ETV Bharat / state

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ: ಲೋಕೋಪಯೋಗಿ ಇಇ ಹೆಚ್ ಆರ್ ಹರ್ಷ ಅಮಾನತು - LOKAYUKTA RAID

author img

By ETV Bharat Karnataka Team

Published : Mar 27, 2024, 4:53 PM IST

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ‌‌ ಹಿನ್ನೆಲೆ ಮಂಡ್ಯ ಲೋಕೋಪಯೋಗಿ‌ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಹೆಚ್ ಆರ್ ಹರ್ಷ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

Public Works Dept EE HR Harsha
ಲೋಕೋಪಯೋಗಿ ಇಇ ಹೆಚ್ ಆರ್ ಹರ್ಷ

ಮಂಡ್ಯ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪ‌‌ ಹೊತ್ತಿರುವ ಮಂಡ್ಯ ಲೋಕೋಪಯೋಗಿ‌ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಹೆಚ್ ಆರ್ ಹರ್ಷ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.

ಈ ಕುರಿತು ಮಾ.26ರಂದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುರುಳೀಧರ ಎಸ್. ತಳ್ಳಿಕೇರಿ ಅವರು ನೀಡಿದ ಆದೇಶದಲ್ಲಿ ಲೋಕಾಯುಕ್ತ ಪೊಲೀಸರು ಕಳೆದ ಜ.30ರಂದು ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಯ ಪ್ರಾಥಮಿಕ‌ ವರದಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಸಾಬೀತಾಗಿದೆ ಎಂದಿದ್ದಾರೆ.

ಅಧಿಕಾರಿ ಹೆಚ್.ಆರ್. ಹರ್ಷ ಅವರು ಪರಿಶೀಲನಾ ಅವಧಿಯಲ್ಲಿ ₹ 1.40 ಕೋಟಿ ಆದಾಯ ಹೊಂದಿ ₹ 1,25,50,336 ಖರ್ಚು ಹೊಂದಿ ₹ 14,49,664 ಉಳಿತಾಯ‌‌ ಹೊಂದಿರುತ್ತಾರೆ. ಆದರೆ ತನಿಖೆ ವೇಳೆ ₹ 3,32,87,997 ಆಸ್ತಿಯಲ್ಲಿ ₹ 3,18,38,333 ಅಂದರೆ ಆದಾಯಕ್ಕಿಂತ ಶೇ.227.416ರಷ್ಟು ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ವಿವರಿಸಿದ್ದಾರೆ.

ಈ ಹಿನ್ನೆಲೆ ಲೋಕಾಯುಕ್ತ ತನಿಖೆ‌ ಹಿನ್ನೆಲೆ ಅಧಿಕಾರಿ ಹೆಚ್.ಆರ್. ಹರ್ಷ ಅವರನ್ನು ವಿಚಾರಣೆ ಬಾಕಿ ಇರಿಸಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 13(1)(ಬಿ) ರಡಿ ಕ್ರಿಮಿನಲ್ ಮೊಕದ್ದಮೆ/ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10(1) (ಎಎ)ರನ್ವಯ ತಕ್ಷಣ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಪ್ರಭಾರ ಹುದ್ದೆಗೆ ಕಲಬುರಗಿ ಸಂಪಕಂ ಮತ್ತು ಕಟ್ಟಡಗಳು(ಈಶಾನ್ಯ) ಅವರಿಗೆ ವಹಿಸಲಾಗಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಮೈಸೂರು ಜೈಲಿನಲ್ಲಿ ತೀವ್ರ ತಪಾಸಣೆ - Lok Sabha Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.