ETV Bharat / state

ಚಿಕ್ಕಬಳ್ಳಾಪುರ: ನಾಮಫಲಕ ವಿಚಾರ - ಎರಡು ಗುಂಪುಗಳ ನಡುವೆ ಮಾರಾಮಾರಿ

author img

By ETV Bharat Karnataka Team

Published : Mar 18, 2024, 8:41 PM IST

Updated : Mar 18, 2024, 10:57 PM IST

ನಾಮಫಲಕ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

ambedkar-name-plate-issue-clash-between-2-communities-in-chikkaballapur
ಚಿಕ್ಕಬಳ್ಳಾಪುರ: ಅಂಬೇಡ್ಕರ್ ನಾಮಫಲಕ ವಿಚಾರ - ಎರಡು ಗುಂಪುಗಳ ನಡುವೆ ಮಾರಾಮಾರಿ

ಚಿಕ್ಕಬಳ್ಳಾಪುರ: ನಾಮಫಲಕ ವಿಚಾರ - ಎರಡು ಗುಂಪುಗಳ ನಡುವೆ ಮಾರಾಮಾರಿ

ಚಿಕ್ಕಬಳ್ಳಾಪುರ: ನಾಮಫಲಕವನ್ನು ಹಾಲಿನ ಡೈರಿ ಪಕ್ಕದಲ್ಲಿ ಅಳವಡಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಟಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಶಿವಪ್ಪ ಎಂಬುವವರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?: ನಮ್ಮ ಜಾತಿಯ ಯುವಕರೆಲ್ಲರೂ ಸೇರಿ ಟಿ ಹೊಸೂರು ಗ್ರಾಮದ ಹಾಲಿನ ಡೈರಿ ಪಕ್ಕದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸಲು ನಿರ್ಧರಿಸಿದ್ದರು. ಆದರೆ, ನಾಮಫಲಕ ಅನ್ನು ಹಾಲಿನ ಡೈರಿ ಪಕ್ಕದಲ್ಲಿ ಅಳವಡಿಸಬಾರದು ಎಂದು ಗ್ರಾಮದ ಬೇರೆ ಜಾತಿಯವರು ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ನಾವು ಅಂಬೇಡ್ಕರ್ ನಾಮಫಲಕ ಅಳವಡಿಸಿಲು ಸ್ಥಳ ಗುರುತಿಸಿಟ್ಟು, ನಮ್ಮ ಕಾಲೋನಿಯಲ್ಲಿ ನಾಮಫಲಕ ಉದ್ಘಾಟನೆ ಮಾಡಲು ಗ್ರಾಮ ಪಂಚಾಯಿತಿಗೆ ಮನವಿ ಪತ್ರ ನಿಡಿದ್ದೆವು ಎಂದು ಉಲ್ಲೇಖಿಸಿದ್ದಾರೆ.

ಇಂದು ಸಂಜೆ ನಾಮಫಲಕ ವಿಚಾರವಾಗಿ ನಮ್ಮೊಂದಿಗೆ ಮನಸ್ತಾಪ ಹೊಂದಿದ್ದ ಬೇರೆ ಜಾತಿಯ ಯುವಕರ ಗುಂಪು ನಮ್ಮ ಜಾತಿಯ ಯುವಕರ ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹಾಡಿನ ಸೌಂಡ್ ಜಾಸ್ತಿ ಇಟ್ಟಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ: ಮೂವರ ಬಂಧನ

ಆಟದ ಮೈದಾನದಲ್ಲೇ ತೆಲುಗು ನಟರ ಅಭಿಮಾನಿಗಳ ಮಾರಾಮಾರಿ (ಬೆಂಗಳೂರು): ಇತ್ತೀಚಿಗೆ, ಕ್ರಿಕೆಟ್ ಆಡುತ್ತಿದ್ದ ಮೈದಾನದಲ್ಲಿ ಫಾನ್ಸ್ ವಾರ್ ನಡೆದಿತ್ತು. ನಟನನ್ನ ಹೀಯಾಳಿಸಿದ ಎಂಬ ಆರೋಪದಡಿ ಯುವಕನ ಮೇಲೆ ಮತ್ತೋರ್ವ ನಟನ ಅಭಿಮಾನಿಗಳ ಗುಂಪು ಮನ ಬಂದಂತೆ ಹಲ್ಲೆ ಮಾಡಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿಯ ಆಟದ ಮೈದಾನದಲ್ಲಿ ನಡೆದಿತ್ತು. ಯುವಕನ ಮೇಲೆ ಆರೇಳು ಮಂದಿ ಗುಂಪು ಹಲ್ಲೆ ಮಾಡುತ್ತಿದ್ದು, ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು ನಗರ ಪೊಲೀಸರ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಗೆ ಟ್ಯಾಗ್​ ಮಾಡಿದ್ದರು. ಈ ಬಗ್ಗೆ ಕೆ.ಆರ್.ಪುರ‌ ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ ಪೋಸ್ಟ್ ಮಾಡಿದ ಮಾಹಿತಿ ಆಧರಿಸಿ ಕ್ರಮ ಕೈಗೊಂಡಿದ್ದರು.

ಮೇಡಹಳ್ಳಿ ಸಮೀಪದ‌ ಆಟದ ಮೈದಾನವೊಂದರಲ್ಲಿ ಕ್ರಿಕೆಟ್ ಆಡುವಾಗ ತೆಲುಗು ನಟನ ಅಭಿಮಾನಿಗಳಿಗೂ ಹಾಗೂ ಮತ್ತೊಬ್ಬ ತೆಲುಗು ನಟ ಅಭಿಮಾನಿಗೂ ಫಾನ್ಸ್ ವಾರ್​ ಆಗಿತ್ತು. ನೋಡು ನೋಡುತ್ತಿದ್ದಂತೆ ಯುವಕನ ಮೇಲೆ ಆರೇಳು ಜನರ ಗುಂಪೊಂದು ಕೈಯಿಂದ ಹೊಡೆದು ಹಲ್ಲೆ ಮಾಡಿತ್ತು.‌ ಯುವಕನಿಗೆ ಹೊಡೆಯುವುದು, ಬೆದರಿಸಿರುವುದು ಮತ್ತು ಆ ನಟನಿಗೆ ಜೈಕಾರ ಹಾಕುವುದು ವಿಡಿಯೋದಲ್ಲಿ ಸೆರೆಯಾಗಿತ್ತು.

Last Updated :Mar 18, 2024, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.