ETV Bharat / state

ಬಿಜೆಪಿ ಮುಖವಾಡ ಕಳಚಿ ಬಿದ್ದಿದೆ: ಕೆಪಿಸಿಸಿ ವಕ್ತಾರೆ ತೇಜಸ್ವಿನಿ ಗೌಡ ವಾಗ್ದಾಳಿ - Tejaswini Gowda

author img

By ETV Bharat Karnataka Team

Published : Apr 29, 2024, 10:21 PM IST

Updated : Apr 29, 2024, 10:58 PM IST

KPCC spokesperson Tejaswini Gowda spoke.
ಕೆಪಿಸಿಸಿ ವಕ್ತಾರೆ ತೇಜಸ್ವಿನಿಗೌಡ ಮಾತನಾಡಿದರು.

ರಾಜ್ಯದಲ್ಲಿ 136 ಶಾಸಕರ ದೊಡ್ದ ಸರ್ಕಾರವಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಆತ್ಮವಿಶ್ವಾಸವಿದೆ. ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲಲು ಶ್ರಮ ಹಾಕಿದ್ದೇವೆ ಎಂದು ಕೆಪಿಸಿಸಿ ವಕ್ತಾರೆ ತೇಜಸ್ವಿನಿ ಗೌಡ ತಿಳಿಸಿದರು.

ಕೆಪಿಸಿಸಿ ವಕ್ತಾರೆ ತೇಜಸ್ವಿನಿ ಗೌಡ

ಬೆಳಗಾವಿ: ಇಲ್ಲಿಯವರೆಗೂ ಮೋದಿ ಮಾಡೆಲ್, ಮೋದಿ ಗ್ಯಾರಂಟಿ ಎನ್ನುತ್ತಿದ್ದ ಬಿಜೆಪಿ ನಾಯಕರು ಇಂದು ಭಾವನಾತ್ಮಕ ವಿಷಯ, ದೇಶ ವಿಭಜನೆ, ಕೋಮುವಾದ, ಹಿಂದೂ ಮುಸ್ಲಿಂ ವಿಭಜನೆ ವಿಚಾರಗಳ ಮೂಲಕ ಮಾತ್ರ ಮತ ಪಡೆಯಲು ಸಾಧ್ಯ ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಅವರ ಹಳೆಯ, ನಿಜವಾದ ಹಿಡನ್ ಅಜೆಂಡಾಗೆ ಜೋತು ಬಿದ್ದಿದ್ದರಿಂದ ಅವರ ಮುಖವಾಡ ಈಗ ಕಳಚಿ ಬಿದ್ದಿದೆ ಎಂದು ಕೆಪಿಸಿಸಿ ವಕ್ತಾರೆ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದರು‌.

ಬೆಳಗಾವಿ ಕಾಂಗ್ರೆಸ್ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಮಹಿಳೆಯರಿಗೆ ಅವಕಾಶ ಕೊಡಬೇಕು. ನಾರಿ ಶಕ್ತಿ ಮಾಡಲ್, ಹಾಸನದ ಸೆಕ್ಸ್ ಕ್ಯಾಂಡಲ್​​ಗೆ ನಿಮ್ಮ ತ್ವರಿತವಾದ ಪ್ರತಿಕ್ರಿಯೆ ಏನು? ನಿಮ್ಮ ಸರ್ಕಾರದಲ್ಲಿ ಬಾಯಿ ಮುಚ್ಚಿಕೊಂಡು ಇರುವ ಮಹಿಳೆಯರ ಬದಲು ಸಮರ್ಥ ಮಹಿಳೆಯರಿಗೆ ಅವಕಾಶ ಸಿಗಲ್ಲ. ಮಾತನಾಡುವ, ಪ್ರಶ್ನಿಸುವ ಮಹಿಳೆಯರಿಗೆ ಬಿಜೆಪಿಯಲ್ಲಿ ಅವಕಾಶ ಇಲ್ಲ ಎಂದು ಕಿಡಿಕಾರಿದರು.

