿನವನ್ನು ಆಚರಿಸಲಾಗುತ್ತದೆ. ಒಂದು ಕಾಲದಲ್ಲಿ ಬ್ರಿಟಿಷ್ ವಸಾಹತುಗಳಾಗಿದ್ದ ಎಲ್ಲ ದೇಶಗಳು ಈ ದಿನವನ್ನು ಇವತ್ತು ಆಚರಿಸುತ್ತವೆ. ಕಾಮನ್‌ವೆಲ್ತ್ ದಿನವನ್ನು ಪ್ರಪಂಚದಾದ್ಯಂತ ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಸುಮಾರು 56 ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತವೆ.

ಕಾಮನ್‌ವೆಲ್ತ್ ದಿನದ ಇತಿಹಾಸವೇನು?: ಎಂಪೈರ್ ಡೇ ಅನ್ನು ಮೊದಲು 19 ನೇ ಶತಮಾನದ ಕೊನೆಯಲ್ಲಿ ಮತ್ತು 20 ನೇ ಶತಮಾನದ ಆರಂಭದಲ್ಲಿ ರಾಣಿ ವಿಕ್ಟೋರಿಯಾ ಅವರ ಜನ್ಮದಿನವನ್ನು ಗೌರವಿಸುವ ಉದ್ದೇಶದಿಂದ ಆಚರಿಸಿಕೊಂಡು ಬರಲಾಗುತ್ತಿತ್ತು. 1901 ರಲ್ಲಿ ರಾಣಿ ವಿಕ್ಟೋರಿಯಾ ಅವರ ಮರಣದ ನಂತರ ಎಂಪೈರ್ ಡೇ ಅರ್ಥವು ಬದಲಾಗುತ್ತಾ ಹೋಯಿತು.

ಕಾಮನ್‌ವೆಲ್ತ್‌ನ ವಿಕಸನ ಹಾಗೂ ಅದರ ಪಾತ್ರದ ಆಧಾರದ ಮೇಲೆ ಅದರ ಸದಸ್ಯ ರಾಷ್ಟ್ರಗಳ ನಡುವಿನ ಸಹಯೋಗ ಮತ್ತು ಗೌರವದ ಮೇಲೆ ಆಧಾರದ ಮೇಲೆ ಎಂಪೈರ್​​​ ಡೇ ಎಂಬ ಹೆಸರನ್ನು 1958 ರಲ್ಲಿ ಕಾಮನ್‌ವೆಲ್ತ್ ದಿನ ಎಂಬುದಾಗಿ ಬದಲಾಯಿಸಲಾಯಿತು. ಕಾಮನ್​ವೆಲ್ತ್​ ದಿನವು ಇಂಗ್ಲೆಂಡ್​​​ನ ರಾಣಿ ವಿಕ್ಟೋರಿಯಾ ಅವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ವಿಕ್ಟೋರಿಯಾ ಅವರು ಮೇ 24, 1819 ರಂದು ಜನಿಸಿದ್ದರು. ಅವರ ಈ ಹುಟ್ಟಿದ ದಿನವನ್ನು, ಬ್ರಿಟನ್​ ಆಳ್ವಿಕೆ ಮಾಡಿದ ಈಗ ಸ್ವತಂತ್ರಗೊಂಡಿರುವ ರಾಷ್ಟ್ರಗಳು ರಾಣಿಯ ಹೆಸರಲ್ಲಿ ಆಚರಣೆ ಮಾಡಿಕೊಂಡು ಬರುತ್ತಿವೆ.

ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ಕೆನಡಾ ರಾಷ್ಟ್ರಗಳು ಇದನ್ನು ಮಾರ್ಚ್‌ನಲ್ಲಿ 2 ನೇ ಸೋಮವಾರದಂದು ಈ ದಿನವನ್ನು ಆಚರಿಸುತ್ತವೆ. ಮೇ 24 ರಂದು ಭಾರತ ಇನ್ನಿತರ ದೇಶಗಳೊಂದಿಗೆ ಸೇರಿ ಆಚರಿಸುತ್ತದೆ.

ಈ ದಿನದ ಮಹತ್ವ ಏನು?: ಕಾಮನ್‌ವೆಲ್ತ್‌ನ ಸದಸ್ಯ ರಾಷ್ಟ್ರಗಳ ನಡುವಣ ಸಾಮಾನ್ಯ ಇತಿಹಾಸ, ವೈವಿಧ್ಯತೆ ಮತ್ತು ಮೌಲ್ಯಗಳನ್ನು ಸ್ಮರಿಸುವುದು ಕಾಮನ್‌ವೆಲ್ತ್ ದಿನದ ಉದ್ದೇಶವಾಗಿದೆ. ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಆಯಾ ರಾಷ್ಟ್ರಗಳ ಸಮೃದ್ಧಿ ಮತ್ತು ಭದ್ರತೆಯನ್ನು ಮುನ್ನಡೆಸುವಲ್ಲಿ ಸಹಕಾರ ಮತ್ತು ಒಟ್ಟಾಗಿ ಹೋಗುವ ಗುರಿ ಇಟ್ಟುಕೊಂಡು ಸಾಗುವ ಗುರಿಗಳು ಈ ದಿನ ಉದ್ದೇಶವಾಗಿದೆ.

ಕಾಮನ್‌ವೆಲ್ತ್ ದಿನದ ಬಗೆಗಿನ ಕೆಲ ಸಂಗತಿಗಳು:

  • ವಿಶ್ವದ ಬಹುತೇಕ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತವೆ
  • ಇದು ಪ್ರತಿ ದೇಶದಲ್ಲಿ ಫೆಡರಲ್ ರಜಾ ದಿನವಲ್ಲ
  • ಕಾಮನ್‌ವೆಲ್ತ್‌ ರಾಷ್ಟ್ರಗಳ ಜಿಡಿಪಿ ದೊಡ್ಡ ಪ್ರಮಾಣದಲ್ಲಿದೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.