ETV Bharat / sports

ಐಪಿಎಲ್​: ರಾಜಸ್ಥಾನ ರಾಯಲ್ಸ್​ ಪರ ಅತಿ ಹೆಚ್ಚು ಫಿಫ್ಟಿ ಪ್ಲಸ್ ಸ್ಕೋರ್‌; ಬಟ್ಲರ್​ ಹಿಂದಿಕ್ಕಿದ ಸಂಜು ಸ್ಯಾಮ್ಸನ್ - IPL 2024

author img

By ETV Bharat Karnataka Team

Published : Apr 11, 2024, 6:45 AM IST

Updated : Apr 11, 2024, 7:07 AM IST

ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್

ರಾಜಸ್ಥಾನ ರಾಯಲ್ಸ್​ ತಂಡ ಪರ ಸಂಜು ಸ್ಯಾಮ್ಸನ್ ಅತಿ ಹೆಚ್ಚು ಫಿಫ್ಟಿ ಪ್ಲಸ್ ಸ್ಕೋರ್‌ ಮಾಡಿರುವ ಆಟಗಾರನಾಗಿದ್ದಾರೆ.

ಜೈಪುರ (ರಾಜಸ್ಥಾನ) : ಬುಧವಾರ ಗುಜರಾತ್​ ಟೈಟನ್ಸ್​ ವಿರುದ್ಧ ಅಬ್ಬರದ ಬ್ಯಾಟಿಂಗ್​ ಮಾಡಿದ ರಾಜಸ್ಥಾನ ರಾಯಲ್ಸ್​ ತಂಡದ ನಾಯಕ ಸಂಜು ಸ್ಯಾಮ್ಸನ್ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.

ರಾಜಸ್ಥಾನ ರಾಯಲ್ಸ್​ ಪರ ಈವರೆಗೆ ಅತಿ ಹೆಚ್ಚು ಫಿಫ್ಟಿ ಪ್ಲಸ್ ಸ್ಕೋರ್‌ ದಾಖಲಿಸಿರುವ ಆಟಗಾರ ಎಂಬ ಹೆಗ್ಗಳಿಕೆ ಸಂಜು ಸಾಮ್ಸನ್​ ಪಾತ್ರರಾಗಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ತಮ್ಮ ಉತ್ತಮ ಆಟ ಮುಂದುವರೆಸಿರುವ ಸಂಜು ಸಾಮ್ಸನ್​, ಆಂಗ್ಲ ಬ್ಯಾಟರ್​ ಜೋಸ್​ ಬಟ್ಲರ್​​ ಅವರನ್ನು ಹಿಂದಿಕ್ಕಿದ್ದಾರೆ. ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಎದುರು ಸಂಜು ಕೇವಲ 38 ಎಸೆತಗಳಲ್ಲಿ ಏಳು ಬೌಂಡರಿ ಮತ್ತು 2 ಭರ್ಜರಿ ಹೊಡೆದು 68* ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಒಂದು ಇನ್ನಿಂಗ್ಸ್​ನಿಂದ ಸಂಜು ಹೊಸ ಮೈಲಿಗಲ್ಲು ತಲುಪಲು ಸಾಧ್ಯವಾಯಿತು.

ಇದುವರೆಗೆ ರಾಜಸ್ಥಾನ ಪರ 131 ಪಂದ್ಯಗಳನ್ನು ಆಡಿರುವ ಸಂಜು 31.45 ಸರಾಸರಿಯಲ್ಲಿ ಮತ್ತು 139.86 ಸ್ಟ್ರೈಕ್ ರೇಟ್‌ನಲ್ಲಿ 3 ಶತಕ ಮತ್ತು 23 ಅರ್ಧಶತಕಗಳೊಂದಿಗೆ 3,649 ರನ್ ಗಳಿಸಿದ್ದಾರೆ. ಈ ಅಂಕಿ - ಅಂಶಗಳನ್ನು ಪರಿಗಣಿಸಿದಾಗ ಫಿಫ್ಟಿ ಪ್ಲಸ್ ಸ್ಕೋರ್‌ ದಾಖಲಿಸಿರುವ ಪಟ್ಟಿಯಲ್ಲಿ ಸಂಜು ಮೊದಲಿಗರಾಗಿದ್ದಾರೆ. ಮತ್ತೊಂದೆಡೆ, ಬಟ್ಲರ್ ಆರ್​ಆರ್​ ಗಾಗಿ 25 ಫಿಫ್ಟಿ ಪ್ಲಸ್​ ಸ್ಕೋರ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಆರು ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ. ಹಾಗಾಗಿ ನಂತರ ಎರಡನೇ ಸ್ಥಾನದಲ್ಲಿ ಬಟ್ಲರ್​ ಮುಂದುವರೆಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಸಂಜು ಐದು ಪಂದ್ಯಗಳಿಂದ 246 ರನ್ ಗಳಿಸಿದ್ದು, ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿ ಐದು ಪಂದ್ಯಗಳಲ್ಲಿ 105.33 ಸರಾಸರಿಯಲ್ಲಿ 316 ರನ್ ಕಲೆಹಾಕಿದ್ದು, ಅಗ್ರಸ್ಥಾನದಲ್ಲಿದ್ದಾರೆ. ಒಂದು ಶತಕ ಮತ್ತು ಮೂರು ಅರ್ಧಶತಕಗಳು ಕೊಹ್ಲಿ ಹೆಸರಿನಲ್ಲಿವೆ. ಅತ್ಯುತ್ತಮ ಸ್ಕೋರ್ ಔಟಗಾದೇ 113*.

ಇದನ್ನೂ ಓದಿ : 'ಬ್ಯಾಟಿಂಗ್​, ಫೀಲ್ಡಿಂಗ್​ ಎರಡರಲ್ಲೂ ಅದ್ಭುತ': ನಿತೀಶ್​​​ ರೆಡ್ಡಿ ಆಟಕ್ಕೆ ಪ್ಯಾಟ್ ಕಮಿನ್ಸ್ ಶ್ಲಾಘನೆ - Nitish Reddy

Last Updated :Apr 11, 2024, 7:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.