ಮಹಿಳೆಯರ ಜತೆ ಅಶ್ಲೀಲವಾಗಿ ನಡೆದುಕೊಂಡಿರುವ ಜೆಡಿಎಸ್ ಪಕ್ಷದ ಜತೆ ಬಿಜೆಪಿಗರು ಹೇಗಿರುತ್ತಾರೆ?. ಹೊಳೆನರಸೀಪುರ, ರಾಜ್ಯದ ಮಾನ ಮರ್ಯಾದೆ ಹಾಳಾಗಿದೆ. ಹೆಣ್ಣು ಮಕ್ಕಳಿಗೆ ಯಾವ‌ ರೀತಿ ಗೌರವ ನೀಡಬೇಕು ಎಂಬ ಪರಿಜ್ಞಾನ ಇಲ್ಲವೇ ನಿಮಗೆ..? ನಿಮ್ಮ ತಂದೆಯವರು ಇದನ್ನೇ ಕಲಿಸಿಕೊಟ್ಟಿದ್ದಾರಾ..? ಇಡೀ ಕರ್ನಾಟಕ, ಹಳೆ ಮೈಸೂರಿನ ಮಾನ ಮರ್ಯಾದೆ ಹರಾಜಾಗಿದೆ. ಮಹಿಳೆಯರ ಘನತೆ ಬಗ್ಗೆ ಮಾತನಾಡುವ ನೀವು ಇಂಥ ಜೆಡಿಎಸ್ ಪಕ್ಷದ ಜೊತೆಗೆ ರಾಜಕೀಯ ಹೊಂದಾಣಿಕೆ ಮುಂದುವರಿಸುತ್ತೀರಾ..? ಎಂದು ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಪ್ರಧಾನಿ ಮೋದಿ, ಜೋಶಿ ಅವರನ್ನು ಪ್ರಶ್ನಿಸಿದರು‌.

ಮೃಣಾಲ್ ಸಮರ್ಥ ಅಭ್ಯರ್ಥಿ ಆಗಿದ್ದಾರೆ. ಬರುವ 30 ವರ್ಷ ರಾಜಕಾರಣ ಮಾಡಬೇಕು. ಬಡವರ ಪರ ಹೋರಾಟ ಮಾಡಬೇಕು. ಕಾನೂನಿನ ಬಗ್ಗೆ ಮಾತಾಡವರು ಬೇಕು. ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸಿದ್ದಾರೆ. ಮಕ್ಕಳನ್ನು ಬೆಳೆಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೋದಿ ಮುಂದೆ ಎಲ್ಲರೂ ಬಾಯಿ ಮುಚ್ಚಿಕೊಂಡು ಕುಳಿತರೆ ಕರ್ನಾಟಕದ ಪರವಾಗಿ ಮಾತನಾಡುವವರು ಯಾರು ಎಂದು ತೇಜಸ್ವಿನಿ ಗೌಡ ಪ್ರಶ್ನಿಸಿದರು.

ಜಗದೀಶ ಶೆಟ್ಟರ್ ಹಿರಿತನದಿಂದ ದಣಿದಿದ್ದೀರಿ, ನಿಮಗೆ ವಿಶ್ರಾಂತಿ ಅವಶ್ಯಕತೆಯಿದೆ. ಬೆಳಗಾವಿಗೆ ನಿಮ್ಮ ಅನಿವಾರ್ಯತೆ ಇಲ್ಲ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯುವಕರಿದ್ದಾರೆ, ರಾಜಕೀಯ ಗೊತ್ತಿದೆ. ಸರ್ಕಾರ ನಮ್ಮದಿರೋದರಿಂದ ಸ್ವಾಭಿಮಾನಿ ಬೆಳಗಾವಿ ಜನತೆ ನಮ್ಮ ಅಭ್ಯರ್ಥಿ ಗೆಲ್ಲಿಸಲಿದ್ದಾರೆ ಎಂದು ತೇಜಸ್ವಿನಿಗೌಡ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 136 ಶಾಸಕರ ದೊಡ್ದ ಸರ್ಕಾರವಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಆತ್ಮವಿಶ್ವಾಸ ಇದ್ದರೂ ಕೂಡ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲಲು ಶ್ರಮ ಹಾಕಿದ್ದೇವೆ. ಅದರಲ್ಲಿ ನಮಗೆ ನಂಬಿಕೆ ಇದೆ. ನಮ್ಮ ಮೇಲೆ ಮೋದಿ ಇನ್ನಷ್ಟು ದಬ್ಬಾಳಿಕೆ ಮಾಡಲಿ, 66 ಸೀಟ್ ಗೆದ್ದವರು 28 ಸೀಟ್ ಗೆದ್ದರೆ ಚುನಾವಣೆ ಯಾಕೆ ಮಾಡಬೇಕು? 400 ಸೀಟ್ ಬಂದು ಬಿಟ್ಟರೆ ಚುನಾವಣೆ ಯಾಕೆ ಮಾಡುತ್ತಿದ್ದೀರಿ ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು.

ಇದನ್ನೂಓದಿ: ಗ್ಯಾರಂಟಿ ಪದಕ್ಕೆ ಅಪ್ಪ-ಅಮ್ಮ ನಾವೇ ಎಂಬಂತೆ ಕಾಂಗ್ರೆಸ್​​ನವರ ವರ್ತನೆ: ಸಿ.ಟಿ.ರವಿ - C T Ravi

Last Updated :Apr 29, 2024, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.